ಶ್ರೀಗಳ ಆರೋಗ್ಯ ತೀರಾ ಗಂಭೀರವಾಗಿದೆ: ಡಾ.ಪರಮೇಶ್ ಹೇಳಿಕೆ

ತುಮಕೂರು, ಜನವರಿ 21: "ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಭಾನುವಾರ ರಾತ್ರಿಯಿಂದ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದ್ದು, ಅವರ ಆರೋಗ್ಯ ತೀರಾ ಗಂಭೀರ ಸ್ಥಿತಿಯಲ್ಲಿದೆ" ಎಂದು ಶ್ರೀಗಳ ಆರೋಗ್ಯದ ಹೊಣೆ ಹೊತ್ತಿರುವ ಡಾ.ಪರಮೇಶ್ ಹೇಳಿದ್ದಾರೆ.

ಶ್ರೀಗಳಿಗೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿದ್ದು, ಕಳೆದ ರಾತ್ರಿ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು. ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆಯಾಗಿದ್ದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ನಾವು ಅವರಿಗೆ ವೆಂಟಿಲೇಟರ್ ಸಪೋರ್ಟ್ ನೀಡಿ, ಅವರ ಆರೋಗ್ಯ ಚೇತರಿಕೆ ಕಾಣಲು ಸಾಧ್ಯವಿರು ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

Siddaganga Shivakumara Swamijis health is very critical: Dr Paramesh

ಈಗಾಗಲೇ ಮಠದ ಸುತ್ತ ಬಿಗಿಬಂದೋಬಸ್ತ್ ನಿಯೋಜಿಸಲಾಗಿದ್ದು, ಬೃಹತ್ ಎಲ್ ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈಗಾಗಲೇ ಮಠಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ತಮ್ಮ ಪ್ರವಾಸವನ್ನು ರದ್ದು ಮಾಡಿ ಮಠಕ್ಕೆ ಪ್ರಯಾಣ ಬೆಳೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+