ಕೊರೊನಾ ವೈರಸ್: ಉಡುಪಿಯಲ್ಲಿ 3 ಪೊಲೀಸ್ ಠಾಣೆಗಳ ಸ್ಥಳಾಂತರ
ಉಡುಪಿ, ಮೇ 25: ಉಡುಪಿಯಲ್ಲಿ ಮೂವರು ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳನ್ನು ಸ್ಥಳಾಂತರಿಸಲಾಗಿದೆ.
Recommended Video
ಅಜೆಕಾರು, ಕಾರ್ಕಳ ಗ್ರಾಮಾಂತರ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ತಲಾ ಒಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಕೊರೊನಾ ವೈರಸ್ ಸೋಂಕು ಇರುವುದು ನಿನ್ನೆ ದೃಢಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಮೂರೂ ಠಾಣೆಗಳನ್ನು ಬಂದ್ ಮಾಡಲಾಗಿದೆ.

ಸ್ಯಾನಿಟೈಸೇಷನ್ ಸಹಿತ ಮುಂಜಾಗ್ರತಾ ಕ್ರಮಗಳನ್ನು ಮಾಡಿದ ಬಳಿಕ ಈ ಮೂರು ಠಾಣೆಗಳನ್ನು ಮತ್ತೆ ತೆರೆಯಲಾಗುತ್ತದೆ. ಈ ಪೊಲೀಸ್ ಠಾಣೆಗಳ ದೈನಂದಿನ ಕಾರ್ಯನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಅಜೆಕಾರು ಪೊಲೀಸ್ ಠಾಣೆಯು ಪಕ್ಕದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಲಿದ್ದರೆ, ಕಾರ್ಕಳ ಠಾಣೆಯನ್ನು ಪುರಸಭೆ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನು ಬ್ರಹ್ಮಾವರ ಪೊಲೀಸ್ ಠಾಣೆಯು ಈಗ ಇರುವ ಠಾಣೆಯ ಹಿಂದಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಜನರಿಗೆ ಅಗತ್ಯ ಪೊಲೀಸ್ ಸೇವೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಎಎಸ್ಪಿ ಕುಮಾರ ಚಂದ್ರ ಹೇಳಿದ್ದಾರೆ.












Click it and Unblock the Notifications