ಉಡುಪಿ ಕಾಲೇಜಿನ ವಿಡಿಯೋ ಕೇಸ್‌: ಮೂವರು ವಿದ್ಯಾರ್ಥಿನಿಯರ ವಿರುದ್ಧ FIR

ಉಡುಪಿ, ಜುಲೈ 26: ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಮಲ್ಪೆ ಪೋಲಿಸರು ಸುಮೋಟೋ ಕೇಸ್‌ ದಾಖಲಿಸಿದ್ದಾರೆ.

ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ, ಅರಿವಿಗೆ ಬಾರದಂತೆ ವಿಡಿಯೋ ಮಾಡುವ ಕೃತ್ಯ, ಜೊತೆಗೆ ದಾಖಲೆ ನಾಶ ವಿಚಾರ, ಸಾಕ್ಷ್ಯ ನಾಶ, ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು ಹಾಗೂ ಸಾಮೂಹಿಕವಾಗಿ ಮಾಡಿರುವ ಕೃತ್ಯ ಆರೋಪಗಳ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

FIR Against Students For Capture Video Inside The College Washroom

ಈ ಬಗ್ಗೆ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ‌ ಕುಂದರ್ ಮಾತನಾಡಿದ್ದು, ಈ ವಿಚಾರವನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತಿಳಿಸಿದ್ದೇನೆ. ನಾನು ಮಾಜಿ ಆದರೂ ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇನೆ. ನಿನ್ನೆ ರಾಷ್ಟ್ರೀಯ ಮಹಿಳಾ ಆಯೋಗದವರು ದೂರು ದಾಖಲು‌ ಮಾಡಿದ್ದಾರೆ. ಇಂದು ರಾಷ್ಟ್ರೀಯ ಮಹಿಳಾ ಆಯೋಗ ಉಡುಪಿಗೆ ಆಗಮಿಸಲಿದೆ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತ ಸದಸ್ಯೆ ಖುಷ್ಬು ಸುಂದರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇದು ತಮಾಷೆಗೆ ಮಾಡಿದ ವಿಡಿಯೋ ಅಲ್ಲ, ಇದು ಅತೀ ಸೂಕ್ಷ್ಮ ‌ವಿಚಾರ. ಸಂತ್ರಸ್ತೆ ಹೆಸರು ಹೊರ ಬಾರದಂತೆ ತನಿಖೆ ನಡೆಯುತ್ತದೆ. ಇಂತಹ ಚಿತ್ರೀಕರಣ ಮೂಲಕ ಯಾವ ಮೆಸೇಜ್ ಕೊಡುತ್ತಾರೆ? ಉಡುಪಿ ಜಿಲ್ಲೆಯಲ್ಲಿ ನಡೆದಿರುವುದು ಮನಸ್ಸಿಗೆ ನೋವಾಗಿದೆ ಎಂದರು.

ಇನ್ನು ಘಟನೆ ನಡೆದ ಕೂಡಲೇ ಮೂವರನ್ನು ಕರೆದು ಪೊಲೀಸರು ವಿಚಾರಣೆ ನಡೆಸಬೇಕಿತ್ತು. ವಿದ್ಯಾರ್ಥಿನಿಯರು ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳ ಚಿತ್ರೀಕರಣ ಮಾಡಿ ಯಾವ ಸಾಧನೆ ಮಾಡಿದ್ದಾರೆ. ಸರ್ಕಾರ ಯಾಕೆ ಮೌನವಾಗಿದೆ. ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಮಹಿಳೆ. ಹೆಣ್ಣು ಮಕ್ಕಳ ರಕ್ಷಣೆಗೆ ಅವರು ಕ್ರಮ ಕೈಗೊಳ್ಳಬೇಕಿತ್ತು. ಮಹಿಳಾ‌ ಆಯೋಗ ಘಟನೆ ಗಮನಕ್ಕೆ ಬಂದ ಕೂಡಲೇ ಸುಮೋಟೋ ತೆಗೆದುಕೊಳ್ಳುತ್ತದೆ. ಫ್ಯಾಕ್ಟ್ ಫೈಂಡಿಂಗ್ ಕಮಿಟಿ ಜೊತೆ ರಾಷ್ಟ್ರೀಯ ಸದಸ್ಯೆ ಖುಷ್ಬು ಸುಂದರ್ ಇರುತ್ತಾರೆ. ವಿದ್ಯಾರ್ಥಿನಿಯರು, ಕಾಲೇಜು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಿದೆ. ಪೊಲೀಸ್ ಇಲಾಖೆ ಜೊತೆ ಮಾತನಾಡಿ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಹೇಳಿದರು.

FIR Against Students For Capture Video Inside The College Washroom

ನೇತ್ರ ಜ್ಯೋತಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ

ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿಚಾರವಾಗಿ ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜು ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಖಾಸಗಿತನಕ್ಕೆ ಧಕ್ಕೆ ಆಗುವ ವಿಡಿಯೋ ಚಿತ್ರೀಕರಣ ಆಗಿದೆ. ವಿಷಯ ತಿಳಿದು ವಿಡಿಯೋ ಡಿಲೀಟ್ ಮಾಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಇದೊಂದು ಗಂಭೀರವಾದ ಅಪರಾಧ ಕೃತ್ಯವಾಗಿದೆ. ವಿಡಿಯೋ ಮಾಡಿ ತಪ್ಪೋಪ್ಪಿಕೊಂಡಿರುವ ಬಗ್ಗೆ ಆಡಳಿತ ಮಂಡಳಿ ಹೇಳಿದೆ. ಸತ್ಯಾಸತ್ಯತೆ ಪತ್ತೆ ಹಚ್ಚುವ ಉದ್ದೇಶದಿಂದ ಮಲ್ಪೆ ಎಸ್.ಐ ಸುಷ್ಮಾ ಜಿ.ಬಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+