ತಿರುವನಂತಪುರಂನಲ್ಲಿ ಏಳು ಜನ ಕೌನ್ಸಿಲರ್‌ಗೆ ಕೊರೊನಾ ಪಾಸಿಟಿವ್

ತಿರುವನಂತಪುರಂ, ಜುಲೈ 25: ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯ ಮೂವರು ಕೌನ್ಸಿಲರ್‌ಗೆ ಕೊರೊನಾ ವೈರಸ್ ಪಾಸಿಟಿವ್ ದೃಢವಾಗಿದೆ. ಈ ಮೂಲಕ ತಿರುವನಂತಪುರಂ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಏಳು ಜನ ಕೌನ್ಸಿಲರ್‌ಗೆ ಸೋಂಕು ತಗುಲಿದೆ.

ವಂಚಿಯೂರ್, ತಂಪನೂರ್ ಮತ್ತು ಚೆಲ್ಲಮಂಗಲಂ ವಾರ್ಡ್‌ಗಳ ಕೌನ್ಸಿಲರ್‌ಗಳಿಗೆ ಹೊಸದಾಗಿ ಸೋಂಕು ತಗುಲಿದೆ. ಇದಕ್ಕೂ ಮುಂಚೆ ಬುಧವಾರ ವಾಝುಟುಕೋನಂ, ಚೆರುವಾಯ್ಕಲ್, ಮುತ್ತಡಾ ಮತ್ತು ಪಟ್ಟೋಮ್ ವಾರ್ಡ್‌ಗಳ ಕೌನ್ಸಿಲರ್‌ಗಳಿಗೆ ಕೊವಿಡ್ ತಗುಲಿತ್ತು.

ಇನ್ನು 25 ಕೌನ್ಸಿಲರ್‌ಗಳು ಮತ್ತು ಸಿಬ್ಬಂದಿಗಳ ಸಹ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ತಿರುವನಂತಪುರಂ ನಗರ ನಿಗಮ ಕಚೇರಿಯಲ್ಲಿ ಬುಧವಾರ ಸರ್ವಪಕ್ಷ ಸಭೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಆಗಿದ್ದ ಕೌನ್ಸಿಲರ್‌ಗಳು ಸಹ ಭಾಗವಹಿಸಿದ್ದರು.

Seven councillors In Thiruvananthapuram have tested positive for COVID19

ಇನ್ನು ಕೇರಳದಲ್ಲಿ ನಿನ್ನೆ 1,078 ಹೊಸ ಕೋವಿಡ್-19 ಪಾಸಿಟಿವ್ ಕೇಸ್‌ಗಳು ದೃಢವಾಗಿತ್ತು. ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ನಿನ್ನೆ ಸಂಜೆ ವೇಳೆ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 9,468ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+