ಕೇರಳ ಚುನಾವಣೆ: ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ
ತಿರುವನಂತಪುರಂ, ಮಾರ್ಚ್ 30: ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸಿದ್ದಾರೆ.
ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು, ಆಲಪ್ಪುಳದಲ್ಲಿ ರೋಡ್ ಶೋ ನಡೆಸಿದ್ದಾರೆ.
ಕಾಯಂಕುಲಂನ ಕಾಂಗ್ರೆಸ್ ಅಭ್ಯರ್ಥಿ ಅರಿಥಾ ಬಾಬು ಅವರ ಪರವಾಗಿ ರೋಡ್ ಶೋ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ ಹಳದಿ ಸಲ್ವಾರ್ ಕಮೀಜ್‌ನಲ್ಲಿ ಆಗಮಿಸಿದ್ದರು.
26 ವರ್ಷದ ಅರಿಥಾ ಕೇರಳದ ಅತಿ ಕಡಿಮೆ ವರ್ಷದ ಅಭ್ಯರ್ಥಿಯಾಗಿದ್ದಾರೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 12ನೇ ಮಾರ್ಚ್ ಅಧಿಸೂಚನೆ. 20ನೇ ಮಾರ್ಚ್ ನಾಮಪತ್ರ ಪರಿಶೀಲನೆ, 22 ಮಾರ್ಚ್ ನಾಮಪತ್ರ ಹಿಂಪಡೆಯುವುದು. ಏಪ್ರಿಲ್ 6ರಂದು ಚುನಾವಣೆ. ಮಲ್ಲಾಪುರ ಸಂಸತ್‌ಗೆ ಉಪ ಚುನಾವಣೆಯು ಕೂಡ ಏಪ್ರಿಲ್ 6ರಂದು ನಡೆಯಲಿದೆ.

ಕಾಂಗ್ರೆಸ್ಸಿಗೆ ಗೆಲ್ಲಬಹುದು ಎನ್ನುವ ನಿರೀಕ್ಷೆ ಇರುವ ರಾಜ್ಯವೆಂದರೆ ಅದು ಕೇರಳ. ಯಾಕೆಂದರೆ, ಅಲ್ಲಿ ಒಂದು ಬಾರಿ ಯುಡಿಎಫ್ ಇನ್ನೊಂದು ಬಾರಿ ಎಲ್ ಡಿಎಫ್ ಅಧಿಕಾರಕ್ಕೆ ಬರುವುದು ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ.
ಕೇರಳದಲ್ಲಿ ಒಗ್ಗಟ್ಟಾಗಿ ಚುನಾವಣಾ ತಂತ್ರ ರೂಪಿಸಿ ಮತದಾರರ ಬಳಿ ಹೋದರೆ ಕಾಂಗ್ರೆಸ್ ಮೈತ್ರಿಕೂಟ ಮತ್ತೆ ಇಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಇಲ್ಲದೆ ಏನಿಲ್ಲ. ಆದರೆ, ಸಿಕ್ಕ ಈ ಒಳ್ಳೆಯ ಅವಕಾಶವನ್ನು ಕಾಂಗ್ರೆಸ್ ತಾನಾಗಿಯೇ ಹಾಳು ಮಾಡಿಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಏಳಲು ಹಲವು ಕಾರಣಗಳಿವೆ.
ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗೆಸ್ಸಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಕಾರಣ, ಆ ಪಕ್ಷದ ನಾಯಕತ್ವ. ಯಾರು ಪಕ್ಷವನ್ನು ಬಲಪಡಿಸಬೇಕೋ ಅವರ ವಿರುದ್ದವೇ ಹಲವು ಹಿರಿಯ ಮುಖಂಡರು ಅಪಸ್ವರನ್ನು ಎತ್ತುತ್ತಿರುವುದು.












Click it and Unblock the Notifications