ಲಾಕ್‌ಡೌನ್ ನಡುವೆ ಬಿಜೆಪಿ ಶಾಸಕ ಅದ್ದೂರಿ ಹುಟ್ಟುಹಬ್ಬ ಆಚರಣೆ

ತುಮಕೂರು, ಏಪ್ರಿಲ್ 11: ಕೊರೊನಾ ವೈರಸ್‌ ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಘೋಷಣೆಯಾಗಿದೆ. ಆದರೆ ಈ ನಿಯಮವನ್ನು ತುರುವೇಕೆರೆ ಕ್ಷೇತ್ರದ ಬಿಜೆಪಿ ಪಕ್ಷದ ಶಾಸಕ ಮಸಾಲೆ ಜಯರಾಂ ಮುರಿದಿದ್ದಾರೆ.

Recommended Video

      ಪ್ರಜ್ವಲ್ ರೇವಣ್ಣ vs ಪ್ರೀತಂಗೌಡ ಮಾತಿನ ಫೈಟ್ ಹೇಗಿದೆ ನೋಡಿ | Prajwal Revanna | Preetham | Oneindia kannada

      ಲಾಕ್‌ಡೌನ್ ನಡುವೆ ಎಲ್ಲ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಮದುವೆಗಳು ಸಹ ಜಿಲ್ಲಾಡಳಿತದ ಅನುಮತಿ ಪಡೆದು, ಒಂದಷ್ಟು ಜನರು ಸೇರಿ ಮಾಡಬೇಕಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಶಾಸಕ ಮಸಾಲೆ ಜಯರಾಂ ಅದ್ದೂರಿಯಾಗಿ ಬರ್ತ್‌ಡೇ ಆಚರಣೆ ಮಾಡಿದ್ದಾರೆ.

      ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ಮಸಾಲೆ ಜಯರಂ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಗ್ರಾಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿದ್ದಾರೆ. ಬೆಂಬಲಿಗರು ಹಾಗೂ ಊರಿನ ಗ್ರಾಮಸ್ಥರು ಭಾಗಿಯಾಗಿದ್ದು, ಸುಮಾರು 500 ಜನ ಸೇರಿದ ಸಾಧ್ಯತೆ ಇದೆ.

      Turuvekere BJP MLA Masale Jayaram celebrated his birthday during lockdown

      ಊರಿನ ಜನರಿಗೆ ಬಿರಿಯಾನಿ ಊಟ ಸಿದ್ಧಪಡಿಸಿದ್ದು, ಕೊರೊನಾವನ್ನು ಮರೆತು ಬಿರಿಯಾನಿ ಸವಿಯಲು ಊರಿನ ಜನ ಸೇರಿದ್ದಾರೆ. ಸಾಮಾಜಿಕ ಅಂತರ ಇಲ್ಲಿ ಇಲ್ಲವೇ ಇಲ್ಲ. ಯಾರೂ ಸಹ ಮಾಸ್ಕ್ ಧರಿಸಿಲ್ಲ.

      ಅಂದಹಾಗೆ, ಹುಟ್ಟುಹಬ್ಬದ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ಹರಿದಾಡಿದೆ. ಮಸಾಲೆ ಜಯರಾಂ ಬೇಜವಾಬ್ದಾರಿ ತನಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+