ಕೇರಳದಲ್ಲಿಂದು ಪತ್ತೆಯಾಗಿದ್ದು ಕೇವಲ ಒಂದೇ ಕೊರೊನಾ ಕೇಸ್

ತಿರುವನಂತಪುರಂ, ಏಪ್ರಿಲ್ 15: ಕೇರಳದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎನ್ನುವುದು ಮತ್ತೆ ಸಾಕ್ಷಿ ಸಮೇತ ಸಾಬೀತಾಗಿದೆ. ಏಪ್ರಿಲ್ 15 ರಂದು ರಾಜ್ಯದಲ್ಲಿ ಕೇವಲ ಒಂದೇ ಒಂದು ಸೋಂಕು ದೃಢವಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡ ಕೇರಳದಲ್ಲಿ ಈಗ ಕೊವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕು ಹರಡುವಿಕೆಯಲ್ಲಿ ಹಾಗೂ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಸಮಾಧಾನ ತಂದಿದೆ.

ಇದುವರೆಗೂ ಕೇರಳದಲ್ಲಿ ಒಟ್ಟು 387 ಜನರಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. 218 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನು 167 ಕೇಸ್ ಚಾಲ್ತಿಯಲ್ಲಿದೆ.

Only 1 New COVID19 Case Reported In Kerala

ಹಾಗ್ನೋಡಿದ್ರೆ, ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಶೇಕಡವಾರು ಸಂಖ್ಯೆಯಲ್ಲಿ ಕೇರಳ ರಾಜ್ಯವೇ ಅಗ್ರಸ್ಥಾನದಲ್ಲಿದೆ. 387 ಕೇಸ್‌ಗಳ ಪೈಕಿ 218 ಕೇಸ್ ಚೇತರಿಕೆ ಕಂಡಿದೆ. ಕೇರಳ ಬಿಟ್ಟರೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಜನರು ಚೇತರಿಕೆ ಕಂಡಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2801, ಚೇತರಿಕೆ ಕಂಡವರ ಸಂಖ್ಯೆ 259.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಇದುವರೆಗೂ 11,933 ಸೋಂಕಿತರು ದಾಖಲಾಗಿದ್ದಾರೆ. 392 ಜನರು ಮೃತಪಟ್ಟಿದ್ದಾರೆ. 1344 ಜನರು ಚೇತರಿಕೆ ಕಂಡಿದ್ದು, 10197 ಚಾಲ್ತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+