ಟಿಕ್ ಟಾಕ್ ವಿಡಿಯೋ ಮಾಡುವಾಗ ಮೂಳೆ ಮುರಿದುಕೊಂಡಿದ್ದ ಕುಮಾರ್ ಸಾವು

Recommended Video

      ಟಿಕ್ ಟಾಕ್ ಹುಚ್ಚಿನಿಂದ ಕೊನೆಗೂ ಪ್ರಾಣವೇ ಹೋಯ್ತು..! | Oneindia Kannada

      ತುಮಕೂರು, ಜೂನ್ 23: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಸಾವನ್ನಪ್ಪಿದ್ದಾರೆ. ಇವರು ಅದೇ ಕುಮಾರ್: ಟಿಕ್ ಟಾಕ್ ವಿಡಿಯೋಗಾಗಿ ಸ್ಟಂಟ್ ಮಾಡಿ, ಕುತ್ತಿಗೆ ಮುರಿದುಕೊಂಡಿದ್ದವರು. ಆ ನಂತರ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಸಾವನ್ನಪ್ಪಿದ್ದಾರೆ. ಆ ಮೂಲಕ ಟಿಕ್ ಟಾಕ್ ಗೆ ಕರ್ನಾಟಕದಲ್ಲಿ ಮೊದಲ ಬಲಿ ಆಗಿದೆ.

      ಜೂನ್ ಹದಿನೈದನೇ ತಾರೀಕಿನಂದು ಟಿಕ್ ಟಾಕ್ ವಿಡಿಯೋಗಾಗಿ ಸಾಹಸವೊಂದನ್ನು ಮಾಡಲು ಕುಮಾರ್ ಮುಂದಾಗಿದ್ದರು. ದೂರದಿಂದ ಓಡಿಬಂದು, ತನ್ನ ಸ್ನೇಹಿತನೊಬ್ಬನ ಕೈ ಮೇಲೆ ತಮ್ಮ ಕಾಲನ್ನು ಇಟ್ಟು, ಹಿಮ್ಮುಖವಾಗಿ ಜಿಗಿದು ನಿಲ್ಲುವ ಸಾಹಸ ಅದಾಗಿತ್ತು. ಆದರೆ ಆಯ ತಪ್ಪಿದ ಕುಮಾರ್ ನೆಲಕ್ಕೆ ಅಪ್ಪಳಿಸಿ, ಕತ್ತು ಮುರಿದಿತ್ತು. ಆ ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.

      Tumakuru Kumar

      ಅಂದ ಹಾಗೆ ಕುಮಾರ್ ಅವರು ರಾಮು ಮೆಲೋಡೀಸ್ ಆರ್ಕೆಸ್ಟ್ರಾದಲ್ಲಿ ಗಾಯಕ ಹಾಗೂ ನೃತ್ಯಪಟುವಾಗಿ ಎಂಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಟಿಕ್ ಟಾಕ್ ವಿಡಿಯೋದ ವ್ಯಸನಕ್ಕೆ ಬಿದ್ದು, ದೇಶದ ವಿವಿಧೆಡೆ ಸಾವನ್ನಪ್ಪಿದ ಘಟನೆಗಳು ವರದಿ ಆಗುತ್ತಿವೆ. ತುಮಕೂರಿನ ಕುಮಾರ್ ಸಾವು ಇದೀಗ ಕರ್ನಾಟಕದ ಮೊದಲ ಪ್ರಕರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+