ಫ್ಲೋರೋಸಿಸ್: ಕುಡಿಯುವ ನೀರಿನ ಬಗ್ಗೆ ಎಚ್ಚರವಿರಲಿ
ಮನುಷ್ಯನ ದೇಹವು ಪಂಚಭೂತ (ವಾಯು, ಜಲ, ಅಗ್ನಿ, ಆಕಾಶ ಮತ್ತು ಭೂಮಿ) ಗಳಿಂದ ಮಾಡಲ್ಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪಂಚಭೂತಗಳಲ್ಲಿ ವಾಯುವಿಗೆ ಮೊದಲ ಸ್ಥಾನ, ಅಷ್ಟೇ ಪ್ರಮುಖವಾಗಿ 'ಜಲ' ಅಂದರೆ 'ನೀರು' ಎರಡನೇ ಸ್ಥಾನದಲ್ಲಿದ್ದು, ದೇಹದ ಉತ್ತಮ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಲು ಶುದ್ದವಾದ ನೀರು ಅತ್ಯಂತ ಅವಶ್ಯಕವಿರುತ್ತದೆ.
ಭೂಮಂಡಲದಲ್ಲಿ 'ನೀರು' ನಾನಾ ಮೂಲಗಳಿಂದ (ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆ, ಬಾವಿ, ನದಿ, ಸಮುದ್ರ) ಲಭ್ಯವಿರುತ್ತದೆ. ಹೀಗೆ ನಾನಾ ಮೂಲಗಳಿಂದ ಲಭ್ಯವಿರುವ ನೀರಿನಲ್ಲಿ ಪ್ಲೋರೈಡ್,ಆರ್ಸನಿಕ್, ನೈಟ್ರೇಟ್, ಕ್ಲೋರೈಡ್ ಹಾಗೂ ಐರನ್‌ನಂತಹ ನಾನಾ ರೀತಿಯ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ದಿನ ನಿತ್ಯ ಅವಶ್ಯಕವಿರುವ ನೀರಿನಲ್ಲಿ ಈ ರೀತಿಯ ರಾಸಾಯನಿಕ ಪದಾರ್ಥಗಳು ಪ್ರತಿದಿನ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿ ಅವಶ್ಯಕವಿರುತ್ತದೆ.
ಬೇಸಿಗೆಯ ತಾಪ ದಿನೇ ದಿನೇ ಹೆಚ್ಚುತ್ತಲೇ ಇದೆ. ಶುದ್ಧವಾದ ಕುಡಿಯುವ ನೀರಿನ ಅಭಾವ ತಲೆ ದೋರುತ್ತಿದೆ. ಮರಗಿಡಗಳು ಕಡಿಮೆ ಆಗಿ ಮಳೆಯ ಕೊರತೆಯಿಂದಾಗಿ ನೀರಿಗಾಗಿ ಬರಗಾಲ ಬಂದೊದಗಿದೆ. ಶುದ್ಧವಾದ ಕುಡಿಯುವ ನೀರಿಲ್ಲದೆ ದನಕರುಗಳು, ಜಾನುವಾರುಗಳು, ಜನರಿಗೂ ಎಲ್ಲರಲ್ಲೂ ನೀರಿನ ಅಭಾವ ಬಂದೊದಗಿದೆ.

ತುಮಕೂರು ಜಿಲ್ಲೆಯಲ್ಲೂ ಬರಗಾಲದ ಪ್ರಭಾವ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದು, ಜನರು ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಪ್ರಮುಖವಾಗಿ ಜಿಲ್ಲೆಯ ಮಧುಗಿರಿ ವಿಭಾಗದಲ್ಲಿನ ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಆ ಭಾಗದ ಜನರು ಬೋರ್‌ವೆಲ್, ಬಾವಿ, ಕೆರೆಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಆದರೆ ಇಂತಹ ನೀರಿನಿಂದ ಆಗಬಹುದಾದ ದುಷ್ಪರಿಣಾಮಗಳ ಅರಿವಿಲ್ಲದೆ ದಶಕಗಳಿಂದ ಇದೇ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ.
ಇಂತಹ ನೀರಿನಲ್ಲಿ ವಿಷಪೂರಿತ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ಇಂತಹ ನೀರನ್ನು ಸೇವಿಸಿದಾಗ ದೇಹದ ಆರೋಗ್ಯ ಹದಗೆಟ್ಟು ನಾನಾ ದುಷ್ಪರಿಣಾಮಗಳಾಗಿ ಕೆಲವೊಮ್ಮೆ ಗುಣಪಡಿಸಲು ಆಗದಂತಹ ಖಾಯಿಲೆಗಳು ಬರುತ್ತವೆ. ಅಂತಹ ಖಾಯಿಲೆಯಲ್ಲಿ ಒಂದು ಪ್ಲೋರೋಸಿಸ್ .
ಪ್ಲೋರೋಸಿಸ್ ಎಂದರೆ ಪ್ಲೋರೈಡ್ ಅಂಶದಿಂದ ದೇಹದಲ್ಲಿ ಉಂಟಾಗುವ ಒಂದು ಅನಾರೋಗ್ಯದ ಬೆಳವಣಿಗೆ.
* ಫ್ಲೂರೈಡ್‌ನ್ನು ಹೆಚ್ಚು ಸೇವನೆಯಿಂದ ಫ್ಲೂರಾಸಿಸ್ ಕಾಯಿಲೆ ಬರುತ್ತದೆ. ಇದರಿಂದ ದೇಹದ ಅನೇಕ ಭಾಗಗಳಿಗೆ ದುಷ್ಪರಿಣಾಮಗಳು ಆಗುತ್ತದೆ.
* ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ಹಾಗೂ ಮುಂತಾದವುಗಳಿಂದ ಫ್ಲೂರೈಡ್ ದೇಹದೊಳಗೆ ಪ್ರವೇಶಿಸುತ್ತದೆ.
* ಪ್ಲೊರೋಸಿಸ್ ಹಲ್ಲು, ಎಲುಬಿನ ಹಂದರ, ಕೀಲುಗಳಿಗೆ ಹಾನಿ ಹಾಗೂ ನೋವು ಉಂಟು ಮಾಡುತ್ತದೆ. ಕುಡಿಯುವ ನೀರಿನಲ್ಲಿ ಫ್ಲೂರೈಡ್ ಅಂಶ ಹೆಚ್ಚಾಗಿದ್ದರೆ ಪ್ಲೊರೋಸಿಸ್ ಕಾಯಿಲೆ ಬರುತ್ತದೆ.
* ಬಾವಿಗಳು ಆಥವಾ ಕೈ ಪಂಪುಗಳ ನೀರು ಕುಡಿಯುವರು ಈ ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು.
ಪ್ಲೊರೋಸಿಸ್‌ನ ವಿಧಗಳು:-
1) ದಂತ ಪ್ಲೊರೋಸಿಸ್
2) ಮೂಳೆ ಪ್ಲೊರೋಸಿಸ್
3) ದೇಹದ ಇತರೆ ಭಾಗದ ಪ್ಲೊರೋಸಿಸ್
ದಂತ ಪ್ಲೊರೋಸಿಸ್ ಲಕ್ಷಣಗಳು:-
1) ಹಲ್ಲಿನ ಮೇಲೆ ಹಳದಿ ಬಣ್ಣ ಅಥವಾ ಕಂದು ಬಣ್ಣ ಉಂಟಾಗುತ್ತದೆ, ಹಲ್ಲುಗಳ ಮೇಲೆ ಹಳದಿ ಬಣ್ಣದ ಅಡ್ಡಗೆರೆಗಳು ಉಂಟಾಗುತ್ತದೆ.
2) ಹಲ್ಲಿನ ಒಳ ಹಾಗೂ ಹೊರಭಾಗಗಳೆರಡಕ್ಕೂ ತೊಂದರೆಯಾಗುತ್ತದೆ.
3) ಹಲ್ಲಿನ ಮೇಲಿನ ಕಂದು ಬಣ್ಣದ ಗುರುತು ಪ್ಲೊರೋಸಿಸ್ ಸೂಚನೆ.
ಪರಿಣಾಮ:-
ದಂತ ಫ್ಲೂರಾಸಿಸ್‌ಗೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ. (ಮಕ್ಕಳ ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಫ್ಲೂರೈಡ್ ಅಂಶವಿರುವ ನೀರು, ಕೆಲವು ಆಹಾರ ಪದಾರ್ಥಗಳು ಹಾಗೂ ಡಬ್ಬಿಗಳಲ್ಲಿನ ತಿನಿಸುಗಳು ಮತ್ತು ಫ್ಲೂರೈಡ್ ಹೆಚ್ಚಾಗಿರುವ ಟೂತಪೇಸ್ಟಗಳು ಮುಂತಾದವುಗಳನ್ನು ಬಳಸುವುದರಿಂದ ದಂತ ಪ್ಲೊರೋಸಿಸ್ ಬರುತ್ತದೆ ).
-
Vastu Tips: ಮನೆಯಲ್ಲಿ ಎರಡು ಕನ್ನಡಿಗಳು ಎದುರುಬದರಿನಲ್ಲಿ ಇದೆಯಾ? ತಕ್ಷಣ ಬದಲಿಸಿ -
Mangoes: ಮಾವಿನಹಣ್ಣು ಖರೀದಿ ಮಾಡುವಾಗ 3 ತಪ್ಪು ಮಾಡ್ಬೇಡಿ! ಈ 6 ಟ್ರಿಕ್ಸ್ ತಿಳ್ಕೊಂಡಿರಿ -
Vastu vs Horoscope: ಮನೆ ವಾಸ್ತು ಪರ್ಫೆಕ್ಟ್ ಆದರೂ ಏಕೆ ಕಿರಿಕಿರಿ? ತಿಳಿಯಿರಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ











Click it and Unblock the Notifications