ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಮಣಿಪಾಲದ ಬಿಲ್ಡರ್
ಉಡುಪಿ, ಸೆಪ್ಟೆಂಬರ್.24: ಬಿಲ್ಡರ್ ಒಬ್ಬರು ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದಲ್ಲಿ ನಡೆದಿದೆ. ಒಲಿವೆರಾ ಲೂಯಿಸ್ (68) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.
ನಿನ್ನೆ ತಡ ರಾತ್ರಿ(ಸೆ.24) ಮಣಿಪಾಲದ ಸಂಬಂಧಿಕರ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನೊಳಗೆ ಒಲಿವೆರಾ ಲೂಯಿಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಗೆ ಡೆತ್ ನೋಟ್ ಬರೆದಿರುವ ಒಲಿವೆರಾ ಲೂಯಿಸ್, "ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು ಚೆನ್ನಾಗಿ ನೋಡಿಕೋ" ಎಂದು ತಿಳಿಸಿದ್ದಾರೆ.
ಖಾಸಗಿ ಶಿಪ್ ನ ಮಾಜಿ ಉದ್ಯೋಗಿಯೂ ಆಗಿದ್ದ ಲೂಯಿಸ್, ಲಕ್ಷ್ಮೀಂದ್ರ ನಗರ ನಿವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ತೀರ್ವ ಖಿನ್ನತೆಗೂ ಒಳಗಾಗಿದ್ದರು. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications