ಆಟೋ ತಡೆದ ಪೊಲೀಸರು, ತಂದೆಯನ್ನು ಹೊತ್ತುಕೊಂಡೇ ಹೋದ ಮಗ
ಕೊಚ್ಚಿ, ಏಪ್ರಿಲ್ 16: ಲಾಕ್‌ಡೌನ್ ಇರುವ ಕಾರಣ ಜನರ ಅನಗತ್ಯ ಓಡಾಟವನ್ನು ನಿಷೇಧ ಮಾಡಲಾಗಿದೆ. ಆದರೆ, ಕೇರಳದಲ್ಲಿ ಆಸ್ಪತ್ರೆಯಿಂದ ಬರುತ್ತಿದ್ದ ಆಟೋವನ್ನು ಪೊಲೀಸರು ನಿಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Recommended Video
ವ್ಯಕ್ತಿಯೊಬ್ಬ ತನ್ನ 65 ವಯಸ್ಸಿನ ತಂದೆಯನ್ನು ರಸ್ತೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾನೆ. ಆತನ ಜೊತೆಗೆ ಆತನ ತಾಯಿ ಕೂಡ ಆಸ್ಪತ್ರೆಯ ಫೈಲ್‌ಗಳನ್ನು ಇಟ್ಟುಕೊಂಡು ನಡೆದುಕೊಂಡು ಬರುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಕೇರಳ ಪುನಲೂರ್ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಜಾರ್ಚ್‌ಮಾಡಿಸಿಕೊಂಡು ಆಟೋದಲ್ಲಿ ಮನೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಪೊಲೀಸರು ಆಟೋವನ್ನು ತಡೆದಿದ್ದಾರೆ. ಆಸ್ಪತ್ರೆಯ ವಿವರಗಳನ್ನು ನೀಡಿದರೂ, ಆಟೋಗೆ ಪಾಸ್ ಇಲ್ಲ ಎನ್ನುವ ಕಾರಣಕ್ಕೆ ಆಟೋವನ್ನು ಮುಂದಕ್ಕೆ ಬಿಟ್ಟಿಲ್ಲ.

ಇದರಿಂದ ಆ ವ್ಯಕ್ತಿ ಆರೋಗ್ಯ ಸರಿ ಇಲ್ಲದ ತನ್ನ ತಂದೆಯನ್ನು ತಾನೇ ಹೊತ್ತುಕೊಂಡು ಮನೆಗೆ ಹೋಗಿದ್ದಾನೆ. ರಸ್ತೆಯಲ್ಲಿ ಈ ದೃಶ್ಯವನ್ನು ಕಂಡವರು ವಿಡಿಯೋ ಮಾಡಿದ್ದಾರೆ. ಸೋಷಿಯಲ್ ಮೀಡಿಯದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಈ ಘಟನೆ ಗಮನಕ್ಕೆ ಬಂದಿದೆ.
#WATCH Kerala: A person carried his 65-year-old ailing father in Punalur & walked close to one-kilometre after the autorickshaw he brought to take his father back from the hospital was allegedly stopped by Police, due to #CoronavirusLockdown guidelines. (15.4) pic.twitter.com/I03claE1XO
— ANI (@ANI) April 16, 2020
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ನಾವು ಆಟೋವನ್ನು ತಡೆದಾಗ ಅದರಲ್ಲಿ ಯಾರು ಇರಲಿಲ್ಲ. ಆಟೋಗೆ ಪಾಸ್ ಇಲ್ಲದ ಕಾರಣ ನಿಲ್ಲಿಸಿದೆವು ಎಂದು ಹೇಳಿದ್ದಾರೆ.












Click it and Unblock the Notifications