ತಾಕತ್ತಿದ್ದರೆ ರೇವಣ್ಣ ನನ್ನೆದುರು ಸ್ಪರ್ಧಿಸಲಿ : ಜಮೀರ್ ಅಹಮದ್ ಸವಾಲ್

Recommended Video

      Zameer ahamed open challenge to H.D revanna | Oneindia Kannada

      ತುಮಕೂರು, ಅಕ್ಟೋಬರ್ 8: "ಎಚ್.ಡಿ ರೇವಣ್ಣನಿಗೆ ತಾಕತ್ತಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನೆದುರು ಸ್ಪರ್ಧಿಸಲಿ," ಎಂದು ಜೆಡಿಎಸ್ ಪಕ್ಷದ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಏಕವಚನದಲ್ಲೇ ಚಾಲೆಂಜ್ ಹಾಕಿದ್ದಾರೆ.

      ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಮೀರ್ ಎಂದೂ ಭಯ ಬೀಳೋದಿಲ್ಲ. ಜಮೀರ್ ಅಹಮದ್ ಖಾನ್ ಎಂಬುದು ನನ್ನ ಹೆಸರು," ಎಂದು ಆಕ್ರೋಶ ಭರಿತರಾಗಿ ಎದೆ ತಟ್ಟಿ ಹೇಳಿದರು.

      Let Revanna compete with me, challenges Zameer Ahmed Khan

      "ನಾನು ದೇವರಾಜುಗೆ ಟೋಪಿ ಹಾಕಿದೆ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ. ನಾನು ಯಾರಿಗೂ ಟೋಪಿ ಹಾಕಿಲ್ಲ. ಎಚ್.ಡಿ. ರೇವಣ್ಣ ಅವರೇ ಒಡಹುಟ್ಟಿದ ತಮ್ಮ ಕುಮಾರಸ್ವಾಮಿ ಅವರಿಗೆ ಟೋಪಿ ಹಾಕಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಅಡ್ಡಗಾಲು ಹಾಕಿದರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ದೇವೇಗೌಡರು ವಿಷ ಕುಡಿದು ಸಾಯುತ್ತಾರೆ ಎಂದು ಬ್ಲಾಕ್ ಮೇಲ್ ಮಾಡಿದರು," ಎಂದು ವಾಗ್ದಾಳಿ ನಡೆಸಿದ ಜಮೀರ್, "ಸರ್ಕಾರ ರಚನೆಯಾದ ನಂತರ ದೇವೇಗೌಡರಿಗೇ ಟೋಪಿ ಹಾಕಿ ಮೂರು ಖಾತೆ ವಹಿಸಿಕೊಂಡು ‌ಮಂತ್ರಿಯಾದರು. ರೇವಣ್ಣ ನಾಲಿಗೆ ಬಿಗಿ ಹಿಡಿದು ಮಾತನಾಡಲಿ," ಎಂದು ಎಚ್ಚರಿಕೆ ನೀಡಿದರು.

      "ದೇವೇಗೌಡರು ನನ್ನ ರಾಜಕೀಯ ಗುರುಗಳು. ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ನನ್ನ ವಿರುದ್ದ ಹೇಳಿಕೆ ನೀಡಿದರೆ ಎಲ್ಲರ ಬಂಡವಾಳ ಕಳಚುತ್ತೇನೆ," ಎಂದು ಜಮೀರ್ ಅಹಮದ್ ಖಾನ್ ಬಹಿರಂಗವಾಗಿ ಅಬ್ಬರಿಸಿದ್ದಾರೆ.

      ಜೆಡಿಎಸ್ ಪಕ್ಷ ಕೆರೆ ಇದ್ದ ಹಾಗೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಾ ಹಾಗೆ ಎಂದು ಹೇಳಿದ ಜಮೀರ್ ಕೆಪಿಸಿಸಿ ಅಧ್ಯಕ್ಷರೇ ನನ್ನನ್ನು ಗುರುತಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+