ಉಡುಪಿಯಲ್ಲಿ ಮತ್ತೆ 2 ಪಾಸಿಟಿವ್, ಒಟ್ಟು 3 ಜನಕ್ಕೆ ಕೊರೊನಾ
ಉಡುಪಿ, ಮಾರ್ಚ್ 30: ಉಡುಪಿ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಉಡುಪಿ ಡಿಎಚ್ಒ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದ್ದಾರೆ.
Recommended Video
ಶಿವಮೊಗ್ಗ ಪ್ರಯೋಗಾಲಯದಿಂದ ಬಂದ ವೈದ್ಯಕೀಯ ವರದಿಯು ಡಿಎಚ್ಒ ಕೈ ಸೇರಿದ್ದು, ಅದರಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಹೀಗಾಗಿ ಉಡುಪಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿದೆ.
ಕೇಸ್ 1
ದುಬೈನಿಂದ ಬಂದಿರುವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಮಣಿಪುರ ಗ್ರಾಮದ ಯುವಕ

ಮಾರ್ಚ್ 17 ಕ್ಕೆ ಉಡುಪಿಗೆ ಬಂದಿದ್ದಾನೆ. 35 ವರ್ಷದ ಈ ವ್ಯಕ್ತಿಯು ಮಾರ್ಚ್ 27 ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಕೆಮ್ಮು, ಶೀತ, ನೆಗಡಿ ಲಕ್ಷಣಗಳು ಕಾಣಿಸಿಕೊಂಡಿವೆ.
ಕೇಸ್ 2
ಕೇರಳಕ್ಕೆ ತೆರಳಿದ್ದ ಯುವಕನಿಗೆ ಕೊರೊನಾ ಸೋಂಕು ತಗುಲಿದೆ. ವಿದೇಶ ಪ್ರಯಾಣ ಹಿನ್ನೆಲೆ ಈ ವ್ಯಕ್ತಿಗೆ ಇಲ್ಲ. ಎಲೆಕ್ಟ್ರಿಕಲ್ ಕೆಲಸಕ್ಕೆಂದು ಕೇರಳಕ್ಕೆ 29 ವಯಸ್ಸಿನ ಯುವಕ ತೆರಳಿದ್ದನು.
ಒಟ್ಟು 31 ಜನ ಎಲೆಕ್ಟ್ರಿಷಿಯನ್ ಗಳು ಇದ್ದ ತಂಡ ಇದಾಗಿದ್ದು, ಮಾರ್ಚ್ 26 ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜ್ವರ, ಶೀತದಿಂದ ಯುವಕ ಬಳಲುತ್ತಿದ್ದನು ಎಂದು ಡಿಎಚ್ಒ ಡಾ. ಸುಧೀರ್ ಚಂದ್ರಸೂಡ ಮಾಹಿತಿ ನೀಡಿದರು.












Click it and Unblock the Notifications