ಗರ್ಭಿಣಿ ಪಾಲಿಗೆ ಸೂಲಗಿತ್ತಿಯರಾದ ಕೊಟ್ಟ ಗ್ರಾಮಸ್ಥರು, ಸುಖ ಪ್ರಸವ

ಸಿರಾ (ತುಮಕೂರು) , ಏಪ್ರಿಲ್ 24: ತುಮಕೂರು ಜಿಲ್ಲೆ ಸಿರಾ ತಾಲೂಕಿನ ದೊಡ್ಡ ಆಸ್ಪತ್ರೆಗೆ ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಭಾನುವಾರ ಬೆಳ್ಳಂಬೆಳ್ಳಗೆ ಹೊರಟ್ಟಿದ್ದರು. ಆದರೆ, ಮಾರ್ಗಮಧ್ಯೆಯಲ್ಲೇ ನೋವು ಹೆಚ್ಚಾಗಿದೆ. ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಆಂಧ್ರ ಮೂಲದ ಕುಟುಂಬ ದಿಕ್ಕು ತೋಚದ ಸಂದರ್ಭದ ಎದುರಾಗಿದೆ.. ಆದರೆ, ಎಲ್ಲವೂ ಸುಖಾಂತ್ಯವಾಗಿದೆ.

ಗಡಿ ಭಾಗದ ಆಂಧ್ರಪ್ರದೇಶದ ರೊಳ್ಳೆ ಸಮೀಪದ ನಿವಾಸಿಗಳಾದ ಗರ್ಭಿಣಿ ಹಾಗೂ ಅವರ ಕುಟುಂಬ ಕಷ್ಟದಲ್ಲಿದ್ದಾಗ ಕರ್ನಾಟಕದ ಹಳ್ಳಿಯ ಜನರು ತಕ್ಷಣವೇ ಸ್ಪಂದಿಸಿದ್ದಾರೆ.

A pregnant woman delivers baby in an Auto rickshaw in Sira

ಆಟೋಕ್ಕೆ ಹೊದಿಕೆ ಹಾಕಿ ಸೂಲಗಿತ್ತಿಯರಾಗಿ ನಿಂತು ಸುಖ ಪ್ರಸವ ಸಾಧಿಸಿ, ಮಗುವಿನ ಮೊದಲ ಅಳು ಕೇಳಿದಾಗ ತಾಯಿಯ ಕಣ್ಣಾಲಿ ನಗು ಮೂಡಿದೆ. ಮನುಷತ್ವಕ್ಕೆ ಬೆಲೆಕೊಟ್ಟ ತಮ್ಮ ಊರಿನ ಮಂದಿ ಸಮಯಕ್ಕೆ ತಕ್ಕಂತೆ ಸ್ಪಂದಿಸಿದ ರೀತಿಯನ್ನು ಹೊಗಳಿ ಕೊಟ್ಟ ಶಂಕರ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ. ಶಂಕರ್ ಅವರು ಬರೆದುಕೊಂಡಿದ್ದು ಹೀಗಿದೆ:

'ಇಂದು ಬೆಳಗ್ಗೆ ಐದು ಗಂಟೆಯ ಸಮಯ ನೆರೆಯ ಆಂದ್ರದ ರೊಳ್ಳೆ ಸಮೀಪದ ಒಂದು ಕುಟುಂಬ ತಮ್ಮ ಮಗಳನ್ನ ಹೆರಿಗೆಗೆಂದು ಸಿರಾ ದೊಡ್ಡ ಆಸ್ಪತ್ರೆ ಗೆ ಆಟೋ ದಲ್ಲಿ ಕರೆದುಕೊಂಡು ಬರುವ ಮಧ್ಯೆ ನಮ್ಮೂರಿನಲ್ಲಿ ನೋವು ಕಾಣಿಸಿಕೊಂಡಿದೆ ..ಆಗಾ ನಮ್ಮೂರ ಜನ ರಸ್ತೆ ಯಲ್ಲಿ ಆಟೋಕ್ಕೆ ಹೋದಿಕೆ ಹಾಕಿ ಹೆರಿಗೆ ಮಾಡಿಸಿದರು. ತಾಯಿ ಮಗು ಆರೋಗ್ಯ ವಾಗಿದ್ದ ಕಾರಣ ಆಸ್ಪತ್ರೆ ಗೆ ಬೇಡ ಎಂದು ವಾಪಸ್ ಮನೆಗೆ ತೆರಳಿದರು... ನಮ್ಮೂರ ಜನರಿಗೆ ಒಂದು ಸಲಾಮ್.'

ಈ ಸುದ್ದಿ ತಿಳಿದು ಫೇಸ್ ಬುಕ್ ಗೆಳೆಯ/ಗೆಳತಿಯರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ, ಕೆಲವು ಸ್ಯಾಂಪಲ್ ಇಲ್ಲಿದೆ.. ಮಿಕ್ಕಿದ್ದು ಶಂಕರ್ ಅವರ ಫೇಸ್ ಬುಕ್ ಪುಟದಲ್ಲಿ ಓದಬಹುದು.

Shashinadaprabhu Kempegowda
:ಜನರೇ ದೇವರು..ಆ ದೇವರುಗಳಿಗೆ ನನ್ ಸಲ್ಯೂಟ್..ಅಲ್ಲಿ ಸುತ್ತ ಮುತ್ತ ಆಸ್ಪತ್ರೆ ವ್ಯವಸ್ಥೆಯು ಬೇಗನೆ ಸಿಗುವಂತಾಗಲೀ..ಜೈ ಶಂಕ್ರಣ್ಣಾ.

A pregnant woman delivers baby in an Auto rickshaw in Sira

Manju Magadeera : Halli jana yavglu oledane madtare nandu sellute

Vasudev Nadig: Nimmura janara padakke sharanhu..aa dhulhu nanna netthiyallirali

Ragu Jdr : ಸೆನೆಕ್ಸ್ ರೇಟ್ ಪುಲ್ ಓಡ್ತಿದೆ ಗುರೂ.ನಿಜಕ್ಕೂ ಸಕತ್ತಾದ ಸುದ್ದಿ. ಅದು ನಿಮ್ಮ ಊರಿನಲ್ಲೇ,ನೀನು ಇದ್ದಾಗಲೇ ಇಂಥ ಒಂದು ಸುದ್ದಿ. ಇವತ್ತು ಮಹಾತ್ಮರ. ಜನ್ಮ ದಿನ,ಸೋ ರಾಜಕುಮಾರಿ ಅನ್ನೋ ಹೆಸರು ಅತ್ಯುತ್ತಮ ವಾದ ಆಯ್ಕೆ. ನಮ್ಮಿಬ್ಬರ ಸ್ನೇಹಕ್ಕೆ ಹನ್ನೆರಡರ ಹರೆಯ.ಇಷ್ಟು ದಿನದಲ್ಲಿ ನಿನಗೆ ಯಾವತ್ತು ಥ್ಯಾಂಕ್ಸ್ ಹೇಳಿಲ್ಲ.ಇವತ್ತು ಹೇಳದೇ ಇರುವುದಕ್ಕಾಗುವುದಿಲ್ಲ. ಇಂತಹ ಸುದ್ದಿ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಶಂಕ್ರಣ್ಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+