9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆ ವಿರುದ್ಧ ದೂರು
ಮಲಪ್ಪುರಂ (ಕೇರಳ), ಫೆಬ್ರವರಿ 11: ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವತ್ತಾರು ವರ್ಷದ ಮಹಿಳೆ ವಿರುದ್ಧ ತೆನ್ಹಿಪ್ಪಲಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸ್ಥಳೀಯ ವೈದ್ಯರ ಬಳಿ ಬಾಲಕನು ಈ ವಿಚಾರದ ತಿಳಿಸಿದ ನಂತರ ವಾರದ ಹಿಂದೆ ಘಟನೆ ಬೆಳಕಿಗೆ ಬಂದಿದೆ.
ಆ ಕೂಡಲೆ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಆ ಅಧಿಕಾರಿಗಳು ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡು, ದೂರನ್ನು ಪೊಲೀಸರಿಗೆ ವರ್ಗಾಯಿಸಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಹಿಳೆ ವಿರುದ್ಧ ಪೊಲೀಸರು ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇದರಿಂದ ಆ ಬಾಲಕನ ಮಾನಸಿಕ ಸ್ಥಿತಿಯೇ ಮೇಲೆ ಪರಿಣಾಮ ಬೀರಿದೆ. ಆರೋಪಿ ಮಹಿಳೆಯು ಬಾಲಕನಿಗೆ ಸಂಬಂಧಿಯೇ ಆಗಿದ್ದು, ಆತನ ಮನೆಯ ಹತ್ತಿರವೇ ವಾಸವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸಂತ್ರಸ್ತ ಹಾಗೂ ಆರೋಪಿಯ ಕುಟುಂಬಗಳ ಮಧ್ಯೆ ವ್ಯಾಜ್ಯವಿದೆ. ಈಗ ಮಾಡಿರುವ ಆರೋಪಕ್ಕೂ ಹಾಗೂ ಭಿನ್ನಾಭಿಪ್ರಾಯಕ್ಕೂ ಸಂಬಂಧ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಮುಂಬರುವ ದಿನಗಳಲ್ಲಿ ಆರೋಪಿಯ ಹೇಳಿಕೆ ಕೂಡ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಎರ್ನಾಕುಲಂನಲ್ಲಿ ಇಂಥದ್ದೇ ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿತ್ತು. ಕ್ಯಾನ್ಸರ್ ಪೀಡಿತ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಕೇಳಿಬಂದಿತ್ತು.












Click it and Unblock the Notifications