ಅಜ್ಜನ ನೆನಪಿಗಾಗಿ ಕೈಯ್ಯಾರೆ ಅಜ್ಜನ ಮೂರ್ತಿ ಮಾಡಿದ ಮೊಮ್ಮಕ್ಕಳು!

ಉಡುಪಿ, ಜೂನ್ 6: ಅಂದೊಂದು ಕೂಡು ಕುಟುಂಬ. ಅಲ್ಲಿದ್ದವರಿಗೆ ಅಜ್ಜ ಅಂದರೆ ವಿಶೇಷ ಪ್ರೀತಿ. ಇತ್ತೀಚಿಗೆ ಪ್ರೀತಿಯ ಅಜ್ಜ ಗತಿಸಿದ್ದರು. ಅಜ್ಜ ದೇವರ ಪಾದ ಸೇರಿದ್ದಾರೆ, ಆ ದೇವರಂತ ಅಜ್ಜನ ನೆನಪು ಚಿರವಾಗಿ ಇರಬೇಕು ಅಂತ ಮೊಮ್ಮಕ್ಕಳು ಈಗ ಅಜ್ಜನ ಸುಂದರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ, ಅಜ್ಜ ಇಲ್ಲ ಎನ್ನುವ ಕೊರಗನ್ನು ದೂರವಾಗಿಸಿದ್ದಾರೆ.

ಕೂಡು ಕುಟುಂಬ ಅಂದರೆ ಅದೊಂದು ಸಂತೋಷದ ಗೂಡು. ಕುಟುಂಬದ ಅಜ್ಜ ಅಜ್ಜಿ ಅಂದರೆ ಮೊಮ್ಮಕ್ಕಳಿಗೆ ವಿಶೇಷ ಪ್ರೀತಿ. ತುಂಬಾ ಪ್ರೀತಿಸುತ್ತಿದ್ದ ಅಜ್ಜನ ನೆನಪನ್ನು ಚಿರವಾಗಿಸಬೇಕು ಅಂತ ಉಡುಪಿಯಲ್ಲಿ ಮೊಮ್ಮಕ್ಕಳು ತಾವೇ ಕಲಾವಿದರಾಗಿ ಅಜ್ಜನ ಮೂರ್ತಿ ತಯಾರಿಸಿದ ಅತೀ ಸುಂದರ ಘಟನೆ ನಡೆದಿದೆ.

ಮೊಮ್ಮಕ್ಕಳ ಕುಂಚದಿಂದ ಮೂಡಿ ಬಂದ ಮೂರ್ತಿ, ದಿವಂಗತ ಚಿನ್ನ ಆರ್ ಅಂಚನ್ ಅವರದ್ದು. ಚಿನ್ನ ಆರ್ ಅಂಚನ್ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದವರು. ಅಂಚನ್ ಅವರಿಗೆ 7 ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳು. ಮಕ್ಕಳು ಮೊಮ್ಮಕ್ಕಳು, ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರೂ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಅಜ್ಜನ ಮನೆ ಮಟ್ಟುವಿಗೆ ಬಂದು ಸೇರುತ್ತಿದ್ದರು. ಮಳೆಗಾಲ ಆರಂಭವಾದ ಪ್ರತಿ ಆದಿತ್ಯವಾರ ಮಕ್ಕಳು, ಮೊಮ್ಮಕ್ಕಳು ಮನೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಮನೆಯಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು. ಬಳಿಕ ಅಜ್ಜನ ಜೊತೆ ಹರಟೆ ಹೊಡೆದು ಖುಷಿಪಡುತ್ತಿದ್ದರು.

Children Made Their Grandfather Statue in Udupi

82 ವರ್ಷದ ಚಿನ್ನ ಅಂಚನ್ ಅವರು ಇತ್ತೀಚಿಗೆ ನಿಧನ ಹೊಂದಿದರು. ಅಜ್ಜನನ್ನು ಕಳೆದುಕೊಂಡ ಮೊಮ್ಮಕ್ಕಳು ಅಜ್ಜ ನಮ್ಮ ಜೊತೆ ನೆನಪಾಗಿ ಸದಾ ಇರಬೇಕೆಂಬುದು ಆಸೆಪಟ್ಟು, ಯೂಟ್ಯೂಬ್‌ ನಲ್ಲಿ ಮೂರ್ತಿ ತಯಾರಿ ಹೇಗೆ ಮಾಡುವುದೆಂದು ಕಲಿತುಕೊಂಡಿದ್ದಾರೆ. ಮನೆಮಂದಿ ಎಲ್ಲರೂ ಸೇರಿ ಅಜ್ಜನ ಸುಂದರಮೂರ್ತಿ ನಿರ್ಮಾಣ ಮಾಡಿದ್ದಾರೆ. ಮನೆಯ ಅಂಗಳದಲ್ಲಿ ಅಜ್ಜನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಅಜ್ಜ ತಮ್ಮ ಜೊತೆಗಿಲ್ಲ ಎಂಬ ನೋವನ್ನು ದೂರ ಮಾಡಿದ್ದಾರೆ.

Children Made Their Grandfather Statue in Udupi

Recommended Video

      ಬಿಜೆಪಿ-ಕಾಂಗ್ರೆಸ್ ಚಡ್ಡಿ ಪಾಲಿಟಿಕ್ಸ್ ಬಗ್ಗೆ HDK ಫುಲ್ ಗರಂ | #Politics | OneIndia Kannada

      ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಅಜ್ಜನ ಮೂರ್ತಿ ನಿರ್ಮಾಣ ಮಾಡಲಾಗಿದೆ. ಅದರಲ್ಲೂ ಮೊಮ್ಮಕ್ಕಳು ತಾವೇ ತಮ್ಮ ಕೈಯಾರೆ ಅಜ್ಜನ ಮೂರ್ತಿ ತಯಾರು ಮಾಡಿದ್ದಾರೆ. ಮಕ್ಕಳ ನವೀನ ಸ್ಪರ್ಷದಿಂದ ಅಜ್ಜನ ಮೂರ್ತಿ ಸುಂದರವಾಗಿ ಮೂಡಿ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+