ದೇವನಹಳ್ಳಿ ಮಾದರಿ: ಬೆಂಗಳೂರು ದಕ್ಷಿಣ ಸೇರಿ ಸಮೀಪದ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ

Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವು ಪ್ರಗತಿ ಪಡೆದುಕೊಳ್ಳುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಚರ್ಚೆಯ ನಡುವೆ ವಿವಿಧ ಭಾಗಗಳಲ್ಲಿ ಭೂಮಿ ಬೆಲೆಯೂ ಸಹ ಹೆಚ್ಚಳವಾಗಿದೆ. ವಿವಿಧ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರವು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸುವ ಮೊದಲೇ, ಈ ಯೋಜನೆಯ ಭಾಗವಾಗಿ ಬೆಂಗಳೂರು ನಗರದ ದಕ್ಷಿಣ ಮತ್ತು ಪಶ್ಚಿಮ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ತೀವ್ರ ಏರಿಕೆಗೆ ಕಾರಣವಾಗಿವೆ.

ಕನಕಪುರ ರಸ್ತೆ ಮತ್ತು ಹಾರೋಹಳ್ಳಿಯಿಂದ ನೆಲಮಂಗಲ ಮತ್ತು ಕುಣಿಗಲ್‌ವರೆಗಿನ ಪ್ರದೇಶಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿಯ ಬೆಲೆಯು ಹೆಚ್ಚಳವಾಗಿದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆದಾರರು, ಭೂಮಿದಾರರು ಮತ್ತು ರಿಯಲ್ ಎಸ್ಟೇಟ್ ಹೂಡಿಕೆದಾರರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಾರ್ಯಾರಂಭ ಮಾಡುವ ಮೊದಲು ದೇವನಹಳ್ಳಿಯ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿರುವುದನ್ನು ಚರ್ಚೆ ಮಾಡುತ್ತಿದ್ದಾರೆ. ದೇವನಹಳ್ಳಿಯ ಭಾಗದಲ್ಲೂ ಭೂಮಿಯ ಬೆಲೆಯು ವಿಪರೀತವಾಗಿ ಹೆಚ್ಚಳವಾಗಿತ್ತು. ಈ ಭಾಗದಲ್ಲಿ ಭೂಮಿಯ ಬೆಲೆಯು ಮೊದಲು ಅಷ್ಟೇನು ಹೆಚ್ಚಾಗಿರಲಿಲ್ಲ. ಆದರೆ, ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಹಾಗೂ ಅದಾದ ನಂತರದ ವರ್ಷಗಳಲ್ಲಿ ಭೂಮಿ ಬೆಲೆ ಹಾಗೂ ಪ್ರಾಪರ್ಟಿ ಬೆಲೆಯು ಭಾರೀ ಹೆಚ್ಚಳವಾಗಿತ್ತು. ಇದೀಗ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂದರ್ಭದಲ್ಲಿಯೂ ಭೂಮಿ ಖರೀದಿ ಪ್ರಕ್ರಿಯೆ ಜೋರಾಗಿದೆ.

Bengaluru Second Airport

ಆದಾಗ್ಯೂ, ಪ್ರಸ್ತುತ ಉತ್ಸಾಹವು ಹೆಚ್ಚಾಗಿ ಭಾವನಾತ್ಮಕ ಅಂಶಗಳ ಮೇಲೆ ಆಧಾರಿತವಾಗಿದೆ ಎಂದು ಆಸ್ತಿ ಸಲಹೆಗಾರರು ಎಚ್ಚರಿಸಿದ್ದಾರೆ. ಹೆಚ್ಚಿನ ಚಟುವಟಿಕೆಗಳು ದೊಡ್ಡ ಮಟ್ಟದ ವಸತಿ ಯೋಜನೆಗಳಿಗಿಂತ ಕೃಷಿಭೂಮಿ ಖರೀದಿ-ಮಾರಾಟ, ಯೋಜಿತ ಅಭಿವೃದ್ಧಿ ಹಾಗೂ ಭೂ ಸಂಗ್ರಹಣೆಯತ್ತ ಹೆಚ್ಚು ಕೇಂದ್ರೀಕೃತವಾಗಿವೆ ಎಂದು ಅವರು ತಿಳಿಸಿದ್ದಾರೆ.

ಯಾವ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ ?

ಬೆಂಗಳೂರು ಹಾಗೂ ಬೆಂಗಳೂರಿನ ಸಮೀಪದ ಪ್ರದೇಶಗಳಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ಕನಕಪುರ ರಸ್ತೆ-ಹಾರೋಹಳ್ಳಿ ಬೆಲ್ಟ್‌ ಭಾಗದಲ್ಲಿ ಈಗಾಗಲೇ ಭೂಮಿ ಬೆಲೆ ವಿಪರೀತ ಹೆಚ್ಚಳವಾಗಿದೆ. ವಸತಿ ಮೂಲಸೌಕರ್ಯ, ಮೆಟ್ರೋ ಸಂಪರ್ಕ ಮತ್ತು ಜಲಾನಯನ ಪ್ರದೇಶಗಳ ಸಾಮೀಪದಲ್ಲೇ ಇರುವುದು ಸಹ ಪ್ಲಸ್ ಪಾಯಿಂಟ್ಸ್‌ ಆಗಿ ಬದಲಾಗಿವೆ. ಕಳೆದ ಆರರಿಂದ ಎಂಟು ತಿಂಗಳುಗಳಲ್ಲಿ, ಕನಕಪುರ ರಸ್ತೆಯಲ್ಲಿರುವ ಭೂಮಿಯ ಬೆಲೆಗಳು ಪರಿಣಾಮಕಾರಿಯಾಗಿ ದ್ವಿಗುಣಗೊಂಡಿವೆ ಎಂದು ಸಿಬಿಆರ್‌ಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ-ಲೀಸಿಂಗ್ ರಾಮ್ ಚಂದ್ನಾನಿ ಅವರು ಹೇಳಿದ್ದಾರೆ ಎಂದು ದಿ ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ.

ಚುಡಹಳ್ಳಿ, ಸೋಮನಹಳ್ಳಿ ಮತ್ತು ಕಗ್ಗಲಿಪುರದಂತಹ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ಮುಂದುವರಿದು ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಭಾಗದ ಕಡೆ ಹೆಚ್ಚು ಒಲವು ತೋರಿಸುತ್ತಿರುವುದು ಸಹ ಈ ಭಾಗದಲ್ಲಿ ಭೂಮಿ ಬೆಲೆ ಹಾಗೂ ಪ್ರಾಪರ್ಟಿ ಬೆಲೆಯು ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+