ಲೋಕ ಸಮರ: ವಯನಾಡಿನಲ್ಲಿ ಇಂದು ಸ್ಮೃತಿ, ಪ್ರಿಯಾಂಕಾ ರೋಡ್‌ ಶೋ

ತಿರುವನಂತಪುರ, ಏ.20: ಕಾಂಗ್ರೆಸ್ ಹಾಗೂ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸ್ಮೃತಿ ಇರಾನಿ ವಯನಾಡಿನಲ್ಲಿ ಶನಿವಾರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತೀವ್ರ ಸ್ಪರ್ಧೆಯೊಡ್ಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಯನಾಡಿನಲ್ಲೂ ರಾಹುಲ್ ವಿರುದ್ಧ ಪ್ರಚಾರಕ್ಕೆ ಮುಂದಾಗಿದ್ದಾರೆ.

Priyanka Gandhi and Smriti Irani in Wayanad today

ಎನ್‌ಡಿಎ ಅಭ್ಯರ್ಥಿ ಪರ ಮತ ಯಾಚನೆಗೆ ರೋಡ್ ಶೋ ಹಾಗೂ ಪ್ರಚಾರ ಸಭೆಯನ್ನು ಸ್ಮೃತಿ ಇರಾನಿ ನಡೆಸಲಿದ್ದಾರೆ.
ಅತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರೋಡ್ ಶೋ ನಡೆಸುತ್ತಿದ್ದಾರೆ.

ವಯನಾಡಿನಲ್ಲಿ ರಾಹುಲ್ ನಾಮಪತ್ರ ಸಂದರ್ಭದಲ್ಲಿ ರೋಡ್‌ಶೋನಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಕೆಲ ದಿನಗಳ ಹಿಂದೆ ಅಸ್ಸಾಂನಲ್ಲಿ ಪ್ರಿಯಾಂಕ ರೋಡ್‌ ಶೋ ನಡೆಸಿದ್ದರು.

ಇದನ್ನು ಹೊರತುಪಡಿಸಿದರೆ ಉತ್ತರ ಪ್ರದೇಶದಿಂದ ಹೊರಗಡೆ ಪ್ರಿಯಾಂಕಾ ಯಾವುದೇ ಪ್ರಚಾರ ಸಭೆ ನಡೆಸಿಲ್ಲ. ರಾಹುಲ್‌ಗೆ ಪ್ರತಿಷ್ಠೆಯ ಕ್ಷೇತ್ರವಾಗಿರುವ ಅಮೇಥಿ ಹಾಗೂ ವಯನಾಡಿನಲ್ಲಿ ಗೆಲುವನ್ನು ಸುಲಭಗೊಳಿಸುವ ಜವಾಬ್ದಾರಿ ಪ್ರಿಯಾಂಕಾ ಮೇಲಿದೆ ಎನ್ನಲಾಗಿದೆ.

ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ನಡುವೆ ಅಮೇಥಿಯಲ್ಲಿ ಸ್ಪರ್ಧೆ ತೀವ್ರ ತುರುಸುಗೊಂಡಿದೆ. ಇದೇ ಸೋಲಿನ ಭಯದಿಂದ ರಾಹುಲ್ ವಯನಾಡಿಗೆ ಬಂದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಆದರೆ ರಾಹುಲ್ ರಾಹುಲ್ ಇದನ್ನು ನಿರಾಕರಿಸಿದ್ದು ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ನೀಡಲು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+