ಉಡುಪಿ: ಪಿಎಫ್ಐ ಕಾರ್ಯಕರ್ತರಿಂದ ಮೃತ ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರ
ಉಡುಪಿ, ಜುಲೈ 12: ಉಡುಪಿಯಲ್ಲಿ ಇಂದು ಮೃತಪಟ್ಟ ಕೊರೊನಾ ವೈರಸ್ ಸೋಂಕಿತನ ಅಂತ್ಯಸಂಸ್ಕಾರವನ್ನು ಪಿಎಫ್ಐ ಕಾರ್ಯಕರ್ತರು ನೆರವೇರಿಸಿದರು.
ದಾವಣಗೆರೆ ಮೂಲದ ವೃದ್ಧ ಶುಕ್ರವಾರ ಮೃತಪಟ್ಟಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದರು. ಬಳಿಕ ಕೊರೊನಾ ವೈರಸ್ ಸೋಂಕು ಇರುವುದು ದೃಢಗೊಂಡಿತ್ತು.

ಉಡುಪಿ ನಗರದ ಖಬರಸ್ತಾನದಲ್ಲಿ ಹತ್ತು ಮಂದಿ ಪಿಎಫ್ಐ ಯುವಕರು ಗೌರವಯುತವಾಗಿ ದಫನ್ ಕಾರ್ಯ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಆರೋಗ್ಯ ಇಲಾಖೆಯ ಪ್ರೊಟೋಕಾಲ್ ಪ್ರಕಾರ ಪಿಪಿಇ ಕಿಟ್ ಧರಿಸಿದ ಸ್ವಯಂ ಸೇವಕರು ಶವ ದಫನಕಾರ್ಯ ನಡೆಸಿದರು.

ಅಂದಹಾಗೆ ಈ ಪಿಎಫ್ಐ ಯುವಕರಿಗೆ ಜಿಲ್ಲಾ ಆರೋಗ್ಯ ಇಲಾಖೆ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ನಡೆಸುವ ತರಬೇತಿಯನ್ನೂ ನೀಡಲಾಗಿತ್ತು.












Click it and Unblock the Notifications