ಉಡುಪಿಯಲ್ಲಿ ಏಪ್ರಿಲ್ ಅಂತ್ಯಕ್ಕೆ ಮೋಜಿನ ಹೆಲಿಕಾಪ್ಟರ್ ಹಾರಾಟ ಆರಂಭ
ಉಡುಪಿ, ಏಪ್ರಿಲ್ 4: ಕಳೆದ ವರ್ಷ ಪ್ರವಾಸಿಗರಿಗೆ ಖುಷಿ ಕೊಟ್ಟ ಹೆಲಿಕಾಪ್ಟರ್ ಮೋಜಿನ ಹಾರಾಟ ಈ ತಿಂಗಳಾಂತ್ಯದಲ್ಲಿ ಮತ್ತೆ ಆರಂಭಗೊಳ್ಳಲಿದೆ. ಕಳೆದ ವರ್ಷ ಜಿಲ್ಲಾಡಳಿತ ಸಹಭಾಗಿತ್ವದೊಂದಿಗೆ ಚಿಪ್ಸನ್ ಏವಿಯೇಶನ್, ಹೆಲಿಕಾಪ್ಟರ್ ಮೋಜಿನ ಹಾರಾಟವನ್ನು ಉಡುಪಿಯಲ್ಲಿ ಫೆಬ್ರವರಿ ಮತ್ತು ಏಪ್ರಿಲ್-ಮೇನಲ್ಲಿ ನಡೆಸಿತ್ತು. ಬಳಿಕ ಇದನ್ನು ಸ್ಥಗಿತಗೊಳಿಸಲಾಗಿತ್ತು.
ಈ ವರ್ಷ ಮತ್ತೆ ಹಾರಾಟ ನಡೆಸಲು ಸಿದ್ಧತೆ ನಡೆಸಲಾಗಿದೆ. ಆದಿ ಉಡುಪಿಯ ಎನ್ ಸಿಸಿ ಮೈದಾನದಲ್ಲಿರುವ ಹೆಲಿಪ್ಯಾಡಿನಲ್ಲಿ ಹಾರಾಟ ನಡೆಸುವುದಕ್ಕೆ ನಿರ್ಧರಿಸಲಾಗಿದ್ದು, ಕ್ಲಿಯರೆನ್ಸ್ ಇನ್ನಷ್ಟೇ ಸಿಗಬೇಕಾಗಿದೆ. ಹೆಲಿಕಾಪ್ಟರ್ ಸವಾರಿಗೆ ಜಿಲ್ಲಾಡಳಿತದಿಂದ ಈಗಾಗಲೇ ಅನುಮತಿ ಕೇಳಿದ್ದೇವೆ. ಏಪ್ರಿಲ್ 28ರಿಂದ ಮೇ 1ರವರೆಗೆ ಈ ಪ್ರವಾಸಿ ಹಾರಾಟವನ್ನು ಪ್ರತಿ ವಾರಾಂತ್ಯದಲ್ಲಿ ನಡೆಸಲಿದ್ದೇವೆ ಎಂದು ರೈಡ್ ಆಯೋಜಕ ಸುದೇಶ್ ಶೆಟ್ಟಿ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.[ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್]

ಕಳೆದ ವರ್ಷ ಸುಮಾರು 2000 ಮಂದಿ ಈ ಹಾರಾಟದ ಹರ್ಷವನ್ನು ಅನುಭವಿಸಿದ್ದರು. ಉಡುಪಿ ಮತ್ತು ಕುಂದಾಪುರದಲ್ಲಿ ಈ ಹಾರಾಟವನ್ನು ನಡೆಸಲಾಗಿತ್ತು. ಒಬ್ಬರಿಗೆ 10 ನಿಮಿಷಗಳ ಹಾರಾಟಕ್ಕೆ 2500 ರುಪಾಯಿ ಮತ್ತು 13 ನಿಮಿಷಗಳ ಹಾರಾಟಕ್ಕೆ 3,200 ರುಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿತ್ತು.












Click it and Unblock the Notifications