ತುಮಕೂರು : ಪಾಲಿಕೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಅಧಿಕಾರ

ತುಮಕೂರು, ಜನವರಿ 30 : ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಪಾಲಿಕೆ ಚುನಾವಣೆ ನಡೆದು 5 ತಿಂಗಳ ಬಳಿಕ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಿದೆ.

ಬುಧವಾರ ತುಮಕೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಮೇಯರ್ ಆಗಿ ಜೆಡಿಎಸ್‌ನ ಲಲಿತಾ ರವೀಶ್ ಮತ್ತು ಉಪ ಮೇಯರ್ ಆಗಿ ಕಾಂಗ್ರೆಸ್‌ನ ರೂಪಶ್ರೀ ಆಯ್ಕೆಯಾದರು. ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿದ್ದರೂ ಅಧಿಕಾರ ಪಡೆಯಲು ವಿಫಲವಾಯಿತು.

ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರ ನೇತೃತ್ವದಲ್ಲಿ ಬುಧವಾರ ಚುನಾವಣೆ ನಡೆಯಿತು. ಹಿಂದುಳಿದ ವರ್ಗದ ಮಹಿಳೆಗೆ ಮೇಯರ್ ಪಟ್ಟ, ಪರಿಶಿಷ್ಟ ಜಾತಿ ಮಹಿಳೆಗೆ ಉಪ ಮೇಯರ್ ಪಟ್ಟ ನಿಗದಿಯಾಗಿತ್ತು.

Congress-JDS alliance come to power in Tumakuru city corporation

2018ರ ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಬಿಜೆಪಿ 12, ಜೆಡಿಎಸ್‌ 10, ಕಾಂಗ್ರೆಸ್‌ 10 ಮತ್ತು ಮೂರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು.

2014ರಲ್ಲಿ ತುಮಕೂರು ಮಹಾನಗರ ಪಾಲಿಕೆ ರಚನೆ ಆಯಿತು. ಇದು 2ನೇ ಚುನಾವಣೆಯಾಗಿದೆ. 1994ರಿಂದಲೂ ತುಮಕೂರಿನಲ್ಲಿ ಮೈತ್ರಿ ಆಡಳಿತವೇ ನಡೆಯುತ್ತಿರುವುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+