ಪ್ರಾಂಶುಪಾಲರ ಲಿಪ್‌ಸ್ಟಿಕ್‌ ಕಾಟಕ್ಕೆ ಬೇಸತ್ತು ಠಾಣೆ ಮೆಟ್ಟಿಲೇರಿದ ಉಪನ್ಯಾಸಕಿ

ತುಮಕೂರು, ಜೂನ್ 25: ಸಾಮಾನ್ಯವಾಗಿ ಕಾಲೇಜು ಎಂದ ಮೇಲೆ ಹಲವು ವಿಚಾರಗಳಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ.

ಆದರೆ ತೀರಾ ವೈಯಕ್ತಿಕ ವಿಚಾರದ ಕುರಿತು ಪ್ರಶ್ನಿಸಿದಾಗ ಹೆಣ್ಣುಮಕ್ಕಳಿಗೆ ಇರಿಸುಮುರಿಸಾಗುವುದು ಸತ್ಯ. ಇಲ್ಲೊಬ್ಬ ಪ್ರಾಂಶುಪಾಲ ಉಪನ್ಯಾಸಕಿ ತುಟಿಗೆ ಲಿಪ್‌ಸ್ಟಿಕ್ ಹಾಕುವಂತಿಲ್ಲ, ಅಪರಿಚಿತರ ಜೊತೆಗೆ ಬೈಕ್‌ನಲ್ಲಿ ಹೋಗುವಂತಿಲ್ಲ, ಹೀಗೆ ಪ್ರತಿಯೊಂದಕ್ಕೂ ಟಾರ್ಚರ್ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ ಉಪನ್ಯಾಸಕಿ ದೂರು ನೀಡಿದ್ದಾರೆ.

ತುಮಕೂರಿನ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ. ಕನ್ನಡ ಉಪನ್ಯಾಸಕಿ, ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

Lady lecturer filed a complaint against principal over harassment

ವಿದ್ಯಾರ್ಥಿಗಳು, ಸಿಬ್ಬಂದಿ ಎದುರೇ ಡ್ರೆಸ್, ಮೈಮಾಟದ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿಸಿದ್ದಾರೆ ಅಲ್ಲದೆ ಲಿಪ್‍ಸ್ಟಿಕ್ ಹಚ್ಚಿ, ಮೇಕಪ್ ಮಾಡಿಕೊಂಡು ಕಾಲೇಜಿಗೆ ಹೋದರೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಉಪನ್ಯಾಸಕಿ ಜ್ಯೋತಿ ಮಾಡಿರುವ ಆರೋಪದ ಬಗ್ಗೆ ಪ್ರಾಂಶುಪಾಲ ರಾಜ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂತಲೂ ಮಾಧ್ಯಮಗಳಿಗೂ ಬೆದರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+