ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿವಾ ಮಿಸ್ ದಿವಾಗೆ ಹುಟ್ಟೂರು ಉಡುಪಿಯಲ್ಲಿ ಭರ್ಜರಿ ಸ್ವಾಗತ

ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಹುಟ್ಟೂರು ಉಡುಪಿಗೆ ಆಗಮಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಆಡ್ಲಿನ್ ಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 02: ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಹುಟ್ಟೂರು ಉಡುಪಿಗೆ ಆಗಮಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಆಡ್ಲಿನ್ ಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ ಆಡ್ಲಿನ್, ಕುಟುಂಬಸ್ಥರ ಜೊತೆ ಸಂತೋಷದಿಂದ ಬೆರೆತರು. ಈ ವೇಳೆ ದೊಡ್ಡಪ್ಪನ ಮನೆಯಲ್ಲಿ ಆಯ್ದ ಕುಟುಂಬಸ್ಥರಿಂದ ವಿಶೇಷ ಪ್ರಾರ್ಥನೆ ನಡೆಯಿತು.

grand-welcome-to-liva-miss-diva-in-home-town

ನೆರೆಕೆರೆಯ ಹಿಂದೂಗಳು ಆಗಮಿಸಿ ಆರತಿ ಎತ್ತಿ, ದೃಷ್ಠಿ ತೆಗೆದದ್ದು ವಿಶೇಷವಾಗಿತ್ತು. ಸುಮಂಗಲಿಯರು ಸೇರಿ ಲಿವಾ ಮಿಸ್ ದಿವಾಗೆ ಮಲ್ಲಿಗೆ ಹೂವು ಕೊಟ್ಟು ಆಶೀರ್ವಾದ ಮಾಡಿದರು.

ಕುಂದಾಪುರದಲ್ಲಿ ಕುಂದಾಪುರದಲ್ಲಿ "ಪಾಕಿಸ್ತಾನ್ ಜಿಂದಾಬಾದ್'; ದೇಶದ್ರೋಹ ಪ್ರಕರಣ ದಾಖಲು

ಉದ್ಯಾವರ ಚರ್ಚ್ ವ್ಯಾಪ್ತಿಯ ಐಸಿವೈಎಂ ಸಂಘಟನೆ ಆಡ್ಲಿನ್ ಕ್ಯಾಸ್ಟಲಿನೋ ಅವರನ್ನು ತೆರೆದ ಜೀಪ್ ನಲ್ಲಿ ಮೆರವಣಿಗೆ ಮಾಡಿತು. ಸುಮಾರು ಮೂರು ಕಿಲೋಮೀಟರ್ ಮೆರವಣಿಗೆ ಉದ್ದಕ್ಕೂ ಆಡ್ಲಿನ್ ಪರಿಚಯಸ್ತರು, ಸಂಬಂಧಿಕರತ್ತ ಕೈ ಬೀಸಿದರು.

grand-welcome-to-liva-miss-diva-in-home-town

ಕಂಬಳದ ಕೋಣ, ಕರಾವಳಿ ಚೆಂಡೆ, ರಂಗಿನ ಕೊಡೆ ಹಿಡಿದು ಚರ್ಚ್ ವರೆಗೆ ಮೆರವಣಿಗೆ ಮಾಡಲಾಯಿತು. ಆಡ್ಲಿನ್ ನೋಡಲು ಸುತ್ತಮುತ್ತಲ ಊರಿನ ಯುವಜನತೆ ಮುಗಿಬಿದ್ದರು.

English summary
Adlina Castalino who won the Liva Miss Diva -2020, has arrived in Udupi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X