ಜೆಸಿಬಿಯಲ್ಲಿ ಮೆರವಣಿಗೆ, ಮಂಟಪದಲ್ಲೇ ಕೋಳಿ ಅಂಕ : ಉಡುಪಿಯಲ್ಲೊಂದು ವಿಭಿನ್ನ ಮದುವೆ

ಉಡುಪಿ, ಡಿಸೆಂಬರ್‌ 12: ಮದುವೆ ವಿಭಿನ್ನವಾಗಿ ಆಗಬೇಕು ಎನ್ನುವುದು ಎಲ್ಲರ ಆಸೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಭಿನ್ನ ಮದುವೆಯನ್ನು ಕಾಣಬಹುದು. ಸಾಮಾನ್ಯ ಶಾಸ್ತ್ರಗಳನ್ನು ಹೊರತು ಪಡಿಸಿ ನಾಲ್ಕು ಜನ ತಿರುಗಿ ನೋಡುವಂತೆ ಮದುವೆ ನಡೆಯಬೇಕು ಎನ್ನುವುದು ಕೆಲವರ ಆಸೆಯಾಗಿರುತ್ತದೆ. ಹೀಗಾಗಿ ವಿಭಿನ್ನವಾಗಿ ಏನಾದರೂ ಅವರು ಪ್ರಯತ್ನ ಮಾಡುತ್ತಾರೆ.

ಹಲವರು ಅವರವರ ಪರಿಸ್ಥಿರಿ ಅನುಗುಣವಾಗಿ ವಿಭಿನ್ನವಾಗಿ ವೈಭವಯುತವಾಗಿ ಮದುವೆ ಮಾಡಿಕೊಂಡರೆ ಉಡುಪಿಯ ಬ್ರಹ್ಮಾವರ ಜೋಡಿಯೊಂದು ಅತ್ಯಂತ ವಿಭಿನ್ನವಾಗಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭದಲ್ಲಿ ಎಲ್ಲಾ ಮದುವೆಗಳಿಂದ ವಿಭಿನ್ನವಾಗಿ ನಡೆದಿದೆ. ಇದೆಲ್ಲಾ ಸ್ನೇಹಿತರ ಕಿತಾಪತಿಯಿಂದಾದ ಸಂಭ್ರಮ ಎನ್ನಲಾಗಿದೆ.

Groom And Bride Comes In JCB Udupi Different Marriage Video Viral

ಗೆಳೆಯನ ಮದುವೆಯನ್ನು ವಿಭಿನ್ನವಾಗಿ ಮಾಡಬೇಕೆಂದು ಮಿಥುನ್ ಸ್ನೇಹಿತರೇ ಆ ಪರಿಸರಕ್ಕೆ ಹೊಸದಾದ ಕೆಲವು ಪರಿಕಲ್ಪನೆಯನ್ನು ಅನಾವರಣ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆ ಹಾಲ್‌ಗೆ ವಧು-ವರರನ್ನು ಕಾರ್‌ನಲ್ಲಿ ಕರೆತರುತ್ತಾರೆ. ಆದರೆ ಮಿಥುನ್ ಮತ್ತು ಪೂಜಾ ಜೋಡಿ ಬಂದಿದ್ದು ಜೆಸಿಬಿಯಲ್ಲಿ. ಜೆಸಿಬಿಯ ಮುಂದಿನ ಕೊಕ್ಕೆಯಲ್ಲಿ ಕುಳ್ಳಿರಿಸಿ ಜೋಡಿಯನ್ನು ಮದುವೆ ಹಾಲ್‌ನತ್ತ ಕರೆ ತರಲಾಗಿದೆ.

ಜೆಸಿಬಿಯಲ್ಲಿ ವಧು-ವರ ಮೆರವಣಿಗೆ

ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಮದುವೆಗೆ ಬಂದಿದ್ದ ಎಲ್ಲರ ಮೊಗದಲ್ಲಿ ನಗು ತಂದಿದೆ. ಮದುವೆಗೆ ಜೆಸಿಬಿ ಬಳಸಿದ್ದೇ ವಿಭಿನ್ನವಾಗಿದೆ ಎಂದು ಮದುವೆಗೆ ಬಂದವರು ಮಾತನಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ವಿಭಿನ್ನವಾದ ಘಟನೆ ಮಿಥುನ್ ಮತ್ತು ಪೂಜಾ ಜೋಡಿ ಮದುವೆಯಲ್ಲಿ ನಡೆದಿದೆ.

Groom And Bride Comes In JCB Udupi Different Marriage Video Viral

ಮದುವೆ ಮಂಟಪದಲ್ಲೇ ವಧು-ವರರ ಕೋಳಿ ಅಂಕ

ಇನ್ನು ಮದುವೆ ಶಾಸ್ತ್ರಗಳು ಮಗಿಯುತ್ತಿದ್ದಂತೆ ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಮದುವೆ ಮಂಟಪದಲ್ಲೇ ಕಾಳಗ ಮಾಡಿಸಿದ್ದಾರೆ. ವಧು ಕಡೆಯಿಂದ ಒಂದು ಕೋಳಿಯನ್ನು ಹಾಗೂ ವರನ ಕಡೆಯಿಂದ ಒಂದು ಕೋಳಿಯನ್ನು ಮದುವೆ ಮಂಟಪದಲ್ಲೇ ಕೋಳಿ ಅಂಕಣಕ್ಕೆ ಇಳಿಸಲಾಗಿದೆ. ವರ ಮಿಥುನ್‌ಗೆ ಕೋಳಿ ಅಂಕಕ್ಕೆ ಹೋಗುವ ಹವ್ಯಾಸವಿದ್ದು, ಅದಕ್ಕಾಗಿ ಗೆಳೆಯರು ಈ ಅಚ್ಚರಿ ಕೊಟ್ಟಿದ್ದಾರೆ. ಸದ್ಯ ಬ್ರಹ್ಮಾವರದ ಈ ವಿಭಿನ್ನ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಡಿಫರೆಂಟ್‌ ಮದುವೆಯ ಬಗ್ಗೆ ಜನರು ಪರ ವಿರೋಧದ ಚರ್ಚೆಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+