ಆಗಸ್ಟ್‌ನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಿಸ್ಟಂ ಚೇಂಜ್; 40 ವರ್ಷಗಳ ಹಳೇ ವ್ಯವಸ್ಥೆಗೆ ಬ್ರೇಕ್, ಜಾರಿಯಾಗ್ತಿದೆ AI ಮ್ಯಾಜಿಕ್

ಭಾರತೀಯ ರೈಲ್ವೆ ಇಲಾಖೆಯು ಆಗಸ್ಟ್‌ನಿಂದ ತನ್ನ ಪ್ರಯಾಣಿಕರಿಗೆ ಟೆಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ (Passenger Reservation System - PRS) ಯನ್ನು ಸಂಪೂರ್ಣವಾಗಿ ನವೀಕರಿಸಲು ಮುಂದಾಗಿದೆ. 1986ರಿಂದ ಬಳಕೆಯಲ್ಲಿರುವ ಹಳೆಯ ವ್ಯವಸ್ಥೆಯನ್ನು ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹೊಸ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಈ ಬದಲಾವಣೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸ ವ್ಯವಸ್ಥೆ ಯಾಕೆ ಬೇಕು?

ಪ್ರಸ್ತುತ ಸುಮಾರು 88 ಶೇಕಡಾ ರಷ್ಟು ರೈಲು ಟಿಕೆಟ್‌ಗಳು ಆನ್‌ಲೈನ್ ಮೂಲಕ ಬುಕ್ಕಿಂಗ್ ಆಗುತ್ತಿವೆ. ಹಬ್ಬದ ಸಮಯ, ರಜೆ ದಿನಗಳು ಮತ್ತು ತತ್ಕಾಲ್ ಬುಕ್ಕಿಂಗ್ ವೇಳೆ ಹೆಚ್ಚಿನ ಒತ್ತಡದಿಂದ ಹಳೆಯ ವ್ಯವಸ್ಥೆ ತುಂಬಾ ನಿಧಾನವಾಗುತ್ತಿದ್ದು, ಇದರಿಂದ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್‌ಗಳನ್ನು ಸುಲಭವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ವೇಗ ಮತ್ತು ವಿಶ್ವಾಸಾರ್ಹತೆ ಹೆಚ್ಚಾಗಲಿದೆ.

Indian Railways New Reservation System

1986ರ ವ್ಯವಸ್ಥೆಗೆ ವಿದಾಯ

ಭಾರತೀಯ ರೈಲ್ವೆಯ PRS ವ್ಯವಸ್ಥೆಯನ್ನು ಮೊದಲ ಬಾರಿಗೆ 1986ರಲ್ಲಿ ಪರಿಚಯಿಸಿದ್ದು. 2002ರಲ್ಲಿ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾದ ಬಳಿಕವೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಇದೀಗ ಮೊದಲ ಬಾರಿಗೆ ದೊಡ್ಡ ಮಟ್ಟದ ತಾಂತ್ರಿಕ ಪರಿಷ್ಕರಣೆ ಕೈಗೊಳ್ಳಲಾಗಿದೆ.

Bullet Train Corridor: ದೇಶದ 2ನೇ ಬುಲೆಟ್ ರೈಲು ಕಾರಿಡಾರ್ ಘೋಷಣೆ: ಎಲ್ಲಿಂದ-ಎಲ್ಲಿಗೆ? ರೂಟ್, ಡಿಟೇಲ್ಸ್ ಇಲ್ಲಿದೆ
Bullet Train Corridor: ದೇಶದ 2ನೇ ಬುಲೆಟ್ ರೈಲು ಕಾರಿಡಾರ್ ಘೋಷಣೆ: ಎಲ್ಲಿಂದ-ಎಲ್ಲಿಗೆ? ರೂಟ್, ಡಿಟೇಲ್ಸ್ ಇಲ್ಲಿದೆ

RailOne ಆ್ಯಪ್‌ಗೆ ಹೊಸ ಶಕ್ತಿ

ಹೊಸ ಮೀಸಲಾತಿ ವ್ಯವಸ್ಥೆಯನ್ನು RailOne ಆ್ಯಪ್‌ನೊಂದಿಗೆ ಸಂಯೋಜಿಸಲಾಗುತ್ತಿದೆ. 2025ರ ಜುಲೈನಲ್ಲಿ ಬಿಡುಗಡೆಯಾದ ಈ ಆ್ಯಪ್ ಈಗಾಗಲೇ 3.5 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಈ ಆ್ಯಪ್ ಟಿಕೆಟ್ ಬುಕ್ಕಿಂಗ್, ರದ್ದತಿ ಹಾಗೂ ರೈಲಿನ ಲೈವ್ ಟ್ರ್ಯಾಕಿಂಗ್ ಸೌಲಭ್ಯಗಳನ್ನು ನೀಡುತ್ತದೆ. ಜೊತೆಗೆ ಪ್ಲಾಟ್‌ಫಾರ್ಮ್ ಮಾಹಿತಿ, ಕೋಚ್ ವಿವರಗಳು ಹಾಗೂ ದೂರು ದಾಖಲಿಸುವ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.

AI ಮೂಲಕ ವೇಟಿಂಗ್ ಲಿಸ್ಟ್ ಪಕ್ಕಾ ಮಾಹಿತಿ

ಹೊಸ ವ್ಯವಸ್ಥೆಯ ಪ್ರಮುಖ ವಿಶೇಷತೆ AI. ಭಾರತೀಯ ರೈಲ್ವೆ 2026ರ ಜೂನ್ 1ರಿಂದ ಎಸಿ ಹಾಗೂ ಸ್ಲೀಪರ್ ಕೋಚ್‌ಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಗೆ ಮಿತಿ ವಿಧಿಸುವ ಹೊಸ ನಿಯಮ ಜಾರಿಗೆ ತಂದಿದೆ. ಹೆಚ್ಚುತ್ತಿರುವ ಜನಸಂದಣಿ, ಬೋಗಿಗಳಲ್ಲಿ ನಿಂತೇ ಪ್ರಯಾಣಿಸುವ ಪರಿಸ್ಥಿತಿ ಹಾಗೂ ಸುರಕ್ಷತಾ ಸಮಸ್ಯೆಗಳನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದಂತೆ ಸ್ಲೀಪರ್ ಕೋಚ್‌ಗಳಲ್ಲಿ ವೇಟಿಂಗ್ ಲಿಸ್ಟ್ ಅನ್ನು ಒಟ್ಟು ಆಸನ ಸಾಮರ್ಥ್ಯದ ಸುಮಾರು 30%ಕ್ಕೆ ಮತ್ತು ಎಸಿ ಕೋಚ್‌ಗಳಲ್ಲಿ 60%ಕ್ಕೆ ಮಿತಿಗೊಳಿಸಲಾಗುತ್ತದೆ. ಇದರಿಂದ ದೃಢೀಕೃತ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚುವ ಜೊತೆಗೆ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ಸಿಗಲಿದೆ.

ಐಆರ್‌ಸಿಟಿಸಿ ಮತ್ತು ರೈಲ್‌ಒನ್: ರೈಲು ಟಿಕೆಟ್ ಬುಕ್ಕಿಂಗ್‌ಗೆ ಯಾವ ಆ್ಯಪ್ ಉತ್ತಮ?
ಐಆರ್‌ಸಿಟಿಸಿ ಮತ್ತು ರೈಲ್‌ಒನ್: ರೈಲು ಟಿಕೆಟ್ ಬುಕ್ಕಿಂಗ್‌ಗೆ ಯಾವ ಆ್ಯಪ್ ಉತ್ತಮ?

ಪ್ರಯಾಣಿಕರಿಗೆ ತೊಂದರೆ ಇಲ್ಲ

ಭಾರತೀಯ ರೈಲ್ವೆ ಇಲಾಖೆಯ ಈ ಹೊಸ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಈ ವೇಳೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಕ್ಷಾಂತರ ಪ್ರಯಾಣಿಕರಿಗೆ ತ್ವರಿತವಾಗಿ ಮತ್ತು ಸುಗಮವಾಗಿ ಟಿಕೆಟ್ ಬುಕ್ಕಿಂಗ್ ಅನುಭವ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ಕ್ರಮದಿಂದ ಇನ್ನು ಮುಂದೆ ರೈಲು ಟಿಕೆಟನ್ನು ಮುಂಗಡವಾಗಿ ಕಾಯ್ದುರಿಸುವುದು ಹಾಗೂ ಕ್ಯಾನ್ಸಲ್ ಮಾಡಿಸುವ ಸಮಸ್ಯೆ ಅಂತ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+