ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಆದ್ಯತೆಗಳಲ್ಲಿ ಹಿಜಾಬ್ ಅಂಶವಿಲ್ಲ ಎಂದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್!

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 16: ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ನಡುವೆ ಹಿಜಾಬ್ ಎಂಬುದು ಒಂದು ವಿವಾದವೇ ಅಲ್ಲ, ಮುಸ್ಲಿಂ ಮಹಿಳೆಯರನ್ನು ಹಿಂದಿಕ್ಕುವ ಪಿತೂರಿ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಸಿದ್ದಾರೆ.

ಧರ್ಮ ಮತ್ತು ಶಿಕ್ಷಣದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದ ಅವರು, ಇಸ್ಲಾಂ ಧರ್ಮದಲ್ಲಿ ಮನುಷ್ಯರಿಗೆ ಜ್ಞಾನ ಸಂಪಾದಿಸುವುದು ಧರ್ಮದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಆಚರಣೆಯಾಗಿದೆ. ಆದ್ದರಿಂದ ಸಂವಿಧಾನದ 25ನೇ ವಿಧಿಯ ರಕ್ಷಣೆಯ ಅಗತ್ಯವಿದೆ ಎಂಬ ವಾದವನ್ನು ರಾಜ್ಯಪಾಲ ಉಲ್ಲೇಖಿಸಿದರು.

ಹಿಜಾಬ್ ಅರ್ಜಿ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದ ಹೈಕೋರ್ಟ್ಹಿಜಾಬ್ ಅರ್ಜಿ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದ ಹೈಕೋರ್ಟ್

ಸುಪ್ರೀಂ ಕೋರ್ಟ್ ಅನ್ನು ಉಲ್ಲೇಖಿಸಿ, ಮೂಲತಃ ಉತ್ತರ ಪ್ರದೇಶದವರಾದ ಆರಿಫ್ ಮೊಹಮ್ಮದ್ ಖಾನ್, ಸಂವಿಧಾನದ 25ನೇ ವಿಧಿಯ ರಕ್ಷಣೆಯನ್ನು ಪ್ರತಿಪಾದಿಸುವ ಯಾವುದೇ ಅಂಶವು "ಅವಶ್ಯಕ, ಆಂತರಿಕ ಮತ್ತು ನಂಬಿಕೆಯ ಆಚರಣೆಗೆ ಅವಿಭಾಜ್ಯವಾಗಿರಬೇಕು," ಎಂದಿದ್ದಾರೆ.

 Hijab is Not Essential In Islam; Kerala Governor Clarifies 5 Essential things In Islam

ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಾಬ್ ಗಲಾಟೆ:

ಕಳೆದ ತಿಂಗಳು ಕರ್ನಾಟಕದ ಉಡುಪಿಯಲ್ಲಿ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಹಿಜಾಬ್ ಗಲಾಟೆ ಪ್ರಾರಂಭವಾಯಿತು. ಹಿಜಾಬ್ ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದರು. ರಾಜ್ಯದಲ್ಲಿ ವೇಗವಾಗಿ ಹಿಜಾಬ್ ಸಂಘರ್ಷ ಹರಡಿಕೊಂಡಿತು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ಕಳುಹಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಇದೇ ವಿಚಾರದಲ್ಲಿ ಶಾಂತಿ ಕಾಪಾಡುವಂತೆ ಹೈಕೋರ್ಟ್ ಸೂಚನೆ ನೀಡಿತು. ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ವಿವಾದದ ಕುರಿತು ವಿಚಾರಣೆ ನಡೆಯುತ್ತಿದೆ.

ಇಸ್ಲಾಂ ಪುಸ್ತಕಗಳಲ್ಲಿ ಅಗತ್ಯತೆ ಬಗ್ಗೆ ಉಲ್ಲೇಖ:

ಇಸ್ಲಾಂ ಧರ್ಮದ ಧಾರ್ಮಿಕ ಪುಸ್ತಕಗಳು ಯಾವುದು ಅತ್ಯಗತ್ಯ ಎಂಬುದರ ಬಗ್ಗೆ ವಿವರಿಸುತ್ತವೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. "ಅರ್ಕಾನ್ ಇ ಇಸ್ಲಾಂ ಎಂದು ಕರೆಯಲ್ಪಡುವ ಐದು ಅಗತ್ಯತೆಗಳ ವೈಶಿಷ್ಟ್ಯತೆಯನ್ನು," ಗುರುತಿಸಿದರು. ಅವುಗಳು ಎಂದರೆ: ಇದು -- ಕಲಿಮಾ ಮೂಲಕ ನಂಬಿಕೆಯ ದೃಢೀಕರಣ, ನಿಯಮಿತ ಮಧ್ಯಂತರದಲ್ಲಿ ಪ್ರಾರ್ಥನೆ ಸಲ್ಲಿಸುವುದು, ರಂಜಾನ್ ಸಮಯದಲ್ಲಿ ಉಪವಾಸ, ನಿಭಾಯಿಸಬಲ್ಲವರಿಗೆ ದಾನ ಮತ್ತು ಹಜ್ ಯಾತ್ರೆ ಆಗಿದೆ. ಇವುಗಳಲ್ಲಿ ಯಾವುದೇ ಹೊಸತನ್ನು ಸೇರ್ಪಡೆಗೊಳಿಸುವುದು ಅಥವಾ ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಹಿಜಾಬ್ ವಿವಾದ ಅಜ್ಞಾನದ ಪರಿಣಾಮ:

ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತುತ ಹಿಜಾಬ್‌ನ ಮೇಲಿನ ನಿರ್ಬಂಧವು ಹುಡುಗಿಯರು ಮತ್ತು ಯುವತಿಯರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಳಿದಾಗ, ಇದು "ಸಂಪೂರ್ಣ ಅಜ್ಞಾನ" ದ ಪರಿಣಾಮವಾಗಿದೆ ಎಂದು ಹೇಳಿದರು. ಕುರಾನ್‌ನ ಮೊದಲ ಪದ "ಓದಿ" ಎಂದು ಸೂಚಿಸಿದ ಅವರು, ಮನುಷ್ಯನು ದೇವರ ಹೆಸರನ್ನು ಓದಲು ಮಾತ್ರ ಪ್ರಚೋದಿಸುವುದಿಲ್ಲ ಎಂದರು. ಸಂಬಂಧಿತ ಭಾಗಗಳನ್ನು ಉಲ್ಲೇಖಿಸಿ, ಪ್ರಾಣಿಗಳು, ನಕ್ಷತ್ರಗಳು ಮತ್ತು ಬಾಹ್ಯಾಕಾಶದ ಬಗ್ಗೆ ಯೋಚಿಸಲು ಮನುಷ್ಯನನ್ನು ಕೇಳಲಾಗಿದೆ. ಜ್ಞಾನದ ಹುಡುಕಾಟದಲ್ಲಿ ಅಗತ್ಯವಿದ್ದರೆ ಚೀನಾಕ್ಕೆ ಹೋಗುವಂತೆ ಹೇಳಲಾಗಿದೆ. "ಕುರಾನ್‌ನಲ್ಲಿ 700ಕ್ಕೂ ಹೆಚ್ಚು ಪದಗಳು ಜ್ಞಾನ, ಯೋಚಿಸಿ, ಧ್ಯಾನ ಮಾಡಿ" ಎಂಬುದಾಗಿದೆ. ಧರ್ಮವು ಜ್ಞಾನದ ಹುಡುಕಾಟವಾಗಿದೆ ಎಂದು ಅವರು ಹೇಳಿದ್ದಾರೆ.

Recommended Video

ಉಕ್ರೇನ್ ಮೇಲೆ ಸೈಬರ್ ದಾಳಿ ಮಾಡಿದ ರಷ್ಯಾ,ಮುಂದೇನು? | Oneindia Kannada

English summary
Hijab is Not Essential In Islam"; Kerala Governor Clarifies 5 Essential things In Islam. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X