ಕೇರಳದಲ್ಲಿ ಎಲ್‌ಡಿಎಫ್- ಯುಡಿಎಫ್ ಜಟಾಪಟಿ; ಸಿಎಂ ಸ್ಥಾನಕ್ಕೆ ಪಿಣರಾಯಿ ಸೂಕ್ತ!
ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಕೇರಳ ಚುನಾವಣೆಯಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸಲಿದೆ. ಬಿಜೆಪಿ ಒಂದು ಸ್ಥಾನಗಳಿಸಿದರೆ ಹೆಚ್ಚು ಹಾಗೂ ಪಿಣರಾಯಿ ವಿಜಯನ್ ಸಿಎಂ ಆಗಲು ಸೂಕ್ತ ಎಂದು ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಇಂದು ಫಲಿತಾಂಶ ನೀಡಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಅನೇಕ ಸಂಸ್ಥೆಗಳು ಪ್ರಕಟಿಸುತ್ತಿವೆ. ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರಕ್ಕೇರಲಿದ್ದು, ಯುಡಿಎಫ್ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದು ವರದಿ ಬಂದಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

ಎಲ್‌ಡಿಎಫ್ ಮೇಲುಗೈ ಸಾಧ್ಯತೆ
ಲೆಫ್ಟ್ ಡೆಮಾಕ್ರಾಟಿಕ್ ಫ್ರಂಟ್ (ಎಲ್‌ಡಿಎಫ್) 140 ಸ್ಥಾನಗಳ ಪೈಕಿ 82 ಸ್ಥಾನ ಗಳಿಸುವ ಸಾಧ್ಯತೆಯಿದ್ದು, ಅಧಿಕಾರ ಉಳಿಸಿಕೊಳ್ಳಲಿದೆ. ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಯುಡಿಎಫ್) 56 ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಮಾತ್ರ ಗಳಿಸುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ- ಸಿ ವೋಟರ್ಸ್ ಸಮೀಕ್ಷೆ ಹೇಳಿದೆ.
ಎಲ್‌ಡಿಎಫ್:78-86
ಯುಡಿಎಫ್: 52-60
ಬಿಜೆಪಿ- 0-2
ಇತರೆ 0-2

ಶೇಕಡಾವಾರು ಮತ ಗಳಿಕೆ
ಶೇಕಡಾವಾರು ಮತ ಗಳಿಕೆಯಲ್ಲಿ ಎಲ್‌ಡಿಎಫ್ 2016ಕ್ಕೆ ಹೋಲಿಸಿದರೆ 0.6% ಕಳೆದುಕೊಂಡು 2021ರಲ್ಲಿ ಶೇ 43.5ರಷ್ಟು ಮತ ಗಳಿಸಲಿದೆ. ಯುಡಿಎಫ್ 2016ರಲ್ಲಿ ಶೇ 38.8ರಿಂದ ಶೇ 37.6ಕ್ಕೆ ಕುಸಿಯಲಿದೆ. ಒಟ್ಟಾರೆ, ಮತದಾನ ಹಾಗೂ ಗೆಲುವು ಶೇಕಡಾವಾರು ಎಲ್‌ಡಿಎಫ್ 44%, ಯುಡಿಎಫ್ 30.5%, ಬಿಜೆಪಿ 7.6 %, ಇತರೆ 17.9% ಎಂದು ಜನತೆ ಮತ ನೀಡಿದ್ದಾರೆ.

2016ರಲ್ಲಿ ಫಲಿತಾಂಶ
2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು. ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು.

ಪಿಣರಾಯಿ ವಿಜಯನ್ ಜನಪ್ರಿಯತೆ
ಸಿಎಂ ಪಿಣರಾಯಿ ವಿಜಯನ್ ಜನಪ್ರಿಯತೆ ತಗ್ಗಿಲ್ಲ, ಶೇ 42.34 ಮಂದಿ ವಿಜಯನ್ ಅವರೇ ಮುಂದೆ ಸಿಎಂ ಆಗಲು ಸೂಕ್ತ ಎಂದಿದ್ದಾರೆ.
ಸ್ಥಳೀಯ ಮಾಧ್ಯಮ ಸಂಸ್ಥೆಗಳು ನೀಡಿರುವ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಎಲ್ ಡಿ ಎಫ್ ಜಯಭೇರಿ ಬಾರಿಸಲಿದೆ ಎಂದು ವರದಿ ಬಂದಿದೆ. 72 ರಿಂದ 78 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಡಿಎಫ್ 65 ಹಾಗೂ ಬಿಜೆಪಿ 3 ರಿಂದ 7 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಎರಡನೇ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 68 ರಿಂದ 78 ಸ್ಥಾನ, ಯುಡಿಎಫ್ 62 ರಿಂದ 72 ಸ್ಥಾನ ಹಾಗೂ ಬಿಜೆಪಿ 2 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications