ತುಮಕೂರು ಪೊಲೀಸರಿಗೆ ರಾತ್ರಿ ಕಣ್ಣು ಕಾಣಲ್ಲವಾ? ಜನರು #JustAsking

ತುಮಕೂರು, ಮಾರ್ಚ್ 6 : ಈ 'ಕಾಯಿಲೆ' ಬೆಂಗಳೂರಿನಲ್ಲಿ ವಿಪರೀತವಾಗಿದೆ. ದೊಡ್ಡ ನಗರಗಳಲ್ಲೆಲ್ಲ ಇದೇ ಹಣೆಬರಹ. ಇದೀಗ ತುಮಕೂರು ನಗರದಲ್ಲೂ ಕಾಣಿಸಿಕೊಂಡಿದೆ. ಈ 'ಕಾಯಿಲೆ' ಹೆಸರು ಬೈಕ್ ವ್ಹೀಲಿಂಗ್. ಇಲ್ಲಿನ ಮಂಡಿಪೇಟೆ, ಸದಾಶಿವ ನಗರ, ಕುಣಿಗಲ್ ರಸ್ತೆ, ಬಿ.ಎಚ್.ರಸ್ತೆ, ಮರಳೂರು ದಿಣ್ಣೆ ಇಲ್ಲೆಲ್ಲ ಬೈಕ್ ವ್ಹೀಲಿಂಗ್ ಸಾಮಾನ್ಯ ಅನ್ನೋ ಹಾಗಾಗಿದೆ.

ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಧೈರ್ಯವಾಗಿ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ಈಚೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆದ ಘಟನೆಯೇ ಬೈಕ್ ವ್ಹೀಲಿಂಗ್ ನ ಅನಾಹುತಕ್ಕೆ ಸಾಕ್ಷಿ. ರಸ್ತೆ ದಾಟುತ್ತಿದ್ದ ಪಾದಚಾರಿ ವೆಂಕಟೇಶ್ ಅವರಿಗೆ ವ್ಹೀಲಿಂಗ್ ಮಾಡಿಕೊಂಡು ಬಂದ ಮೂವರು ಡಿಕ್ಕಿ ಹೊಡೆದಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸ್ಥಳದಲ್ಲಿದ್ದವರು ವ್ಹೀಲಿಂಗ್ ಮಾಡಿಕೊಂಡು ಬಂದ ಮೂವರನ್ನು ಸಮಾ ಬಡಿದಿದ್ದಾರೆ. ಅಷ್ಟಕ್ಕೇ ಸಿಟ್ಟು ತಮಣಿ ಆಗದೆ ಬೈಕ್ ಗೆ ಬೆಂಕಿ ಹೊತ್ತಿಸಿದ್ದಾರೆ. ವ್ಹೀಲಿಂಗ್ ಮಾಡಿದ ಫಾರೂಕ್ (23), ಶಮೀರ್ (19), ಸಲ್ಮಾನ್ (20) ಈ ಮೂವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

Bike wheeling problem in Tumakuru city, people angry on police

ಕರ್ಕಶವಾಗಿ ಶಬ್ದ ಬರುವ ರೀತಿಯಲ್ಲಿ ಸೈಲೆನ್ಸರ್ ಗಳನ್ನು ಬೈಕ್ ಗಳಿಗೆ ಆಳವಡಿಸಿಕೊಳ್ಳುವ ಪುಂಡರು, ರಾತ್ರಿ ವೇಳೆ ಹೆಚ್ಚು ವೇಗವಾಗಿ ರಸ್ತೆಗಳಲ್ಲಿ ಕೇಕೆ ಹಾಕುತ್ತಾ ವ್ಹೀಲಿಂಗ್ ಮಾಡುತ್ತಾರೆ. ಇದರಿಂದ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಬೈಕ್ ವ್ಹೀಲಿಂಗ್ ಮಾಡುವುದನ್ನು ಪ್ರಶ್ನೆ ಮಾಡಿದರೆ, ಪುಂಡರೆಲ್ಲಾ ಸೇರಿ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ನಡೆಸುತ್ತಾರೆ. ಹೀಗಾಗಿ ಇವರ ವರ್ತನೆಗೆ ಕಡಿವಾಣವೇ ಇಲ್ಲದಂತಾಗಿದೆ. ಇನ್ನು ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಕೂಡ ಬೈಕ್ ವ್ಹೀಲಿಂಗ್ ಗೆ ಕಠಿವಾಣ ಹಾಕದಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

Bike wheeling problem in Tumakuru city, people angry on police

ಪ್ರಥಮ ದರ್ಜೆ ಸಹಾಯಕ ಆತ್ಮಹತ್ಯೆಗೆ ಶರಣು

ಪಟ್ಟಣ ಪಂಚಾಯಿತಿ ಪ್ರಥಮ ದರ್ಜೆ ಸಹಾಯಕ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಕೊರಟಗೆರೆಯಲ್ಲಿ ನಡೆದಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ 5 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ಮಂಜುನಾಥ್ ಸಾವನ್ನಪ್ಪಿದ್ದಾರೆ. ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮಂಜುನಾಥ್ ಸಾವು ಅನುಮಾನ ಮೂಡಿಸಿದೆ. ಪಂಚಾಯಿತಿ ಕಚೇರಿ ಹಿಂಭಾಗದ ವಸತಿ ಗೃಹದ ಮನೆಯಲ್ಲಿ ಶವ ಪತ್ತೆಯಾಗಿದೆ. ಮಂಜುನಾಥ್ ಆನೇಕಲ್ ಮೂಲದವರು. ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಲನೆ ನಡೆಸಿದ್ದಾರೆ‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+