ಭಾರಿ ನಷ್ಟ ಅನುಭವಿಸಿದ ಕೊಚ್ಚಿ ಮೆಟ್ರೋ ಟ್ರೈನ್ ಸೇವೆ

ಕೊಚ್ಚಿ, ಜನವರಿ 24: ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಮೆಟ್ರೋ ಸೇವೆಗಳಿಗೆ ಹೋಲಿಸಿದರೆ ಕೊಚ್ಚಿ ಮೆಟ್ರೋ ಸೇವೆ ಕಳೆದ ವರ್ಷದಲ್ಲಿ ಭಾರಿ ನಷ್ಟ ಅನುಭವಿಸಿದೆ. ಕೇರಳದ ಬಹುದೊಡ್ಡ ಮೂಲ ಸೌಕರ್ಯ ಯೋಜನೆ ಎನಿಸಿದ ಮೆಟ್ರೋ ಸೇವೆ ಕಳೆದ ವರ್ಷ 281 ಕೋಟಿ ರು ನಿವ್ವಳ ನಷ್ಟ ದಾಖಲಿಸಿದೆ

ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (ಕೆಎಂಆರ್ ಎಲ್) 2018-19ರ ಅವಧಿಯಲ್ಲಿ ಪ್ರತಿ ದಿನ 34, 588 ಪ್ರಯಾಣಿಕರು ಸಂಚರಿಸಿದ್ದು, 11.24 ಲಕ್ಷ ರು ಆದಾಯ ಬಂದಿದೆ. ವಾರ್ಷಿಕವಾಗಿ ನಿರ್ವಹಣೆ ವೆಚ್ಚ 101.30 ಕೋಟಿ ರು ತಗುಲುತ್ತಿದೆ.

ಸೆಪ್ಟೆಂಬರ್ 2019ರಂದು ಮಹಾರಾಜಸ್-ಥಿಕೂಡಂ ಲೇನ್ ಆರಂಭವಾದ ಬಳಿಕ ಸರಾಸರಿ ಪ್ರಯಾಣಿಕರ ಸಂಖ್ಯೆ ಪ್ರತಿ ದಿನಕ್ಕೆ 80, 000ಕ್ಕೇರಿತು. ಆದಾಯ ಕೂಡಾ 14.66 ಲಕ್ಷ ರುಗೇರಿದೆ.

Kochi Metro posts net loss of Rs.281.23 crore

ಕೊಚ್ಚಿ ಮೆಟ್ರೋ ರೈಲ್ ನಿಯಮ ರೂಪುರೇಷೆಯಂತೆ ಪ್ರತಿ ದಿನ 2.75 ಲಕ್ಷ ಪ್ರಯಾಣಿಕರ ನಿರೀಕ್ಷಿಸಲಾಗಿತ್ತು. 18.2 ಕಿ. ಮೀ ಆಳುವಾ ದಿಂದ ಮಹಾರಾಜಸ್ ಮಾರ್ಗ ಸದ್ಯ ಚಾಲನೆಯಲ್ಲಿದೆ.

2017ರ ಜೂನ್ 19ರಂದು ಆಳುವಾದಿಂದ ಪಳರಿವಟ್ಟಂ, 2017ರ ಅಕ್ಟೋಬರ್ 03ರಂದು ಪಳರಿವಟ್ಟಂನಿಂದ ಮಹಾರಾಜಸ್ ತನಕ ರೈಲು ಮಾರ್ಗ ಆರಂಭವಾಗಿದೆ. ಜವಹಾರ ಲಾಲ್ ನೆಹರೂ ಸ್ಟೇಡಿಯಂನಿಂಡ ಕಾಕ್ಕನಾಡ್ ಇನ್ಫೋ ಪಾರ್ಕ್ ತನಕದ ಲೇನ್ ಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿಲ್ಲ.

ಫ್ರಾನ್ಸಿನ ಫ್ರಾಕೈಸ್ ಡಿ ಡೆವಲಪ್ಮೆಂಟ್ ನಿಂದ 2014 ಸಂಸ್ಥೆಯಿಂದ 1500 ಕೋಟಿ ರು ಸಾಲ ಪಡೆದಿರುವ ಕೇರಳ ಸರ್ಕಾರ ಈಗ ಮೆಟ್ರೋ ಸಾರಿಗೆಯಿಂದ ನಿರೀಕ್ಷಿತ ಆದಾಯ ಕಾಣದೆ ಪರಿತಪಿಸಿದೆ. ಇದಲ್ಲದೆ ಎರ್ನಾಕುಲಂ ಜಿಲ್ಲೆ ಸಹಕಾರಿ ಬ್ಯಾಂಕ್, ಕೆನರಾ ಬ್ಯಾಂಕಿನಿಂದಲೂ ಕೆಎಂಆರ್ ಎಲ್ ಸಾಲ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+