ಕಾಣೆಯಾದ ಮೀನುಗಾರರ ಪತ್ತೆಗೆ ಒತ್ತಾಯಿಸಿ ರಸ್ತೆಗಿಳಿಯಲಿದ್ದಾರೆ ಮೀನುಗಾರರು

ಉಡುಪಿ, ಜನವರಿ 04: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಏಳು ಮೀನುಗಾರರು ನಾಪತ್ತೆಯಾಗಿ 20 ದಿನ ಕಳೆದಿದೆ ಆದರೆ ಸರ್ಕಾರಗಳು ಮೀನುಗಾರರ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಮೀನುಗಾರರಲ್ಲಿ ಆಕ್ರೋಶ ಹೆಚ್ಚಿಸಿದೆ.

ನಾಪತ್ತೆಯಾಗಿರು ಮೀನುಗಾರರನ್ನು ಹುಡುಕುವಲ್ಲಿ ರಾಜ್ಯ ಹಾಗು ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಮಲ್ಪೆ ಮೀನುಗಾರರ ಸಂಘ ಜನವರಿ 6 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ನಡೆಸಲು ತೀರ್ಮಾನಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಹಾಗು ಉಡುಪಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್, ಕಣ್ಮರೆಯಾಗಿರುವ 7 ಮಂದಿ ಮೀನುಗಾರರ ಪತ್ತೆಗೆ ರಾಜ್ಯ- ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕರಾವಳಿಯ ಮೀನುಗಾರರು ಅನಾಥವಾಗಿದ್ದಾರೆ. ಸರ್ಕಾರಗಳ ನಿರ್ಲಕ್ಷತೆಯ ವಿರುದ್ಧ ಪ್ರತಿಭಟನೆಗೆ ಮೀನುಗಾರರು ನಿರ್ಧರಿಸಿದ್ದೇವೆ ಎಂದು ಹೇಳಿದರು.

Coastal fishermen associations hold protest against State and central government on January 06

ಜನವರಿ 6 ರಂದು ಪ್ರತಿಭಟನೆಯ ಅಂಗವಾಗಿ ಮಲ್ಪೆಯಿಂದ ಉಡುಪಿಯವರೆಗೆ ಪಾದಯಾತ್ರೆ ಮಾಡುತ್ತೇವೆ. 50 ಸಾವಿರ ಮಂದಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುತ್ತೇವೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರಕಾರ ತಲೆ ಕೆಡಿಸಿಕೊಡಿಲ್ಲ. ಸಿಎಂ ಹಾಗು ಉಸ್ತುವಾರಿ ಸಚಿವರು ಇತ್ತ ತಲೆಯೇ ಹಾಕಿಲ್ಲ. ಇದೇ ರೀತಿ ರೈತರಿಗೆ ಸಮಸ್ಯೆಯಾದಾಗಲೂ ಅಸಡ್ಡೆ ತೋರಿಸುತ್ತೀರಾ? ಎಂದು ಅವರು ಕಿಡಿಕಾರಿದರು.

Coastal fishermen associations hold protest against State and central government on January 06

ಈ ನಡುವೆ ಜನವರಿ 6 ರಂದು ಹಮ್ಮಿಕೊಂಡಿರು ರಾಷ್ಟ್ರೀಯ ಹೆದ್ದಾರಿ ತಡೆ ಬೆಂಬಲಿಸಿ ಮಂಗಳೂರು ಬಂದರಿನಲ್ಲಿ ನಡೆಯುವ ಎಲ್ಲಾ ಮೀನುಗಾರಿಕಾ ಚಟುವಟಿಕೆ ಬಂದ್ ಮಾಡಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+