ಕುದುರೆ ಏರಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿನಿಗೆ ಆನಂದ್ ಮಹೀಂದ್ರಾ ಉಘೇ!

ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಈ ವಿದ್ಯಾರ್ಥಿನಿ ಈಗ ಇಂಟರ್ ನೆಟ್ ನಲ್ಲಿ ಭರ್ಜರಿ ಸುದ್ದಿ ಆಗಿದ್ದಾಳೆ. ಹತ್ತನೇ ತರಗತಿ ಪರೀಕ್ಷೆ ಬರೆಯುವ ಸಲುವಾಗಿ ಈ ವಿದ್ಯಾರ್ಥಿನಿ ತಾನು ಸ್ವತಃ ಕುದುರೆ ಓಡಿಸಿಕೊಂಡು ತೆರಳಿದ್ದಾಳೆ. ಹಾಗೆ ತೆರಳುವ ವೇಳೆ ಆ ದೃಶ್ಯದ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿದೆ. ಇದಕ್ಕೆ ಅಪಾರ ಪ್ರಮಾಣದ ಲೈಕ್ಸ್ ಬಂದು, ಶೇರ್ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಎಲ್ಲಕ್ಕಿಂತ ವಿಶಿಷ್ಟ ಹಾಗೂ ಆಸಕ್ತಿಕರ ಏನೆಂದರೆ, ಆ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಗಮನವನ್ನೂ ಸೆಳೆದಿದೆ. ಈ ವಿದ್ಯಾರ್ಥಿನಿಯನ್ನು 'ಹೀರೋ' ಎಂದು ಮನಸಾರೆ ಹೊಗಳಿರುವ ಅವರು, ಶಿಕ್ಷಣದ ಬಗ್ಗೆ ಆಕೆಗಿರುವ ಬದ್ಧತೆಯನ್ನು ಮೆಚ್ಚುಗೆ ಸೂಚಿಸಿದ್ದಾರೆ.

ಮನೋಜ್ ಕುಮಾರ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂದಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ನನ್ನ ವಾಟ್ಸ್ ಅಪ್ ವಂಡರ್ ಬಾಕ್ಸ್ ನದು. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೇಗೆ ಹೋಗುತ್ತಾಳೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

Shes my hero, says Anand Mahindra for Kerala teen who rode horse to 10th exam hall

ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಮೆಚ್ಚಿಕೊಂಡು, ಇದು ಜಾಗತಿಕ ಮಟ್ಟದಲ್ಲಿ ವೈರಲ್ ಆಗಬೇಕು. ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಆಕೆ ಮತ್ತು ಕುದುರೆಯ ಭಾವಚಿತ್ರ ನನಗೆ ಬೇಕು ಮತ್ತು ಅದನ್ನು ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ ಎಂದು ಹೊಗಳಿದ್ದಾರೆ.

ಆನಂದ್ ರ ಮನವಿಗೆ ಪ್ರತಿಕ್ರಿಯೆ ಸಿಕ್ಕಿದ್ದು, ಆ ವಿದ್ಯಾರ್ಥಿನಿ ಹೆಸರು ಕೃಷ್ಣಾ ಹಾಗೂ ಆಕೆ ಕುದುರೆ ಹೆಸರು ರಾಣಾಕೃಷ್ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+