ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಶಿಲ್ಡ್ ಲಸಿಕೆಯಿಂದ ಪುರುಷರ ಫಲವತ್ತತೆಗೆ ಯಾವುದೇ ಧಕ್ಕೆಯಿಲ್ಲ: ಅಧ್ಯಯನ ವರದಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 16: ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿಯಿಲ್ಲ ಎಂದು ಉಡುಪಿಯ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಮಹತ್ವದ ಸಂಶೋಧನೆ ವರದಿ ಮಾಡಿದೆ.

ಕೋವಿಡ್ ವಿರುದ್ಧ ಹೋರಾಡಲು ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್‌ ಪಡೆದ ಬಳಿಕ ಪುರುಷರಲ್ಲಿ ಹಲವು ಬದಲಾವಣೆ ಆಗಿದೆ. ಹೃದಯಸ್ತಂಭನ ಜಾಸ್ತಿಯಾಗಿದೆ. ಸಕ್ಕರೆ ಖಾಯಿಲೆ ಹೆಚ್ಚಾಗಿದೆ. ವೀರ್ಯಾಣು ಶಕ್ತಿ ಕಡಿಮೆಯಾಗುತ್ತದೆ ಎಂಬೆಲ್ಲಾ ಸಂಶಯಗಳಿಗೆ ಮಣಿಪಾಲದ ವಿಶ್ವವಿದ್ಯಾಲಯ ಸಂಶೋಧನೆ ಮೂಲಕ ಉತ್ತರ ಹೇಳಿದೆ.

Essential Medicines List India:4 ಕ್ಯಾನ್ಸರ್ ಔಷಧಿಗಳನ್ನು ಒಳಗೊಂಡ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆEssential Medicines List India:4 ಕ್ಯಾನ್ಸರ್ ಔಷಧಿಗಳನ್ನು ಒಳಗೊಂಡ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ

ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಯಾಗುವುದಿಲ್ಲ ಎಂದು ಮಣಿಪಾಲದ ಕಸ್ತೂರ್‌ ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡದ ಸಂಶೋಧನೆಯಿಂದ ತಿಳಿದು ಬಂದಿದೆ. ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಸತ್ಯ ಬಹಿರಂಗವಾಗಿದ್ದು,ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಆ್ಯಂಡ್ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸಂಶೋಧನಾ ವರದಿ ಪ್ರಕಟ ಮಾಡಿದೆ.

Covishield vaccine is not effective to male fertility potential;Report from Manipal University

ಸೆಪ್ಟೆಂಬರ್ 5ರ ಸಂಚಿಕೆಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, ಈ ಬಗ್ಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಪ್ರಕಟಣೆ ಹೊರಡಿಸಿದ್ದು, " ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟ, ಸಂಖ್ಯೆ, ಚಲನೆಯ ಗುಣ, ಲೈಂಗಿಕತೆ ಯಾವುದೂ ಬದಲಾವಣೆ ಇಲ್ಲ, ವ್ಯತಿರಿಕ್ತವಾದ ಯಾವುದೇ ಪರಿಣಾಮ ಕಂಡುಬಂದಿಲ್ಲ" ಎಂದು ಪ್ರಕಟಣೆ ಹೇಳಿದೆ.

ಸಂಶೋಧನೆಗಾಗಿ 55 ಮಂದಿಯ ವೀರ್ಯವನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿತ್ತು. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿತ್ತು. ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿತ್ತು. ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಲಿಲ್ಲ. ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 55 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಪಡೆದಿದ್ದರು. ವ್ಯಾಕ್ಸಿನ್ ಪಡೆದ ನಂತರವೂ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. ಈ ಸಂಶೋಧನೆಯಿಂದ ಭಾರತದಲ್ಲಿ ಉಪಯೋಗಿಸುವ ಕೋವಿಡ್ ವ್ಯಾಕ್ಸಿನ್‌ ಸುರಕ್ಷತೆಯ ಬಗ್ಗೆ ಭರವಸೆ ಮೂಡಿದೆ. ಈ ಸಂಶೋಧನೆಯಿಂದ ವ್ಯಾಕ್ಸಿನೇಷನ್ ಬಗ್ಗೆ ಇದ್ದ ಹಲವು ಊಹಾಪೋಹ, ಆತಂಕಗಳು ದೂರವಾಗಿದೆ ಅಂತಾ ಅಧ್ಯಯನ ಮಾಡಿದ ತಂಡ ಹೇಳಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಣಿಪಾಲ ಕಸ್ತೂರ ಬಾ ಮೆಡಿಕಲ್ ಕಾಲೇಜಿನ ಜೀವಶಾಸ್ತ್ರ ವಿಭಾಗದ ಡಾ‌. ಫ್ರೊ.ಸತೀಶ್ ಅಡಿಗ, " ಕೊವಿಶೀಲ್ಡ್ ವಾಕ್ಸಿನ್ ಬಗ್ಗೆ ಹಲವು ಸಂದೇಹಗಳು ಜನರಲ್ಲಿತ್ತು. ವಾಕ್ಸಿನ್ ಪಡೆದರೆ ಮಕ್ಕಳಾಗಲ್ಲ ಅನ್ನುವ ಭಯವೂ ಜನರಲ್ಲಿತ್ತು.‌ ಈ ಸಂದೇಹ ಸುಳ್ಳು ಅನ್ನೋದಕ್ಕೆ ಯಾವುದೇ ವೈಜ್ಞಾನಿಕವಾಗಿ ಆಧಾರಗಳು ಇರಲಿಲ್ಲ. ಈ ಹಿನ್ನಲೆಯಲ್ಲಿ ನಾವು ಅಧ್ಯಯನ ಮಾಡಿದ್ದೆವು‌. ಅಧ್ಯಯನಕ್ಕೆ 55 ಗಂಡಸರ ವೀರ್ಯ ಬಳಸಲಾಗಿತ್ತು. ಎರಡು ಡೋಸ್ ಕೋವಿಶೀಲ್ಡ್ ಪಡೆದ ಜನರ ಪುರುಷರ ವೀರ್ಯಾಣು ಅಧ್ಯಯನ ಮಾಡಲಾಗಿದೆ. ಈ ವೀರ್ಯಾಣು ಅಧ್ಯಯನದಲ್ಲಿ ಬಂಜೆತನ ಆಗುವ ಯಾವುದೇ ಅಂಶ ಪತ್ತೆಯಾಗಿಲ್ಲ. ಕೊವಿಡ್ ವಾಕ್ಸಿ‌ನ್ ಪಡೆದರೆ ಯಾವುದೇ ಬಂಜೆತನದ ತೊಂದರೆ ಇಲ್ಲ," ಎಂದು ಸತೀಶ್ ಅಡಿಗ ಹೇಳಿದ್ದಾರೆ‌‌.

English summary
A team of Indian fertility researchers at Kasturba Medical College, Manipal who looked into changes in sperm quality in vaccinated individuals found that their fertility was unaffected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X