ತುಮಕೂರಿನಲ್ಲಿ ಅತ್ತೆ-ಮಾವನ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
ಅತ್ತೆ-ಮಾವ ಮತ್ತು ಪತಿಯ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ರಾಘವೇಂದ್ರ ಕಾಲೊನಿಯಲ್ಲಿ ನಡೆದಿದೆ.
ತುಮಕೂರು, ಏಪ್ರಿಲ್ 29: ಅತ್ತೆ-ಮಾವ ಮತ್ತು ಪತಿಯ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ರಾಘವೇಂದ್ರ ಕಾಲೊನಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಹರ್ಷಿತಾ(25) ಎಂದು ಗುರುತಿಸಲಾಗಿದ್ದು, ನಿನ್ನೆ (ಏಪ್ರಿಲ್ 29) ತಾನೇ ಹರ್ಷಿತಾ ದಂಪತಿ ಕೋರ್ಟಿನಿಂದ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನು ಹರ್ಷಿತಾ ತಮ್ಮ ಕೈಮೇಲೆ ಬರೆದುಕೊಂಡಿದ್ದರು ಎಂಬುದು ತಿಳಿದುಬಂದಿದೆ.

ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.












Click it and Unblock the Notifications