Breaking: ಕೇರಳದಲ್ಲಿ ನೀಟ್ ಪರೀಕ್ಷೆ ವೇಳೆ ಒಳಉಡುಪು ತೆಗೆಸಿದ ವಿವಾದ; ಮತ್ತಿಬ್ಬರ ಬಂಧನ

ತಿರುವನಂತಪುರಂ, ಜುಲೈ 21: ಕೇರಳದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಒಳಉಡುಪು ಬಿಚ್ಚಿಡುವಂತೆ ಒತ್ತಡ ಹೇರಿದ ವಿವಾದಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಶಿಕ್ಷಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆ ಮೂಲಕ ಇದುವರೆಗೂ ಏಳು ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ಪೊಲೀಸರ ಪ್ರಕಾರ ಪ್ರೊ. ಪ್ರಿಜಿ ಕುರಿಯನ್ ಮತ್ತು ಡಾ. ಶಾಮ್ನಾದ್ ಬಂಧಿತ ಆರೋಪಿಗಳಾಗಿದ್ದು, ವಿವಾದಾತ್ಮಕ ರೀತಿಯಲ್ಲಿ ತಪಾಸಣೆ ನಡೆಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನವನ್ನು ನೀಡಿದ್ದರು ಎಂದು ತಿಳಿದು ಬಂದಿದೆ.

ಕಳೆದ ಜುಲೈ 17ರಂದು ಕೇರಳದ ಕೊಲ್ಲಂನಲ್ಲಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ಹಾಜರಾಗುವ ಮೊದಲು ವಿದ್ಯಾರ್ಥಿನಿಯರು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿದ ಆರೋಪದಲ್ಲಿ ಮಂಗಳವಾರವಷ್ಟೇ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ಪರೀಕ್ಷೆ ನಡೆಸಲು ಒಪ್ಪಿಸಲಾದ ಏಜೆನ್ಸಿಯವರು ಎಂದು ಗೊತ್ತಾಗಿದೆ.

Kerala NEET controversy Two more teacher arrested

ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಕೇರಳದ ಸಚಿವೆ ಬಿಂದು: ನೀಟ್ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವುದಕ್ಕೂ ಮೊದಲು ವಿದ್ಯಾರ್ಥಿನಿಯರು ತಮ್ಮ ಒಳಉಡುಪನ್ನು ತೆಗೆದಿಡುವಂತೆ ಒತ್ತಡ ಹೇರಿದ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ ಕೇರಳದ ಪ್ರೌಢಶಿಕ್ಷಣ ಸಚಿವೆ ಕೆ. ಬಿಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ರಿಗೆ ಪತ್ರ ಬರೆದಿದ್ದಾರೆ.

"ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರ ಜೊತೆಗೆ ಸಿಬ್ಬಂದಿ ತೋರಿಸಿದ ವರ್ತನೆಯು ಅಸಹ್ಯ, ಅವಮಾನ ಮತ್ತು ಆಘಾತಕಾರಿಯಾಗಿದೆ. ಇಂಥ ಅನಿರೀಕ್ಷಿತ ಘಟನೆಗಳು ಪರೀಕ್ಷೆಗೆ ಹಾಜರಾಗು ವಿದ್ಯಾರ್ಥಿನಿಯರ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥ ದುಸ್ಥಿತಿಗೆ ಕಾರಣವಾದ ಸಿಬ್ಬಂದಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಉತ್ತಮ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ದುರ್ವರ್ತನೆ ತೋರಿದ ಸಿಬ್ಬಂದಿಗೆ ತಕ್ಕ ಶಿಕ್ಷೆ ನೀಡುವಂತೆ ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದೇನೆ," ಎಂದು ಕೇರಳದ ಸಚಿವೆ ಕೆ. ಬಿಂದು ತಿಳಿಸಿದ್ದಾರೆ.

'ಬ್ರಾ' ವಿವಾದ ಭುಗಿಲೆದಿದ್ದು ಯಾವಾಗ?: ಕೇರಳದ ಮಾರ್ ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗಳನ್ನು ಭಾನುವಾರ ನಡೆಸಲಾಯಿತು. ಈ ವೇಳೆ ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ 17 ವರ್ಷದ ವಿದ್ಯಾರ್ಥಿನಿಯ ಜೊತೆಗೆ ಸಿಬ್ಬಂದಿಯು ಕೆಟ್ಟದಾಗಿ ವರ್ತಿಸಿದ್ದಾರೆ.

Kerala NEET controversy Two more teacher arrested

Recommended Video

      ಮಿನಿ IPL ಸ್ಟಾರ್ಟ್: ಎಲ್ಲಿ ನಡೆಯುತ್ತೆ? ಇದರ ವಿಶೇಷತೆ ಏನು ಗೊತ್ತಾ? | *Cricket | OneIndia Kannada

      ಭದ್ರತಾ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಧರಿಸಿದ ಬಟ್ಟೆಯಲ್ಲಿನ ಲೋಹಗ ಕೊಕ್ಕೆಗಳಿರುವ ಹಿನ್ನೆಲೆ ಬೀಪ್ ಸದ್ದು ಕೇಳಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿಯು ವಿದ್ಯಾರ್ಥಿನಿಯ ಒಳ-ಉಡುಪು ತೆರೆಯುವಂತೆ ಒತ್ತಾಯಿಸಿದ್ದಾರೆ," ಎಂದು ತಂದೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿವಾದವು ಸೋಮವಾರ ದೇಶಾದ್ಯಂತ ಭುಗಿಲೆದ್ದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+