48 ಸಾವಿರ ಹಕ್ಕಿಗಳನ್ನು ಕೊಲ್ಲಲು ಆದೇಶಿಸಿದ ಕೇರಳ ಸರ್ಕಾರ

ತಿರುವನಂತಪುರಂ, ಜನವರಿ 04: ಕೊರೊನಾ ಸೋಂಕಿನ ಭೀತಿ ನಡುವೆ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರದ ಭಯವೂ ಮನೆ ಮಾಡಿದೆ. ಕೇಂದ್ರ ಸರ್ಕಾರ ಆ ರಾಜ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಇತ್ತ ಕೇರಳದಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಕೇರಳದಲ್ಲಿ ಸತ್ತ ಬಾತುಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಂಟರಲ್ಲಿ ಐದು ಮಾದರಿಗಳಲ್ಲಿ ಹಕ್ಕಿಜ್ವರದ H5N8 ಸೋಂಕು ಇರುವುದು ದೃಢಪಟ್ಟಿರುವುದಾಗಿ ಕೇರಳದ ಅರಣ್ಯ, ವನ್ಯಜೀವಿ ಸಂರಕ್ಷಣೆ ಹಾಗೂ ಹೈನುಗಾರಿಕಾ ಸಚಿವ ಕೆ ರಾಜು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಈಗಾಗಲೇ 12 ಸಾವಿರ ಬಾತುಕೋಳಿಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಕಂಡುಬರುತ್ತಿದ್ದಂತೆಯೇ 48,000 ಹಕ್ಕಿಗಳನ್ನು ಕೊಲ್ಲಲು ಸರ್ಕಾರ ಆದೇಶಿಸಿದೆ. ಅಲಪ್ಪುಳ ಹಾಗೂ ಕೊಟ್ಟಾಯಂ ವ್ಯಾಪ್ತಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ಮನುಷ್ಯರಲ್ಲಿ ಈ ಸೋಂಕು ಪತ್ತೆಯಾಗಿಲ್ಲ ಎನ್ನಲಾಗಿದೆ.

Kerala Orders Culling Of 48 Thousand Birds Ahead Of Bird Flu Scare

2014ರಲ್ಲಿಯೂ ಕೇರಳದಲ್ಲಿ ಹಕ್ಕಿ ಜ್ವರದ ಭೀತಿಯಲ್ಲಿ ಸಾವಿರಾರು ಹಕ್ಕಿಗಳನ್ನು ಕೊಲ್ಲಲಾಗಿತ್ತು. ಈಚೆಗೆ ರಾಜಸ್ಥಾನದಲ್ಲಿ ಸಾವಿರಾರು ಕಾಗೆಗಳು ರಸ್ತೆಗಳ ಮೇಲೆ ಸತ್ತುಬಿದ್ದಿದ್ದು, ಹಕ್ಕಿ ಜ್ವರದ ಅನುಮಾನ ವ್ಯಕ್ತವಾಗಿತ್ತು. ಪರೀಕ್ಷೆಗೆ ಒಳಪಡಿಸಿದ ನೂರು ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+