Chanakya Niti: ಯಾವಾಗಲೂ ಮೌನವೇ ಮಾತಾಗೋಲ್ಲ, ಇಂಥ ಸಂದರ್ಭದಲ್ಲಿ ಮಾತೇ ಮಾಣಿಕ್ಯ

ಯಾವಾಗಲೂ ಮಿತವಾಗಿ ಮಾತನಾಡುವುದು ಬುದ್ಧಿವಂತಿಕೆಯ ಸಂಕೇತ ಎನ್ನುವುದು ಹಲವರ ನಂಬಿಕೆ. ಇದು ಬಹಳ ಮಟ್ಟಿಗೆ ನಿಜ ಕೂಡಾ. ಆದರೆ, ಈ ಮೌನ ಕ್ರಮೇಣ ನಿಮ್ಮ ವ್ಯಕ್ತಿತ್ವ, ಸಂಬಂಧಗಳು ಮತ್ತು ಹಕ್ಕುಗಳಿಗೆ ಹಾನಿ ಮಾಡಲು ಪ್ರಾರಂಭಿಸಿದಾಗ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ, ಇಂದಿಗೂ ಪ್ರಸ್ತುತವಾಗಿರುವ ಜೀವನದ ಅನೇಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲಾ ಸಮಯದಲ್ಲೂ ಮಾತನಾಡುವುದು, ಅಥವಾ ಮಾತನಾಡಲೇಬೇಕು ಎನ್ನುವ ಕಾರಣಕ್ಕೆ ಮಾತನಾಡುವುದು ಬುದ್ಧಿವಂತಿಕೆಯಲ್ಲ. ಹಾಗಂತ ಪ್ರತಿಯೊಂದು ಸಂದರ್ಭದಲ್ಲೂ ಮೌನವಾಗಿರುವುದು ಕೂಡಾ ಸೂಕ್ತವಲ್ಲ. ಬೇಕಾದ ಜಾಗದಲ್ಲಿ ಮಾತನಾಡದೇ ಹೋದಾಗ ನಮ್ಮನ್ನು ನಾವೇ ದುರ್ಬಲರನ್ನಾಗಿ ಮಾಡಿಕೊಳ್ಳುತ್ತೇವೆ.

ಯಾವ ಸಂದರ್ಭಗಳಲ್ಲಿ ಮಾತು ಅನಿವಾರ್ಯ:

ಕೆಲವೊಂದು ಸಂದರ್ಭಗಳಲ್ಲಿ ಮೌನ ಮುರಿಯಲೇ ಬೇಕು. ಮೌನವೇ ಉತ್ತರ ಎಂದು ಕೂತು ಬಿಟ್ಟರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಜನರು ತಮ್ಮ ಅಭಿಪ್ರಾಯಗಳಿಗೆ ಬೆಲೆ ಕೊಡುವುದನ್ನು ನಿಲ್ಲಿಸಿದಾಗ, ನಮ್ಮ ಪರವಾಗಿ ನಿರ್ಧಾರಗಳನ್ನು ಬೇರೆಯವರು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಅಥವಾ ನಮ್ಮ ಕಠಿಣ ಪರಿಶ್ರಮದ ಫಲವನ್ನು ಇನ್ನೊಬ್ಬರು ಅನುಭವಿಸುವಾಗ, ನಾವು ಮೌನ ಮುರಿಯಲೇ ಬೇಕು. ಅಂದರೆ ಇಲ್ಲಿ ನಿಮ್ಮ ಮೌನವೇ ನಿಮಗೆ ಮುಳ್ಳಾಗುತ್ತಿದೆ ಎನ್ನುವುದು ಸ್ಪಷ್ಟ.‌ಚಾಣಾಕ್ಯ ನೀತಿಯಲ್ಲಿ ಹೇಳಿದ ಹಾಗೆ ಈ ಐದು ಸಂದರ್ಭಗಳಲ್ಲಿ ಮಾತನಾಡಲೇ ಬೇಕು.

Chanakya Niti
Chanakya Niti: ಕೌಟುಂಬಿಕ ಮೋಹದಿಂದ ದೂರವಾದ್ರೆ ಭಯ, ದುಃಖ ಹೋಗುತ್ತೆ
Chanakya Niti: ಕೌಟುಂಬಿಕ ಮೋಹದಿಂದ ದೂರವಾದ್ರೆ ಭಯ, ದುಃಖ ಹೋಗುತ್ತೆ

ಜನರು ನಿಮ್ಮ ಅಭಿಪ್ರಾಯವನ್ನು ಕೇಳುವುದನ್ನು ನಿಲ್ಲಿಸಿದಾಗ:

ಅದು ಕುಟುಂಬವೇ ಆಗಿರಲಿ, ಕೆಲಸ ಮಾಡುವ ಜಾಗವಾಗಿರಲಿ, ಸ್ನೇಹಿತರ ಮಧ್ಯೆಯಾಗಿರಲಿ ಜನರು ನಿಮ್ಮ ಮಾತುಗಳಿಗೆ ಬೆಲೆ ನೀಡಿದಾಗ ಮಾತ್ರ ಅಲ್ಲಿ ನಿಮಗೆ ಮರ್ಯಾದೆ. ಜನರು ಕ್ರಮೇಣ ನಿಮ್ಮ ಸಲಹೆಯನ್ನು ಪಡೆಯುವುದನ್ನು ಅಥವಾ ಒಂದು ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೇಳುವುದನ್ನು ನಿಲ್ಲಿಸಿದಾಗ ನೀವು ಎಚ್ಚೆತ್ತುಕೊಳ್ಳಬೇಕು. ನೀವು ಯಾವಾಗ ನೋಡಿದರೂ ಮೌನವಾಗಿದ್ದರೆ ನಿಮಗೆ ವಿಷಯದ ಬಗ್ಗೆ ಆಸಕ್ತಿ ಇಲ್ಲ ಅಥವಾ ಸ್ಪಷ್ಟ ಚಿಂತನೆ ಇಲ್ಲ ಎಂದು ಜನರಿಗೆ ಅನಿಸುತ್ತದೆ. ಮೀಟಿಂಗ್‌ಗಳಲ್ಲಿ ಮೌನವಾಗಿರುವ ಉದ್ಯೋಗಿಗಳು ಪ್ರಮುಖ ಚರ್ಚೆಗಳಿಂದ ಹೊರಗುಳಿಯುವ ಅನೇಕ ಉದಾಹರಣೆಗಳಿವೆ. ಚಾಣಕ್ಯ ಪ್ರಕಾರ, ಸರಿಯಾದ ಸಮಯದಲ್ಲಿ ಮಾತನಾಡುವುದು ವ್ಯಕ್ತಿಯ ಗುರುತು ಮತ್ತು ಗೌರವ ಎರಡನ್ನೂ ಬಲಪಡಿಸುತ್ತದೆ.

ಇತರರು ನಿಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ:

ನಿಮ್ಮ ಇಷ್ಟ ಕಷ್ಟಗಳನ್ನು ನಿರ್ಲಕ್ಷಿಸಿ ಇತರರು ನಿಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ,ನಿಮ್ಮ ಆಶಯಗಳಿಗೆ ಪ್ರಾಮುಖ್ಯತೆ ನೀಡದಿದ್ದರೆ, ಅದಕ್ಕೆ ನಿಮ್ಮ ಮೌನವೇ ಕಾರಣವಾಗಬಹುದು. ಒಬ್ಬ ವ್ಯಕ್ತಿಯು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದಿದ್ದಾಗ, ನಿಮಗೇನನಿಸುತ್ತದೆ ಎನ್ನುವುದು ಇತರರಿಗೂ ಮುಖ್ಯವಾಗುವುದಿಲ್ಲ. ಕಾಲ ಕಳೆಯುತ್ತಿದ್ದ ಹಾಗೆ ಎಲ್ಲರೂ ನಿಮ್ಮ ಆದ್ಯತೆಗಳನ್ನು ನಿರ್ಲಕ್ಷಿಸಬಹುದು. ಹಾಗಾಗಿ ನಿಮ್ಮ ಇಷ್ಟ ಕಷ್ಟಗಳನ್ನು ಅಭಿಪ್ರಾಯಗಳನ್ನು ಗೌರವಯುತ ರೀತಿಯಲ್ಲಿ ವ್ಯಕ್ತಪಡಿಸುವುದು ಮುಖ್ಯ.

ಸಂಬಂಧದಲ್ಲಿ ಈ ರೀತಿ ಆಗುತ್ತಿದೆ ಅಂದ್ರೆ ಮುರಿದು ಹೋಗಿತ್ತಿದೆ ಎಂದರ್ಥ, ಎಚ್ಚೆತ್ತುಕೊಳ್ಳೋದು ಅನಿವಾರ್ಯ
ಸಂಬಂಧದಲ್ಲಿ ಈ ರೀತಿ ಆಗುತ್ತಿದೆ ಅಂದ್ರೆ ಮುರಿದು ಹೋಗಿತ್ತಿದೆ ಎಂದರ್ಥ, ಎಚ್ಚೆತ್ತುಕೊಳ್ಳೋದು ಅನಿವಾರ್ಯ

ಜನರು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಲ್ಲಿಸಿದಾಗ:

ಪ್ರತಿಯೊಬ್ಬರ ಜೀವನದಲ್ಲೂ ತಮ್ಮ ಚಿಂತೆ, ದುಃಖ ಅಥವಾ ಕೋಪವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕಾದ ಕ್ಷಣಗಳು ಬರುತ್ತವೆ. ಆದರೆ ಕೆಲವರು ಪ್ರತಿಯೊಂದು ಭಾವನೆಯನ್ನು ತಮ್ಮೊಳಗೇ ಬಚ್ಚಿಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಮೊದಲಿಗೆ ಸಾಮಾನ್ಯವೆಂದು ತೋರುತ್ತದೆ, ಆದರೆ ದೀರ್ಘಾವಧಿಯಲ್ಲಿ, ಇದು ಸಂಬಂಧಗಳಲ್ಲಿ ಅಂತರವನ್ನು ಉಂಟುಮಾಡಬಹುದು.

ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಬಹುದು:

ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಿದ್ದಾಗ, ಇತರ ವ್ಯಕ್ತಿಗೆ ನಿಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ತಪ್ಪು ತಿಳುವಳಿಕೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಪ್ರಮುಖ ವಿಷಯಗಳನ್ನು ಸರಿಯಾದ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ ಮತ್ತು ಮಾನಸಿಕ ಹೊರೆ ಕಡಿಮೆಯಾಗುತ್ತದೆ ಎಂದು ಹೇಳುತ್ತದೆ ಚಾಣಕ್ಯ ನೀತಿ.

ನಿಮ್ಮ ಕಠಿಣ ಪರಿಶ್ರಮದ ಫಲ ಬೇರೆಯವರು ಪಡೆದಾಗ:

ಯಾರದ್ದೋ ಕೆಲಸದ ಫಲವನ್ನು ಇನ್ಯಾರೋ ಅನುಭವಿಸುವುದು ಕಚೇರಿಗಳಲ್ಲಿ ಸಾಮಾನ್ಯವಾಗಿ ಕಂಡುರುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ ತಮ್ಮ ಕೊಡುಗೆಗಳ ಬಗ್ಗೆ ಬಹಿರಂಗವಾಗಿ ಚರ್ಚಿಸದಿರುವುದೇ ಇದಕ್ಕೆ ಕಾರಣ. ಚಾಣಕ್ಯ ನೀತಿಯ ಪ್ರಕಾರ, ವಿನಮ್ರರಾಗಿರುವುದು ಒಳ್ಳೆಯದು, ಆದರೆ ನಿಮ್ಮ ಸಾಧನೆಗಳನ್ನು ಸಂಪೂರ್ಣವಾಗಿ ಮರೆಮಾಡುವುದು ಖಂಡಿತವಾಗಿಯೂ ಹಾನಿಕಾರಕ. ನಿಮ್ಮ ಕೆಲಸದಲ್ಲಿ ನಿಮ್ಮ ಪಾತ್ರವನ್ನು ನೀವು ಸ್ಪಷ್ಟಪಡಿಸದಿದ್ದರೆ, ಜನರು ಅದನ್ನು ಸುಲಭವಾಗಿ ಕಡೆಗಣಿಸಿ ಬಿಡುತ್ತಾರೆ.

ತಪ್ಪು ಎಂದು ತಿಳಿದಿದ್ದರೂ ವಿರೋಧಿಸದಾಗ:

ಮೌನಂ ಸಮ್ಮತಿ ಲಕ್ಷಣಂ ಅನ್ನುತ್ತೇವೆ. ಅಂದರೆ ನಾವು ಮೌನವಾಗಿದ್ದೇವೆ ಎಂದರೆ ನಮ್ಮ ಸಮ್ಮತಿ ಇದೆ ಎಂದರ್ಥ. ಇದು ಬಹುಶಃ ಅತ್ಯಂತ ಗಂಭೀರ ಸಂಕೇತಗಳಲ್ಲಿ ಒಂದಾಗಿದೆ. ನಿಮ್ಮ ಕಣ್ಣೆದುರೇ ತಪ್ಪು ನಡೆಯುತ್ತಿದ್ದರೂ ಪ್ರತಿ ಬಾರಿಯೂ ಮೌನವಾಗಿದ್ದರೆ, ಜನರು ನಿಮ್ಮ ಮೌನವನ್ನು ಬೆಂಬಲ ಅಥವಾ ಒಪ್ಪಿಗೆ ಎಂದು ಅರ್ಥೈಸಿಕೊಳ್ಳಬಹುದು. ಅನ್ಯಾಯದ ಎದುರು ಮೌನವಾಗಿರುವುದು ವ್ಯಕ್ತಿಗೆ ಮಾತ್ರವಲ್ಲದೆ ಸಮಾಜಕ್ಕೂ ಹಾನಿ. ಕೆಲಸದ ಸ್ಥಳದಲ್ಲಿ, ಕುಟುಂಬದಲ್ಲಿ ಅಥವಾ ಸಾಮಾಜಿಕ ಜೀವನದಲ್ಲಿ, ತಪ್ಪುಗಳನ್ನು ವಿರೋಧಿಸುವುದು ಮತ್ತು ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಅತ್ಯಗತ್ಯ.

ಆಚಾರ್ಯ ಚಾಣಕ್ಯರ ತತ್ವಗಳು ನೀವು ನಿರಂತರವಾಗಿ ಮಾತನಾಡುತ್ತಿರಬೇಕು ಎಂದು ಹೇಳುವುದಿಲ್ಲ. ಅವರ ಸಂದೇಶವು ಸಮತೋಲನವನ್ನು ಆಧರಿಸಿದೆ. ಅಗತ್ಯವಿದ್ದಾಗ ತಾಳ್ಮೆಯಿಂದಿರಿ, ಆದರೆ ನಿಮ್ಮ ಗುರುತು, ಹಕ್ಕುಗಳು, ಭಾವನೆಗಳು ಅಥವಾ ಘನತೆಗೆ ಧಕ್ಕೆಯಾದಾಗ ಮಾತನಾಡುವುದು ಬಹಳ ಮುಖ್ಯ ಎನ್ನುವುದನ್ನು ಸಾರುತ್ತವೆ. ಕೆಲವೊಮ್ಮೆ, ಸರಿಯಾದ ಸಮಯದಲ್ಲಿ ಮಾತನಾಡುವ ಒಂದೇ ಒಂದು ಮಾತು ದೀರ್ಘ ಮೌನಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+