ಕೇರಳದಲ್ಲಿ ಬಹುತೇಕ ಕಂಟ್ರೋಲ್‌ಗೆ ಬಂದ ಕೊರೊನಾ ವೈರಸ್!

ತಿರುವನಂತಪುರಂ, ಮೇ 05: ದೇಶದಲ್ಲಿಯೆ ಮೊದಲ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದ್ದ ಕೇರಳ ರಾಜ್ಯದಲ್ಲಿ ಸೋಂಕು ಹರಡುವಿಕೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ನಿನ್ನೆ ಯಾವುದೇ ಹೊಸ ಸೋಂಕಿತ ಪ್ರಕರಣ ಕೇರಳ ರಾಜ್ಯದಲ್ಲಿ ಪತ್ತೆ ಆಗಿರಲಿಲ್ಲ, ಆದರೆ ಇಂದು 3 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ಕೊಟ್ಟಿದ್ದಾರೆ.

ಕೇರಳದಲ್ಲಿ ಇಂದು (ಮಂಗಳವಾರ) ಮೂವರಿಗೆ ಕೂಡ ಕೋವಿಡ್ 19 ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಸೋಂಕಿತರ ಸಂಪರ್ಕದ ಮೂಲಕ ಸೋಂಕು ಬಂದಿರುವ ಆ ಮೂವರೂ ವಯನಾಡ್ ಜಿಲ್ಲೆಯವರು ಎಂದಿದ್ದಾರೆ. ಸಧ್ಯ ಒಟ್ಟು 37 ಜನರು ಕೊರೊನಾ ವೈರಸ್ ಸೋಂಕಿಗೆ ವಿವಿಧ ಆಸ್ಪತ್ರೆಗಳಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕೇರಳದಲ್ಲಿ ಈ ವರೆಗೆ ಒಟ್ಟು 502 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಈಗಾಗಲೇ 462 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 21,342 ಜನರು ನಿರೀಕ್ಷಣೆದಲ್ಲಿದ್ದಾರೆ. ಈ ಪೈಕಿ 21,034 ಮಂದಿ ಮನೆಗಳಲ್ಲಿ ಮತ್ತು 308 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ನಿಗಾವಣೆಯಲ್ಲಿದ್ದಾರೆ ಎಂದಿದ್ದಾರೆ.

In Kerala coronavirus infection has come under control says pinarayi vijayan

ಇಲ್ಲಿಯವರೆಗೆ 33,800 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಪೈಕಿ 33,265 ಜನರ ಮಾದರಿಯಲ್ಲಿ ಸೋಂಕು ಇಲ್ಲ ಎಂದು ವರದಿ ಬಂದಿದೆ.

ಇದಲ್ಲದೆ ಆರೋಗ್ಯ ಕಾರ್ಯಕರ್ತರು, ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 2,512 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 1,979 ಮಾದರಿಗಳು ನಕಾರಾತ್ಮಕವಾಗಿವೆ ಎಂದಿದ್ದಾರೆ. ರಾಜ್ಯದಲ್ಲಿ ಒಟ್ಟು 84 ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+