ಮನೆಯಲ್ಲಿಯೇ 10 ವರ್ಷಗಳ ಕಾಲ ಪ್ರೇಯಸಿಯನ್ನು ಅಡಗಿಸಿಟ್ಟಿದ್ದ ಪ್ರಿಯಕರ!

ತಿರುವನಂತಪುರಂ, ಜೂನ್ 10: ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಮನೆಯವರಿಗೂ ತಿಳಿಯದಂತೆ ಮನೆಯಲ್ಲೇ 10 ವರ್ಷಗಳ ಕಾಲ ಅಡಗಿಸಿಟ್ಟಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಕೇರಳದಲ್ಲಿ ಈ ಘಟನೆ ನಡೆದಿದೆ, 2010ರ ಫೆಬ್ರವರಿಯಲ್ಲಿ 19 ವರ್ಷದ ಯುವತಿ ನಾಪತ್ತೆಯಾಗಿದ್ದಳು, ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಸ್ನೇಹಿತರ ಮನೆ, ಸಂಬಂಧಿಕರ ಮನೆ ಎಲ್ಲಾ ಕಡೆಯೂ ಹುಡುಕಿ ಸುಸ್ತಾಗಿದ್ದರು.

ಆದರೆ ಯುವತಿ ಕಳೆದ 10 ವರ್ಷಗಳಿಂದ ಅದೇ ಗ್ರಾಮದಲ್ಲಿರುವ ಪ್ರಿಯಕರನ ಮನೆಯಲ್ಲಿದ್ದಳು. ಯುವಕನ ಮನೆ ಕೇವಲ 100 ಮೀಟರ್ ದೂರದಲ್ಲಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ, ಎಲ್ಲರೂ ಮಲಗಿದ ಸಂದರ್ಭದಲ್ಲಿ ಸ್ನಾನಕ್ಕೆ, ಶೌಚಕ್ಕೆ ಆಕೆಯನ್ನು ಕರೆದೊಯ್ಯುತ್ತಿದ್ದ, ತಾನು ಕೂಡ ಕೋಣೆಯಲ್ಲೇ ಊಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Love

ಆದರೆ ಯಾವತ್ತೂ ತನ್ನ ಕೋಣೆಗೆ ಯಾರಿಗೂ ಬರಲು ಬಿಡುತ್ತಿರಲಿಲ್ಲ, ಯಾಕೆಂದು ಕೇಳಿದರೆ ಆತ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದ ಬಳಿಕ ಅವನ ಬಳಿ ಮನೆಯವರು ಸುಳಿಯುವುದನ್ನೇ ಬಿಟ್ಟುಬಿಟ್ಟಿದ್ದರು.

ಮೂರು ತಿಂಗಳ ಹಿಂದಷ್ಟೇ ಯುವಕ ನಾಪತ್ತೆಯಾಗಿದ್ದ, ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು, ಯುವಕನನ್ನು ಆತನ ಸಹೋದರ ಕರೆದುಕೊಂಡು ಪೊಲೀಸ್‌ಠಾಣೆಗೆ ಬಂದಿದ್ದಾಗ ವಿಷಯ ಬಯಲಿದೆ ಬಂದಿತ್ತು.

ಇಬ್ಬರದ್ದೂ ಜಾತಿ ಬೇರೆಯಾಗಿರುವ ಕಾರಣ ಮನೆಯವರಲ್ಲಿಯೂ ಹೇಳುವ ಪರಿಸ್ಥಿತಿಯಲ್ಲಿ ಅವರಿರಲಿಲ್ಲ, ಮನೆಯಿಂದ ಓಡಿಹೋಗೋಣವೆಂದರೂ ಹಣವಿರಲಿಲ್ಲ, ಹೀಗಾಗಿ ಇಷ್ಟು ವರ್ಷ ಮನೆಯಲ್ಲಿಯೇ ಇದ್ದರು.

ಈಗ ಬೇರೆ ಮನೆ ಮಾಡಿ ತಾನು ಪ್ರೇಯಸಿಯನ್ನು ಬೇರೆ ಮನೆಗೆ ಕರೆದೊಯ್ದಿದ್ದ ಎನ್ನುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+