ವೈರಲ್ ವಿಡಿಯೋ: ಮಗಳನ್ನು ಎದೆಗವಚಿಕೊಂಡೇ ಸ್ವಿಗ್ಗಿ ಡೆಲಿವರಿ ಮಾಡುವ ಮಹಿಳೆ

ತಿರುವನಂತಪುರಂ, ಮಾರ್ಚ್ 12: ಕೆಲಸದ ಅನಿವಾರ್ಯತೆ ಎನ್ನುವುದು ಮನುಷ್ಯನಿಗೆ ಎಷ್ಟಿರುತ್ತದೆ ಎನ್ನುವುದಕ್ಕೆ ಇಂತಹ ಕೆಲವು ಘಟನೆಗಳೇ ಸಾಕ್ಷಿ.

ಸ್ಕೂಟಿಯೊಂದರಲ್ಲಿ ಕಾಂಗರೂ ಬ್ಯಾಗಿನಲ್ಲಿ ಮಗಳನ್ನು ಎದೆಗವಚಿಕೊಂಡು, ಸ್ವಿಗ್ಗಿ ಡೆಲಿವರಿ ಮಾಡುತ್ತಿದ್ದ ಮಹಿಳೆಯ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು.

ಆ ವಿಡಿಯೋದಲ್ಲಿರುವ ಮಹಿಳೆ ಕೊಲ್ಲಂನ ಚಿನ್ನಕಡ ನಿವಾಸಿಯಾಗಿದ್ದಾರೆ.ನನ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೂ ನನಗೆ ಗೊತ್ತಿಲ್ಲ, ನನ್ನ ಸ್ನೇಹಿತೆ ವಿಡಿಯೋ ತೋರಿಸಿದಾಗ ಒಮ್ಮೆ ದಿಗ್ಭ್ರಾಂತಳಾದೆ, ಬಳಿಕ ಒಂದೊಮ್ಮೆ ಕೆಲಸ ಕಳೆದುಕೊಂಡರೆ ಕಷ್ಟ ಅಂತಲೂ ಅನಿಸಿದ್ದು ನಿಜ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ವಾರ ಪೂರ್ತಿ ಮಗಳು ಡೇ ಕೇರ್‌ನಲ್ಲಿಯೇ ಕಾಲ ಕಳೆಯುತ್ತಾಳೆ, ಭಾನುವಾರ ಮಾತ್ರ ಡೇ ಕೇರ್‌ಗೆ ರಜೆ ಇರುವ ಕಾರಣ ಮಗಳನ್ನು ಕರೆದುಕೊಂಡು ಸ್ವಿಗ್ಗಿ ಡೆಲಿವರಿ ಮಾಡುತ್ತೇನೆ ಎಂದಿದ್ದಾರೆ.

ಕೊಚ್ಚಿಗೆ ಬಂದು ನಾಲ್ಕು ವರ್ಷವಾಗಿದೆ, ಮದುವೆಗೆ ಮನೆಯವರ ವಿರೋಧವಿತ್ತು, ಹಾಗಾಗಿ ಯಾರೂ ಕೂಡ ನಮ್ಮನ್ನು ನೋಡಲು ಬರುವುದಿಲ್ಲ, ಪತಿ ಗಲ್ಫ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

 Kerala: Kochi Swiggy Delivery Woman With Child Video Goes Viral In Social Media

ತಿಂಗಳಿಗೆ ಅಷ್ಟೋ ಇಷ್ಟೋ ಹಣ ಕಳುಹಿಸುತ್ತಾರೆ, ಆದರೆ ಅದು ಸಾಲುತ್ತಿಲ್ಲ , ಹಾಗೆಯೇ ನಾನು ಓದು ಮುಂದುವರೆಸಿದ್ದೇನೆ ಅದಕ್ಕೂ ಹಣದ ಅವಶ್ಯಕತೆ ಇದೆ. ಹಾಗಾಗಿ ನಾನು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನನಗೆ ಈ ಕೆಲಸದಲ್ಲಿ ಸಂತೋಷ ಇದೆ, ಮಗಳಿಗೂ ನನ್ನ ಜೊತೆ ಓಡಾಡಲು ಇಷ್ಟ ಹಾಗಾಗಿ ಅವಳನ್ನು ಕರೆದೊಯ್ಯುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+