ತುಮಕೂರಿನಲ್ಲಿ ಮತದಾನ ಮಾಡಿದ ಜಿ ಪರಮೇಶ್ವರ್
ತುಮಕೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಬುಧವಾರ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ತಮ್ಮ ಪತ್ನಿಯೊಂದಿಗೆ ಮತದಾನ ಮಾಡಿದರು.
ಬುಧವಾರ ಮೇ 10ರಂದು ತುಮಕೂರಿನ ಸಿದ್ಧಾರ್ಥನಗರದ ಮತಗಟ್ಟೆಯಲ್ಲಿ ಜಿ ಪರಮೇಶ್ವರ್ ಅವರು ತಮ್ಮ ಪತ್ನಿ ಕನ್ನಿಕಾ ಪರಮೇಶ್ವರಿ ಅವರೊಂದಿಗೆ ಬಂದು ಮತದಾನ ಮಾಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರಚಾರ ನಡೆಸುವ ವೇಳೆ ಕಿಡಿಗೇಡಿಗಳು ಅವರ ಮೇಲೆ ಕಲ್ಲು ತೂರಾಟ ಮಾಡಿದ್ದರು. ಘಟನೆಯಲ್ಲಿ ತಲೆಯಲ್ಲಿ ರಕ್ತಸ್ರಾವವಾಗಿತ್ತು. ಇದೇ ಮಾದರಿಯಲ್ಲಿ ಅವರು ನಾಮಪತ್ರ ಸಲ್ಲಿಸುವಾಗಲೂ ಕೂಡ ಕಲ್ಲು ತೂರಾಟ ಮಾಡಲಾಗಿತ್ತು.
#WATCH | #KarnatakaElections | Former Deputy CM and Congress leader G Parameshwara casts his vote at a polling booth in Siddharth Nagar of Tumakuru. pic.twitter.com/ilcxrmgYuq
— ANI (@ANI) May 10, 2023
ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕರ್ನಾಟಕ ಬಹುಮುಖ್ಯವಾದ ರಾಜ್ಯವಾಗಿದೆ. ಎರಡೂ ಪಕ್ಷಗಳು ಅಧಿಕಾರ ಹಿಡಿಯಬಹುದಾದ ರಾಜ್ಯ ಕರ್ನಾಟಕವಾಗಿದ್ದು, ಇದು ದಕ್ಷಿಣ ಭಾರತದ ಹೆಬ್ಬಾಗಿಲಾಗಿದೆ. ಬೀದರ್ ನ ಭಾಲ್ಕಿ ಕ್ಷೇತ್ರದಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ ಚಲಾಯಿಸಿದ್ದಾರೆ.












Click it and Unblock the Notifications