ಪರಸ್ತ್ರೀ ಸಹವಾಸ ಮಾಡಿದ ಬೆಳಪು ಮಸೀದಿ ಮೌಲ್ವಿಗೆ ಸಮಾ ಏಟು

Posted By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ನವೆಂಬರ್ 4 : ಮೌಲ್ವಿಯೊಬ್ಬನ ಕಾಮ ಪ್ರಸಂಗ ಉಡುಪಿಯಲ್ಲಿ ಬಯಲಾಗಿದೆ. ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಮೌಲ್ವಿ ಪರಸ್ತ್ರೀ ಸಂಗ ಬೆಳೆಸಲು ಹೋಗಿ ಊರ ಮಂದಿಯಿಂದ ತದುಕಿಸಿಕೊಂಡ ಘಟನೆ ನಡೆದಿದೆ. ಜಮಾತ್ ನವರೇ ಸೇರಿ ಈಗ ಮೌಲ್ವಿಯ ಸ್ತ್ರೀ ವ್ಯಾಮೋಹದ ಚಳಿ ಬಿಡಿಸಿದ್ದಾರೆ.

ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ

ಜಮಾತ್ ಬಾಂಧವರು ಸೇರಿ ಮೌಲ್ವಿಗೆ ತದುಕಿ ಪಾಠ ಮಾಡಿದ ವಿಡಿಯೋ ತುಣುಕು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಡುಪಿಯ ಕಾಪುವಿನ ಬೆಳಪು ಎಂಬಲ್ಲಿಯ ಮಸೀದಿಯಲ್ಲಿ ಈ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದಷ್ಟೇ ಬೆಳಪು ಮಸೀದಿಗೆ ಮುಖ್ಯ ಧರ್ಮಗುರು (ಖತೀಬ್) ಆಗಿ ಸೇರಿಕೊಂಡಿದ್ದ ಈತ ಬೆಳಪುವಿನ ವಿವಾಹಿತ ಮಹಿಳೆಯೊಬ್ಬರ ಜೊತೆ ಸಖ್ಯ ಬೆಳೆಸಿದ್ದ.

Illicit relationship, moulvi beaten by people

ಧಾರ್ಮಿಕ ವಿಚಾರ ಹೇಳುತ್ತಲೇ ಆಕೆಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ವೊಂದಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ. ಆ ಮಹಿಳೆಯ ಸಂಬಂಧಿಕರೊಬ್ಬರು ಇವರಿಬ್ಬರನ್ನು ಕಂಡಿದ್ದು, ತಕ್ಷಣ ಬೆಳಪು ಮಸೀದಿಯ ಆಡಳಿತ ಮಂಡಳಿಯವರಿಗೆ ತಿಳಿಸಿದ್ದಾರೆ.

Illicit relationship, moulvi beaten by people

ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು, ಹೇರ್ ಸ್ಟ್ರೈಟ್ ನಿಂಗ್ ಮಾಡಬಾರದು ಎಂದು ಉಪದೇಶ ಮಾಡುವ ನಿಮಗೆ ಪರಸ್ತ್ರೀ ಜೊತೆ ಕಾಮದಾಟ ನಡೆಸಲು ನಾಚಿಕೆಯಾಗೋದಿಲ್ವೇ ಅಂತ ಪ್ರಶ್ನಿಸಿ ಜಮಾತ್ ಬಾಂಧವರು ಮೌಲ್ವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಬೆಳಪು ಮಸೀದಿಯಿಂದ ಮೌಲ್ವಿಯನ್ನು ಹೊರದಬ್ಬಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moulvi Illicit relationship with married woman disclosed and beaten by people in Belapu, Kapu in Udupi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ