ತುಮಕೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ
ತುಮಕೂರು, ಡಿಸೆಂಬರ್ 07 : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತುಮಕೂರಿನಲ್ಲಿ ಬುಧವಾರ(ಡಿ.6) ನಡೆದಿದೆ.
17 ವರ್ಷ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದ ಐದು ಜನ ಸ್ನೇಹಿತರು ತುಮಕೂರಿನ ಯಲ್ಲಾಪುರ ಸಮೀಪದಲ್ಲಿ ಸ್ಥಗಿತಗೊಂಡಿದ್ದ ಫ್ಯಾಕ್ಟಿಯಲ್ಲಿ ಅತ್ಯಾಚಾರವೆಸಗಿದ್ದಾರೆ. ಐದು ಜನ ಸ್ನೇಹಿತರು, ಹರೀಶ್, ಮಧು, ಕೇಶವ್, ಚಿದಾನಂದ, ಚಂದು ಅತ್ಯಾಚಾರ ಮಾಡಿದ ಆರೋಪಿಗಳು, ಆರೋಪಿಗಳು ಯಲ್ಲಾಪುರದ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ.

ಪ್ರಕರಣ ಯಲ್ಲಾಪುರದ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು,ಆರೋಪಿ ಹರೀಶ್ ಹಾಗೂ ಚಿದಾನಂದ ಅವರನ್ನು ಬಂಧಿಸಲಾಗಿದೆ, ಇನ್ನು ಮೂವರು ಆರೋಪಿಗಳ ಹುಡುಕಾಟ ಮುಂದುವರೆದಿದೆ.











Click it and Unblock the Notifications