5,300 ವರ್ಷ ಹಳೆಯ ಮಮ್ಮಿಯ ಅವಶೇಷಗಳಲ್ಲಿ ಜೀವಂತ ಯೀಸ್ಟ್ ಪತ್ತೆ :ಬ್ರೆಡ್‌ ತಯಾರಿಸಲು ಇದರದ್ದೇ ಬಳಕೆ

ಮಮ್ಮಿ ಎಂದರೆ ಮೃತ ವ್ಯಕ್ತಿಯ ದೇಹವನ್ನು ದಶಕಗಳ ಕಾಲ ಹಾಗೆಯೇ ಸಂರಕ್ಷಿಸಿಡುವ ಪ್ರಕ್ರಿಯೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಸಾವ್ನಪ್ಪಿದಾಗ ಆ ದೇಹ ಕೆಲವೇ ದಿನಗಳಲ್ಲಿ ಕೊಳೆತು ಮಣ್ಣಲ್ಲಿ ಸೇರಿಕೊಳ್ಳುತ್ತದೆ. ಆದರೆ ಮಮ್ಮಿ ಮಾಡುವ ಪ್ರಕ್ರಿಯೆಯು ದೇಹವನ್ನು ದಶಕಗಳ ಕಾಲ ಹಾಗೆಯೇ ಉಳಿಸುತ್ತದೆ.
ರಾಸಾಯನಿಕಗಳು, ವಿಪರೀತ ಶೀತ, ಕಡಿಮೆ ಆರ್ದ್ರತೆ ಮೂಲಕ ಹಲವು ವರ್ಷಗಳ ಕಾಲ ಮಾನವ ಅಥವಾ ಪ್ರಾಣಿಯ ದೇಹವನ್ನು ಕೊಳೆಯದಂತೆ ನೈಸರ್ಗಿಕವಾಗಿ ಅಥವಾ ಕೃತಕವಾಗಿ ಸಂರಕ್ಷಿಸಿಡಲಾಗುತ್ತದೆ.

ಹೆಪ್ಪುಗಟ್ಟಿದ ಮಮ್ಮಿಯಲ್ಲಿ ಈಸ್ಟ್‌:

ಇದೀಗ 5,300 ಹಳೆಯ ಮಮ್ಮಿ ಪತ್ತೆಯಾಗಿದೆ. ಇಲ್ಲಿ ಇಷ್ಟು ಹಳೆಯದಾದ ಮಮ್ಮಿ ಸಿಕ್ಕಿರುವುದು ವಿಶೇಷವಲ್ಲ, ಅದರಲ್ಲಿ ಸಂಶೋಧಕರು ಜೀವಂತ ಯೀಸ್ಟ್‌ ಪತ್ತೆ ಹಚ್ಚಿದ್ದಾರೆ ಎನ್ನುವುದೇ ಸದ್ಯಕ್ಕೆ ಕುತೂಹಲಕಾರಿ ಸಂಗತಿ.

ಮಾತ್ರವಲ್ಲ ಅದನ್ನು ಬ್ರೆಡ್‌ ಉತ್ಪಾದಿಸಲು ಬಳಸುವಲ್ಲಿ ಕೂಡಾ ಯಶಸ್ವಿಯಾಗಿದ್ದಾರೆ. ಮೈಕ್ರೋಬಯೋಮ್ ಜರ್ನಲ್‌ನಲ್ಲಿ ಈ ವಿವರವನ್ನು ಬಹಿರಂಗಪಡಿಸಲಾಗಿದೆ. ವರದಿಯ ಪ್ರಕಾರ ಆಲ್ಫ್ಸ್‌ ಪ್ರದೇಶದಲ್ಲಿ ಸಂಪೂರ್ಣ ಹೆಪ್ಪುಗಟ್ಟಿದ ಮಮ್ಮಿಯೊಂದರಲ್ಲಿ ಈ ಈಸ್ಟ್‌ ಪತ್ತೆಯಾಗಿದೆ.

Mummy Reveals Living Yeast

ಸಾವಿರ ವರ್ಷ ಹಳೆಯ ಇತಿಹಾಸ:

ಇಲ್ಲಿ ಸಂಶೋಧಕರಿಗೆ 3,300 ವರ್ಷ ಹಳೆಯ ಸಂಪೂರ್ಣ ಹೆಪ್ಪುಗಟ್ಟಿದ ಮಾನವ ಶರೀರ ಸಿಕ್ಕಿತ್ತು. ಇದು ಕಂಚಿನ ಯುಗದ ಮಾನವ ಪಳೆಯುಳಿಕೆ ಎನ್ನಲಾಗಿದೆ. ಬಾಣದ ಗಾಯದಿಂದ ಈ ವ್ಯಕ್ತಿ ಹತನಾಗಿದ್ದಿರಬಹುದು ಎಂದು ಊಹಿಸಲಾಗಿದೆ. ಇಟಲಿ ಮತ್ತು ಆಸ್ತ್ರಿಯಾ ನಡುವಣ ಆಲ್ಪ್ಸ್ ಎಂಬ ಹಿಮಚ್ಛಾದಿತ ಪ್ರದೇಶದಲ್ಲಿ ಈ ದೇಹ ಪತ್ತೆಯಾಗಿದೆ. ಹಿಮದಿಂದ ಸಂಪೂರ್ಣ ಹೆಪ್ಪುಗಟ್ಟಿದ್ದ ಕಾರಣ ಆ ಮಾನವ ಶರೀರವು ಸುಮಾರು ನಾಲ್ಕು ಸಾವಿರ ವರ್ಷ ಹಳೆಯ ಇತಿಹಾಸ ಶೋಧಿಸಲು ವಿಜ್ಞಾನಿಗಳಿಗೆ ನೆರವಾಗಿದೆ.

ನಾಲ್ಕು ವಿಭಿನ್ನ ಪ್ರಭೇದದ ಯೀಸ್ಟ್‌:

ಈ ದೇಹದ ಕರುಳು, ಚರ್ಮಗಳಲ್ಲಿ ಹೆಪ್ಪುಗಟಿದ ಯೀಸ್ಟ್‌ ಕೂಡಾ ಪತ್ತೆಯಾಗಿದೆ. ಚರ್ಮದ ಮೇಲೆ ಮತ್ತು ದೇಹದ ಭಾಗಶಃ ಕರಗುವಿಕೆಯಿಂದ ಉತ್ಪತ್ತಿಯಾಗುವ ನೀರಿನಲ್ಲಿ ವಾಸಿಸುವ ಹಲವಾರು ಜಾತಿಯ ಶೀತ-ಹೊಂದಾಣಿಕೆಯ ಯೀಸ್ಟ್ ಇದು ಎನ್ನಲಾಗಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಬದುಕಬಲ್ಲ ನಾಲ್ಕು ವಿಭಿನ್ನ ಪ್ರಭೇದಗಳನ್ನು ಅಧ್ಯಯನ ತಂಡವು ಗುರುತಿಸಿದೆ. ಈ ಸೂಕ್ಷ್ಮ ಶಿಲೀಂಧ್ರಗಳು ಸಾಮಾನ್ಯವಾಗಿ ಅಂಟಾರ್ಕ್ಟಿಕಾ ಮತ್ತು ಆಲ್ಪ್ಸ್‌ನಂತಹ ಅತ್ಯಂತ ಶೀತ ಪರಿಸರದಲ್ಲಿ ಮಾತ್ರ ಕಂಡುಬರುತ್ತವೆ ಎಂದು ವರದಿಯಾಗಿದೆ. ವಿಜ್ಞಾನಿಗಳ ಪ್ರಕಾರ ಮಮ್ಮಿ ಸ್ವರೂಪದಲ್ಲಿರುವ ಈ ಮನುಷ್ಯ ಮೃತಪಟ್ಟ ಸ್ವಲ್ಪ ಹೊತ್ತಿನಲ್ಲಿಯೇ ಯೀಸ್ಟ್‌ ಆತನ ದೇಹ ಪ್ರವೇಶಿಸಿತ್ತು. ತೀವ್ರ ಹೆಪ್ಪುಗಟ್ಟಿದ ವಾತಾವರಣದಲ್ಲಿ ಯೀಸ್ಟ್‌‌ ಹಾಗೆಯೇ ಉಳಿದಿತ್ತು.

2,200 ವರ್ಷ ಹಳೆಯ ವಿಶಾಲ ಭೂಗತ ಅರಮನೆ ಪತ್ತೆ:ರಕ್ಷಣೆಗಿದೆ ಕಲ್ಲಿನ ಯೋಧರ ಸೈನ್ಯ!ಒಳನುಗ್ಗುವ ಧೈರ್ಯ ಯಾರಿಗೂ ಇಲ್ಲ
2,200 ವರ್ಷ ಹಳೆಯ ವಿಶಾಲ ಭೂಗತ ಅರಮನೆ ಪತ್ತೆ:ರಕ್ಷಣೆಗಿದೆ ಕಲ್ಲಿನ ಯೋಧರ ಸೈನ್ಯ!ಒಳನುಗ್ಗುವ ಧೈರ್ಯ ಯಾರಿಗೂ ಇಲ್ಲ

ಈ ಯೀಸ್ಟ್‌‌ ಬಳಸಿ ಬ್ರೆಡ್‌ ತಯಾರಿಕೆ:

ಈ ಸೂಕ್ಷ್ಮಾಣು ಜೀವಿಯನ್ನು ಪತ್ತೆ ಹಚ್ಚಿದ ನಂತರ ವಿಜ್ಞಾನಿಗಳು ಪ್ರಯೋಗ ಶಾಲೆಯಲ್ಲಿ ಅದನ್ನು ಅಭಿವೃದ್ದಿ ಪಡಿಸಿದ್ದರು. ಈ ಯೀಸ್ಟ್‌‌ ಬಳಸಿ ಬ್ರೆಡ್‌ ಉತ್ಪಾದಿಸುವ ಪ್ರಯತ್ನ ಸತತ ಮೂರು ತಿಂಗಳು ವಿಫಲವಾಗಿತ್ತು. ಆದರೆ ಕೊನೆಗೊಂದು ದಿನ ವಿಜ್ಞಾನಿಗಳಿಗೆ ಇದರಲ್ಲಿ ಯಶಸ್ಸು ಸಿಕ್ಕಿದೆ. ಈ ಯೀಸ್ಟ್‌ ಅನ್ನು ಮುಂದಿನ ಪ್ರಯೋಗಗಳಿಗೂ ಬಳಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದಿ ಮಾನವರು ತಿನ್ನುತ್ತಿದ್ದರು ಫೈಬರ್‌, ಧಾನ್ಯ:

ಪ್ರಾಚೀನ ಮಾನವನ ಆರೋಗ್ಯದ ಬಗ್ಗೆಯೂ ಈ ಈಸ್ಟ್‌ ಬೆಳಕು ಚೆಲ್ಲುತ್ತದೆ. ಅಭಿವೃದ್ದಿ ಹೊಂದಿದ ಸಮಾಜದಲ್ಲಿ ಬದುಕುತ್ತಿದ್ದ ಮಾನವನ ಕರುಳಲ್ಲಿ ಬ್ಯಾಕ್ಟೀರಿಯಾಗಳು ನಾಶ ಹೊಂದಿದ್ದವು. ಆದರೆ ಕೆಲವು ಪ್ರದೇಶದ ನಿವಾಸಿಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದಿರುವುದು ಈ ಪ್ರಯೋಗದಿಂದ ದೃಢಪಟ್ಟಿದೆ. ಈಗಿನ ಅಭಿವೃದ್ಧಿ ಹೊಂದಿದ ಸಮಾಜ ಬಳಸುತ್ತಿರುವ ಆಹಾರ ವಿಧಾನವನ್ನೇ ಆದಿ ಮಾನವರು ಬಳಸುತ್ತಿದ್ದರು ಎನ್ನುವುದು ವಿಜ್ಞಾನಿಗಳ ತರ್ಕವಾಗಿದೆ.ಇವರು ಹೆಚ್ಚು ಹೆಚ್ಚು ಫೈಬರ್‌, ಧಾನ್ಯಗಳನ್ನು ಹೆಚ್ಚಾಗಿ ತಿನ್ನುತ್ತಿದ್ದರು ಎಂಬುದು ವಿಜ್ಞಾನಿಗಳ ನಿಷ್ಕರ್ಷೆಯಾಗಿದೆ.

ಮಾವಿನ ವಸ್ತುಸಂಗ್ರಹಾಲಯಗಳಿಂದ ಮಾವಿನ ಹಳ್ಳಿಗಳವರೆಗೆ, ಮಾವು ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳಗಳಿವು
ಮಾವಿನ ವಸ್ತುಸಂಗ್ರಹಾಲಯಗಳಿಂದ ಮಾವಿನ ಹಳ್ಳಿಗಳವರೆಗೆ, ಮಾವು ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳಗಳಿವು

ಈಗ ಪತ್ತೆಯಾಗಿರುವ ಮಮ್ಮಿಯನ್ನು ಜೈವಿಕವಾಗಿ ಹೆಪ್ಪುಗಟ್ಟಿದ ಕಾಲಕೋಶವಾಗಿ ನೋಡಬಾರದು. ಬದಲಿಗೆ ಅವರ ಮರಣದ ಐದು ಸಹಸ್ರಮಾನಗಳಿಗೂ ಹೆಚ್ಚು ಕಾಲದ ನಂತರ ಹೊಸ ವೈಜ್ಞಾನಿಕ ಒಳನೋಟಗಳನ್ನು ನೀಡುತ್ತಿರುವ ಸಂಕೀರ್ಣ ಪರಿಸರ ವ್ಯವಸ್ಥೆಯಾಗಿ ನೋಡಬೇಕು ಎಂದು ಅಧ್ಯಯನವು ತೀರ್ಮಾನಿಸಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+