ಮಹಿಳೆಯರು ಐಫೋನ್ ಬಳಸಿದ್ರೆ ಆರೋಗ್ಯದ ಮೇಲೆ ಬೀಳುತ್ತಾ ದುಷ್ಪರಿಣಾಮ? ಏನು ಹೇಳಿದೆ ಅಧ್ಯಯನ?

ಐಫೋನ್ ಮೋರೆ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಯಲ್ಲೊಂದು ಆಪಲ್ ಸ್ಮಾರ್ಟ್‌ಫೋನ್ ಇರುವುದು ಇಂದಿನ ದಿನಗಳಲ್ಲಿ ಪ್ರತಿಷ್ಠೆಯ ಸಂಕೇತವಾಗಿದೆ. ಆದರೆ, ಈ ನಡುವೆ ಹೊರಬಿದ್ದಿರುವ ಹೊಸ ಸಂಶೋಧನಾ ವರದಿಯೊಂದು ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಹೌದು, ಕೇವಲ ಸಂವಹನಕ್ಕೆ ಹಾಗೂ ಮನರಂಜನೆಗೆ ಸೀಮಿತವಾಗಿದ್ದ ಸ್ಮಾರ್ಟ್‌ಫೋನ್‌ಗಳು, ಈಗ ಅಮೆರಿಕದಂತಹ ದೊಡ್ಡ ದೇಶದಲ್ಲಿ ಮಕ್ಕಳ ಜನನ ಪ್ರಮಾಣವೇ ಗಣನೀಯವಾಗಿ ಕುಸಿಯುವಂತೆ ಮಾಡಿದೆ ಎಂಬ ಆಘಾತಕಾರಿ ವಿಚಾರವನ್ನು ಈ ವರದಿ ಬಹಿರಂಗಪಡಿಸಿದೆ.

ಅಮೆರಿಕದಲ್ಲಿ ಜನನ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದಕ್ಕೆ ನಿಖರವಾದ ಕಾರಣವೇನು ಎಂದು ಹುಡುಕುತ್ತಿದ್ದ ತಜ್ಞರಿಗೆ ಇದೀಗ ಅಚ್ಚರಿಯ ವಿಚಾರವೊಂದು ತಿಳಿದುಬಂದಿದೆ. ಹೌದು, ಅಮೆರಿಕದಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಲು 'ಆಪಲ್ ಐಫೋನ್' ಕಾರಣ ಎಂಬ ಅಚ್ಚರಿಯ ವಿಚಾರವನ್ನು ಹೊಸ ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ. ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ಪ್ರಕಟಿಸಿರುವ ಇತ್ತೀಚಿನ ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ಯುವಜನತೆಯಲ್ಲಿ ಫಲವತ್ತತೆ ಅಥವಾ ಗರ್ಭಧಾರಣೆ ಪ್ರಮಾಣವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿದುಬಂದಿದೆ.

US birth rate decline

ಐಫೋನ್ ಬಿಡುಗಡೆ ಮತ್ತು ಜನನ ಪ್ರಮಾಣದ ಕುಸಿತ

2007ರಲ್ಲಿ ಐಫೋನ್ ಮೊದಲ ಬಾರಿಗೆ ಬಿಡುಗಡೆಯಾದ ಬಳಿಕ ಅಮೆರಿಕದ ವಿವಿಧ ಭಾಗಗಳಲ್ಲಿ ಜನನ ಪ್ರಮಾಣದ ಮೇಲೆ ಅದು ಬೀರಿದ ಪರಿಣಾಮಗಳ ಕುರಿತು ಅಧ್ಯಯನದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸಂಶೋಧಕರ ಪ್ರಕಾರ, ಯಾವ ಪ್ರದೇಶಗಳಲ್ಲಿ ಜನರಿಗೆ ಐಫೋನ್ ಬಳಕೆ ಮೊದಲಿಗೆ ಲಭ್ಯವಾಯಿತೋ, ಅಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಎಲ್ಲಿ ತಡವಾಗಿ ಸ್ಮಾರ್ಟ್ ಫೋನ್ ಲಭ್ಯವಾಯಿತೋ ಅಲ್ಲಿ ಕುಸಿತದ ಪ್ರಮಾಣ ಕೊಂಚ ಕಡಿಮೆಯಿದೆ. 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸಾಮಾನ್ಯ ಫಲವತ್ತತೆ ಪ್ರಮಾಣವು ಶೇಕಡಾ 33 ರಿಂದ 52 ರಷ್ಟು ಕುಸಿಯಲು ಐಫೋನ್ ಹರಡುವಿಕೆಯೇ ಪ್ರಮುಖ ಕಾರಣ ಎಂದು ವರದಿ ಸ್ಪಷ್ಟಪಡಿಸಿದೆ. 30 ವರ್ಷದೊಳಗಿನ ಮಹಿಳೆಯರಲ್ಲಿ, ಅದರಲ್ಲೂ ವಿಶೇಷವಾಗಿ 15-19 ಮತ್ತು 20-24 ವರ್ಷ ವಯಸ್ಸಿನ ಯುವತಿಯರಲ್ಲಿ ಗರ್ಭಧಾರಣೆ ಪ್ರಮಾಣ ಹಾಗೂ ಜನನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದು ಕಳೆದ ಕೆಲವು ದಶಕಗಳಲ್ಲಿ ಕಂಡುಬಂದ ಅತಿ ದೊಡ್ಡ ಫಲವತ್ತತೆ ಕುಸಿತವಾಗಿದೆ ಎಂದು ಹೇಳಲಾಗಿದೆ.

AT&T ಏಕಸ್ವಾಮ್ಯದಿಂದ ಲಭ್ಯವಾದ ಸಾಕ್ಷ್ಯಗಳು

ಈ ವಿಶೇಷ ಸಂಶೋಧನಾ ಪ್ರಬಂಧಕ್ಕೆ "ಐಫೋನ್ ಜನನ ನಿಯಂತ್ರಕವೇ? AT&Tಯ 2007-2011ರ ಏಕಸ್ವಾಮ್ಯದಿಂದ ಸಾಕ್ಷ್ಯಗಳು" ಎಂದು ಹೆಸರಿಸಲಾಗಿದೆ. 2007 ರಿಂದ 2011 ರವರೆಗೆ ಅಮೆರಿಕದಲ್ಲಿ ಐಫೋನ್ ಕೇವಲ AT&T ನೆಟ್‌ವರ್ಕ್ ಮೂಲಕ ಮಾತ್ರ ಪ್ರತ್ಯೇಕವಾಗಿ ಲಭ್ಯವಿತ್ತು. ದೇಶಾದ್ಯಂತ ಈ ನೆಟ್‌ವರ್ಕ್ ವ್ಯಾಪ್ತಿ ಎಲ್ಲೆಡೆ ಒಂದೇ ರೀತಿ ಇರಲಿಲ್ಲ. ಹೀಗಾಗಿ, AT&T ನೆಟ್‌ವರ್ಕ್ ವ್ಯಾಪ್ತಿ ಹೆಚ್ಚಾಗಿ ಹೊಂದಿದ್ದ ಪ್ರದೇಶಗಳು ಹಾಗೂ ಕಡಿಮೆ ವ್ಯಾಪ್ತಿ ಹೊಂದಿದ್ದ ಪ್ರದೇಶಗಳಲ್ಲಿನ ಜನನ ಪ್ರಮಾಣದ ಪ್ರವೃತ್ತಿಗಳನ್ನು ಸಂಶೋಧಕರು ಬಹಳ ಸುಲಭವಾಗಿ ಹೋಲಿಕೆ ಮಾಡಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಸ್ಮಾರ್ಟ್‌ಫೋನ್ ಬಳಕೆಯಿಂದ ಜನನ ಪ್ರಮಾಣ ಏಕೆ ಕಡಿಮೆಯಾಗುತ್ತಿದೆ?

ಐಫೋನ್ ಅಥವಾ ಸ್ಮಾರ್ಟ್‌ಫೋನ್ ನೇರವಾಗಿ ಜನನ ಪ್ರಮಾಣವನ್ನು ನಿಯಂತ್ರಿಸುತ್ತದೆ ಅಥವಾ ಮಕ್ಕಳು ಮಾಡಿಕೊಳ್ಳದಂತೆ ತಡೆಯುತ್ತದೆ ಎಂದು ಸಂಶೋಧಕರು ಎಲ್ಲಿಯೂ ಹೇಳಿಲ್ಲ. ಬದಲಾಗಿ, ಸ್ಮಾರ್ಟ್‌ಫೋನ್‌ಗಳು ಜನರ ಜೀವನಶೈಲಿಯನ್ನು, ಅವರು ತಮ್ಮ ಬಿಡುವಿನ ಸಮಯ ಕಳೆಯುವ ರೀತಿಯನ್ನು ಮತ್ತು ಪರಸ್ಪರ ಬೆರೆಯುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿವೆ ಎಂದು ವಿವರಿಸಿದ್ದಾರೆ. ಸಮೀಕ್ಷೆಯ ಸಾಕ್ಷ್ಯಗಳ ಪ್ರಕಾರ, ಜನರು ಸ್ಮಾರ್ಟ್‌ಫೋನ್‌ಗಳಿಗೆ ಅಂಟಿಕೊಳ್ಳುವುದರಿಂದ ಮುಖಾಮುಖಿ ಭೇಟಿಯಾಗಿ ಮಾತನಾಡುವುದು ಕಡಿಮೆಯಾಗಿದೆ. ಆನ್‌ಲೈನ್‌ನಲ್ಲಿ ಅಶ್ಲೀಲ ವಿಡಿಯೋಗಳ ವೀಕ್ಷಣೆ ಹೆಚ್ಚಾಗಿದೆ ಹಾಗೂ ಇದರಿಂದಾಗಿ ದೈಹಿಕ ಸಂಪರ್ಕ ಹೊಂದುವ ಆಸಕ್ತಿಯೂ ಕಡಿಮೆಯಾಗಿದೆ. ಮುಖಾಮುಖಿ ಸಂವಹನ ಕಡಿಮೆಯಾಗಿರುವ ಈ ಎಲ್ಲಾ ಬದಲಾವಣೆಗಳಿಂದಾಗಿ ಯುವಜನತೆಯಲ್ಲಿ ಅನಪೇಕ್ಷಿತ ಗರ್ಭಧಾರಣೆ ಮತ್ತು ಜನನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ ಎಂದು ಅಧ್ಯಯನ ವಿಶ್ಲೇಷಿಸಿದೆ.

ಪ್ರಮುಖ ಸುದ್ದಿ ಸಂಸ್ಥೆಯಾದ ಆಕ್ಸಿಯೋಸ್ ವರದಿಯ ಪ್ರಕಾರ, ಐಫೋನ್ ಮಾರುಕಟ್ಟೆಗೆ ಪರಿಚಯವಾದ ಸಮಯದಲ್ಲೇ ಅಮೆರಿಕದ ಜನನ ಪ್ರಮಾಣದಲ್ಲಿ ತೀವ್ರ ಕುಸಿತ ಆರಂಭವಾಯಿತು. ಅಷ್ಟೇ ಅಲ್ಲದೆ, 2008ರ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕದ ಆರ್ಥಿಕತೆ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೂ ಈ ಜನನ ಪ್ರಮಾಣದ ಕುಸಿತ ಹಾಗೆಯೇ ಮುಂದುವರೆದಿದೆ ಎನ್ನುವುದು ಬಹಳ ಗಮನಾರ್ಹ ಸಂಗತಿಯಾಗಿದೆ.

ಒಟ್ಟಾರೆಯಾಗಿ, ಆಧುನಿಕ ತಂತ್ರಜ್ಞಾನ ಹಾಗೂ ಸ್ಮಾರ್ಟ್‌ಫೋನ್‌ಗಳು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿರದೆ, ಮನುಷ್ಯನ ಜೀವನಶೈಲಿ, ಕೌಟುಂಬಿಕ ವ್ಯವಸ್ಥೆ ಹಾಗೂ ಸಮಾಜದ ಜನಸಂಖ್ಯಾಶಾಸ್ತ್ರದ ಮೇಲೂ ಹೇಗೆ ಆಳವಾದ ಪ್ರಭಾವ ಬೀರುತ್ತಿವೆ ಎಂಬುದಕ್ಕೆ ಈ ಅಧ್ಯಯನವು ಸ್ಪಷ್ಟ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+