Tumkur Railway Station: ಎಷ್ಟು ಸುಂದರವಾಗಿದೆ ತುಮಕೂರು ರೈಲ್ವೆ ನಿಲ್ದಾಣದ ವಿನ್ಯಾಸ!

ತುಮಕೂರು ಬಸ್ ನಿಲ್ದಾಣ ಹೈಟೆಕ್ ಆದ ಬಳಿಕ ಇದೀಗ ರೈಲ್ವೆ ನಿಲ್ದಾಣ ಕೂಡ ಹೈಟೆಕ್ ಆಗಲು ಸಜ್ಜಾಗಿದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ತುಮಕೂರು ರೈಲ್ವೆ ನಿಲ್ದಾಣದ ವಿನ್ಯಾಸವನ್ನು ಕೂಡ ಹಂಚಿಕೊಂಡಿದ್ದು ತುಮಕೂರು ವಾಸಿಗಳು ವಿನ್ಯಾಸ ನೋಡಿ ಖುಷಿಯಾಗಿದ್ದಾರೆ.

ತುಮಕೂರು ನಗರದ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಪಾತ್ರ ಕೂಡ ಮುಖ್ಯವಾಗಿದೆ. ತ್ರಿವಿಧ ದಾಸೋಹಕ್ಕೆ ಮಠ ಪ್ರಸಿದ್ಧವಾಗಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ, ಅನ್ನ, ಭಕ್ತಿಯನ್ನು ನೀಡುವ ಮೂಲಕ ಹೆಸರಾಗಿದೆ. ಮಠದ ಭಕ್ತರೂ ಆಗಿರುವ ಸಚಿವ ಸೋಮಣ್ಣ, ಇದೀಗ ಸಿದ್ಧಗಂಗಾ ಮಠದ ಮಾದರಿಯಲ್ಲಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದಾಗಿ ತಿಳಿಸಿದ್ದಾರೆ.

Tumakuru Railway Station Upgrade Honours Sri Siddaganga Math

ಸಿದ್ದಗಂಗಾ ಮಠದ ಮಾದರಿ

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ವಿ. ಸೋಮಣ್ಣ, "ತುಮಕೂರು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನವೀಕರಣಗೊಳ್ಳುವ ನಿಲ್ದಾಣದಲ್ಲಿ ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಲಾಂಜ್‌ಗಳು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಇರಲಿವೆ. ಅಲ್ಲದೇ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ." ಎಂದು ಹೇಳಿದ್ದಾರೆ.

ತುಮಕೂರಿನ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮೇಲ್ದರ್ಜೆಗೇರಲಿಸಲು ನಿರ್ಧರಿಸಲಾಗಿದ್ದು, ಪ್ರಸ್ತಾವಿತ ಮುನ್ನೋಟದ ಚಿತ್ರವನ್ನು ಕೂಡ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಮಠದ ಅಭಿಮಾನಿಗಳು, ತುಮಕೂರು ತೈಲು ಪ್ರಯಾಣಿಕರು ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+