ಲುಲು ಗ್ರೂಪ್ ಮುಖ್ಯಸ್ಥರಿಂದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ಕೊಚ್ಚಿ, ಏಪ್ರಿಲ್ 11: ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ ಹಾಗೂ ಅವರ ಪತ್ನಿ ಇದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ಭಾನುವಾರದಂದು ನಡೆದಿದೆ. ಆದರೆ, ಅದೃಷ್ಟವಶಾತ್ ಉದ್ಯಮಿ ಹಾಗೂ ಜೊತೆಗಿದ್ದವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪನಂಗಾಡ್ ಎಂಬಲ್ಲಿರುವ ಕೇರಳ ಮೀನುಗಾರಿಕೆ ಹಾಗೂ ಸಮುದ್ರ ಅಧ್ಯಯನ ವಿಶ್ವವಿದ್ಯಾಲಯ (KUFOS)ದ ಆವರಣದಲ್ಲಿದ್ದ ಔಗು ಪ್ರದೇಶದಲ್ಲಿ ಹೆಲಿಕಾಪ್ಟರ್ ಕುಸಿದು ಬಿದ್ದಿದೆ.
ಎಂ.ಎ. ಯುಸುಫ್ ಅಲಿ ದಂಪತಿ ಜೊತೆಗೆ ಐದು ಮಂದಿ ಹೆಲಿಕಾಪ್ಟರ್‌ನಲ್ಲಿದ್ದರು. ಪ್ರಯಾಣಿಕರು ಮತ್ತು ಪೈಲಟ್‌ಗಳು ಸುರಕ್ಷಿತವಾಗಿದ್ದು, ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲೇಕ್ ಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂಬಂಧಿಕರನ್ನು ನೋಡಲು ಯುಸುಫ್ ಅಲಿ ದಂಪತಿ ಪ್ರಯಾಣ ಬೆಳೆಸಿದ್ದಾಗ ಈ ಅಪಘಾತ ನಡೆದಿದೆ.

ಬೆಳಗ್ಗೆ 8.45ರ ಸುಮಾರಿಗೆ ಹೆಲಿಕಾಪ್ಟರ್ ನೆಲಕಪ್ಪಳಿಸಿದಾಗ ಭಾರಿ ಶಬ್ದವನ್ನು ಕೇಳಿ ಬಂದಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ವಿವಿ ಆವರಣದಲ್ಲಿ ಮಳೆ ಸುರಿಯುತ್ತಿದ್ದು, ಕಾಪ್ಟರ್‌ನಲ್ಲಿದ್ದ ಯೂಸುಫ್ ಅಲಿ ಅವರ ಬೆನ್ನಿಗೆ ಪೆಟ್ಟಾಗಿದ್ದು, ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications