ಹೊಸ ವರ್ಷ ಸಂಭ್ರಮಾಚರಣೆ ರಾತ್ರಿ 10ಕ್ಕೆ ಕ್ಲೋಸ್!
ತಿರುವನಂತಪುರಂ, ಡಿಸೆಂಬರ್ 31: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಗುರುವಾರ ರಾತ್ರಿ 10 ಗಂಟೆಯ ಗಡುವನ್ನು ಕೇರಳ ಸರ್ಕಾರ ವಿಧಿಸಿದೆ. ಆದರೆ ಸಂಭ್ರಮಾಚರಣೆ ಭಾಗವಾಗಿ ಸಾರ್ವಜನಿಕವಾಗಿ ಗುಂಪುಗೂಡುವಂತಿಲ್ಲ ಎಂದು ಹೊಸದಾಗಿ ಆದೇಶ ಹೊರಡಿಸಲಾಗಿದೆ.
'ಹೊಸ ವರ್ಷದ ಹಿಂದಿನ ದಿನ ಹೊಸ ವರ್ಷದ ಎಲ್ಲ ಸಂಭ್ರಮಾಚರಣೆಗಳು ರಾತ್ರಿ 10 ಗಂಟೆಗೆ ಮುಕ್ತಾಯವಾಗಬೇಕು. ಹೊಸ ವರ್ಷದ ಹಿಂದಿನ ದಿನ ಸಂಭ್ರಮಾಚರಣೆಗಳ ಭಾಗವಾಗಿ ಸಾರ್ವಜನಿಕ ಗುಂಪುಗೂಡುವಿಕೆಗೆ ಅನುಮತಿ ಇಲ್ಲ' ಎಂದು ಆದೇಶದಲ್ಲಿ ಹೇಳಲಾಗಿದೆ.
ನಿಯಮಗಳಿಗೆ ಬದ್ಧವಾಗಿರದೆ ಉಲ್ಲಂಘನೆ ಮಾಡುವ ಜನರ ವಿರುದ್ಧ ವಿವಿಧ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಯಮಗಳ ಪರಿಪಾಲನೆ ಸೂಕ್ತವಾಗಿ ನಡೆಯುತ್ತಿದೆ ಎಂದು ಖಾತರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸರಿಗೆ ಸರ್ಕಾರ ಸೂಚಿಸಿದೆ.

'ರಾಜ್ಯದಲ್ಲಿನ ಕೋವಿಡ್-19 ಸಾಂಕ್ರಾಮಿಕ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡಿದ್ದು, ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸದೆ ಹೋದರೆ ಸಾರ್ವಜನಿಕರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವುದು ಕೋವಿಡ್ ಹರಡುವ ಸಾಧ್ಯತೆಯನ್ನು ಹೆಚ್ಚಿಸುವುದರಿಂದ ನಿರ್ಬಂಧ ವಿಧಿಸಲಾಗಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜನರು ಮಾಸ್ಕ್ ಧರಿಸುವಿಕೆ, ಕೈಗಳನ್ನು ಸ್ವಚ್ಛವಾಗಿರಿಸುವುದು ಮತ್ತು ಸಾಮಾಜಿಕ ಅಂತರಗಳನ್ನು ಕಾಪಾಡುವುದು ಮುಂತಾದ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.












Click it and Unblock the Notifications