ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕ

ಬೆಂಗಳೂರು, ಜು. 27: ಬೃಹತ್ ಸೋಲಾರ್ ಘಟಕವನ್ನು ಪಡೆದಿದ್ದ ತುಮಕೂರು ಜಿಲ್ಲೆಗೆ ಮತ್ತುಂದು ಪ್ರಮುಖ ಘಟಕ ನಿರ್ಮಾಣದ ಭಾಗ್ಯ ದೊರೆತಿದೆ. ತುಮಕೂರಿನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಘಟಕ ಶೀಘ್ರವೇ ತಲೆ ಎತ್ತಲಿದೆ. ಸುಮಾರು 600 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ನಿರ್ಮಾಣವಾಗಲಿದೆ.

ಕಡಿಮೆ ತೂಕದ ಹೆಲಿಕಾಪ್ಟರ್ ತಯಾರಿಕೆ ಕೇಂದ್ರ ಆರಂಭವಾಗಲಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದಾಗಿ ಸುಮಾರು 500 ಕೋಟಿ ರು. ವೆಚ್ಚ ಮಾಡಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.[ತುಮಕೂರು : ಗುಬ್ಬಿಯಲ್ಲಿ ಶೀಘ್ರದಲ್ಲೇ ಹೆಲಿಕಾಪ್ಟರ್‌ ಘಟಕ]

hal

ಬೆಂಗಳೂರಿನಲ್ಲಿ ಏರೋಸ್ಪೇಸ್ ಕಾಮನ್ ಫಿನಿಶಿಂಗ್ ಫಾಕಲ್ಟಿ(ಎಸಿಫ್ ಎಫ್) ಕೇಂದ್ರ ಸ್ಥಾಪನೆಗೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರದಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.[ಎಚ್ ಎಎಲ್ ನೂತನ ಅಧ್ಯಕ್ಷ ಸುವರ್ಣ ರಾಜು ಸಂದರ್ಶನ]

ಈ ಎಲ್ಲ ಯೋಜನೆಗಳ ಹಿಂದೆ ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜಿ ಕೆಲಸ ಮಾಡಲಿದ್ದು, ನಿರ್ದೇಶನ ನೀಡಲಿದೆ. ದೇಶದ ಭದ್ರತೆ ಮತ್ತು ಐಕ್ಯತೆ ಕಾಪಾಡುವಲ್ಲಿ ಇಂಥ ಘಟಕಗಳ ಕಾರ್ಯ ನೆರವಾಗಲಿದೆ ಎಂದು ಎಚ್ ಎಎಲ್ ಮಾಜಿ ಅಧ್ಯಕ್ಷ ಡಾ, ಕೃಷ್ಣನ್ ದಾಸ್ ನಾಯರ್ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+