ಬಪ್ಪನಾಡು ದುರ್ಗಾಪರಮೇಶ್ವರಿಗೆ 5 ಕೋಟಿ ರೂ, ಚಿನ್ನದ ಪಲ್ಲಕ್ಕಿ!
ಉಡುಪಿ, ಫೆಬ್ರವರಿ 25: ಕರಾವಳಿಯ ಪ್ರಸಿದ್ಧ ದೇವಾಲಯವಾದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಗೆ ಉಡುಪಿಯಲ್ಲಿ ಚಿನ್ನದ ಪಲ್ಲಕ್ಕಿ ಸಿದ್ದಗೊಂಡಿದೆ.
ಬರೋಬ್ಬರಿ 12 ಕೆ.ಜಿ ತೂಕದ ಚಿನ್ನ ಬಳಸಿ ದೇವಿಯ ಪಲ್ಲಕ್ಕಿ ಸಿದ್ದಗೊಳಿಸಲಾಗಿದ್ದು, ಸುಮಾರು 5 ಕೋಟಿ ರುಪಾಯಿ ವೆಚ್ಚದಲ್ಲಿ ಈ ಕಲಾತ್ಮಕ ಪಲ್ಲಕಿಯನ್ನು ಸಿದ್ದಗೊಳಿಸಲಾಗಿದೆ.

ದೇವಾಲಯಗಳ ಆಭರಣ, ರಥ ಹಾಗೂ ಪಲ್ಲಕಿ ನಿರ್ಮಾಣಕ್ಕೆ ಹೆಸರುವಾಸಿಯಾದ ಉಡುಪಿಯ ಸ್ವರ್ಣ ಜುವೆಲ್ಲರ್ ಒಂದು ತಿಂಗಳ ಕಾಲಾವಧಿಯಲ್ಲಿ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದೆ.

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ದೇವಸ್ಥಾನ ವೈಭವದ ಮೆರವಣಿಗೆಯಲ್ಲಿ ಪಲ್ಲಕ್ಕಿಯನ್ನು ಕೊಂಡೊಯ್ದು ದೇವಿಗೆ ಅರ್ಪಿಸಲಾಯಿತು. ಪರಿಶುದ್ಧ 22 ಕ್ಯಾರೆಟ್ ಚಿನ್ನವನ್ನೇ ದೇವಿಯ ಈ ಪಲ್ಲಕ್ಕಿಗೆ ಬಳಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ದೇವಿ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂದೇ ಹೇಳಬಹುದು.












Click it and Unblock the Notifications