LPGಗೆ ಗುಡ್‌ಬೈ! ಭಾರತೀಯ ರೈಲ್ವೆಯ ಹೊಸ ನಿಯಮದಿಂದ ಏನೇನು ಬದಲಾಗಲಿದೆ? ಆಹಾರದ ಬೆಲೆ ಹೆಚ್ಚುತ್ತಾ?

ಹೊಸದಿಲ್ಲಿ: ಸುರಕ್ಷತೆ ಹಾಗೂ ಉಳಿತಾಯದ ದೃಷ್ಟಿಯಿಂದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಮತ್ತು ದೊಡ್ಡ ಬದಲಾವಣೆಯೊಂದಕ್ಕೆ ಭಾರತೀಯ ರೈಲ್ವೆಯು ಮುನ್ನುಡಿ ಬರೆದಿದೆ. ಇನ್ಮುಂದೆ ಚಲಿಸುವ ರೈಲುಗಳಲ್ಲಿ ಅಡುಗೆ ಮಾಡಲು ವಾಣಿಜ್ಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಲಾಗಿದ್ದು, ಅದರ ಬದಲಿಗೆ ವಿದ್ಯುತ್ (ಇಂಡಕ್ಷನ್ ಸ್ಟೌವ್) ಬಳಸಿ ಅಡುಗೆ ಮಾಡಲು ಭಾರತೀಯ ರೈಲ್ವೆ ಮತ್ತು IRCTC ಅಧಿಕೃತವಾಗಿ ಚಾಲನೆ ನೀಡಿದೆ. ಆ ಮೂಲಕ ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನಿಂದ ಸೃಷ್ಟಿಯಾದ ಸಮಸ್ಯೆಗೆ ಭಾರತೀಯ ರೈಲ್ವೆ ಸೂಕ್ತ ಮಾರ್ಗವೊಂದನ್ನು ಕಂಡು ಕೊಂಡಿದೆ.

ಈ ಕ್ರಾಂತಿಕಾರಿ ಬದಲಾವಣೆಗೆ ಅಸಲಿ ಕಾರಣವೇನು?

ಕಳೆದ ಕೆಲವು ವರ್ಷಗಳಿಂದ ಸುರಕ್ಷತೆಯ ದೃಷ್ಟಿಯಿಂದ 'ಚಲಿಸುವ ರೈಲಿನಲ್ಲಿ ಯಾವುದೇ ಕಾರಣಕ್ಕೂ ಬೆಂಕಿ ಬಳಸಿ ಅಡುಗೆ ಮಾಡುವಂತಿಲ್ಲ' ಎನ್ನುವ ಕಟ್ಟುನಿಟ್ಟಿನ ನಿಯಮವಿತ್ತು. ಆದರೆ ಇತ್ತೀಚಿನ ಮಧ್ಯಪ್ರಾಚ್ಯ (Middle East) ಬಿಕ್ಕಟ್ಟಿನ ಪರಿಣಾಮವಾಗಿ, ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ.

Indian Railways

ಫೆಬ್ರವರಿ ತಿಂಗಳಾಂತ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದಾಗ ಜಾಗತಿಕ ಇಂಧನ ಸರಪಳಿ ಸಂಪೂರ್ಣ ಬಿಕ್ಕಟ್ಟಿಗೆ ಸಿಲುಕಿತು. ಪಶ್ಚಿಮ ಏಷ್ಯಾದ ತೈಲ ಮತ್ತು ಅನಿಲದ ಪ್ರಮುಖ ಸಾಗಣೆ ಮಾರ್ಗವಾದ 'ಹರ್ಮುಜ್ ಜಲಸಂಧಿ'ಯಲ್ಲಿ ಸರಕು ಸಾಗಣೆ ಸ್ಥಗಿತಗೊಂಡಿದ್ದರಿಂದ, ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಪೂರೈಕೆಗೆ ಭಾರಿ ಹೊಡೆತ ಬಿದ್ದಿದೆ. ದಿನಕ್ಕೆ ಬರೋಬ್ಬರಿ 1,000 ಸಿಲಿಂಡರ್‌ಗಳನ್ನು ನೆಚ್ಚಿಕೊಂಡಿದ್ದ ಐಆರ್‌ಸಿಟಿಸಿಯಂತಹ ಬೃಹತ್ ಸಂಸ್ಥೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಆಗಸ್ಟ್‌ನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಿಸ್ಟಂ ಚೇಂಜ್; 40 ವರ್ಷಗಳ ಹಳೇ ವ್ಯವಸ್ಥೆಗೆ ಬ್ರೇಕ್, ಜಾರಿಯಾಗ್ತಿದೆ AI ಮ್ಯಾಜಿಕ್
ಆಗಸ್ಟ್‌ನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಿಸ್ಟಂ ಚೇಂಜ್; 40 ವರ್ಷಗಳ ಹಳೇ ವ್ಯವಸ್ಥೆಗೆ ಬ್ರೇಕ್, ಜಾರಿಯಾಗ್ತಿದೆ AI ಮ್ಯಾಜಿಕ್

ಈ ಸಮಸ್ಯೆಗೆ ಪರ್ಯಾಯವಾಗಿ ಮತ್ತು ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲು ರೈಲ್ವೆ ಇಲಾಖೆ ಈಗ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗೆ (Induction Cooking) ಶರವೇಗದಲ್ಲಿ ಬದಲಾಗುತ್ತಿದೆ. ಇದರ ಭಾಗವಾಗಿ, ರೈಲುಗಳಲ್ಲಿ ಆಹಾರ ಪೂರೈಕೆಗಾಗಿ ಬಳಸುವ ಪ್ಯಾಂಟ್ರಿ ಕಾರುಗಳು ಹಾಗೂ ವಿವಿಧ ಬೇಸ್ ಕಿಚನ್‌ಗಳಲ್ಲಿ ಈಗ 'ಇಂಡಕ್ಷನ್ ಅಡುಗೆ ವ್ಯವಸ್ಥೆಯನ್ನು' ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಅಡುಗೆ ಮನೆಯ ಲೇಟೆಸ್ಟ್ ಅಂಕಿ-ಅಂಶಗಳು:

17 ಲಕ್ಷ: ಇದು ಐಆರ್‌ಸಿಟಿಸಿ (IRCTC) ಮೂಲಕ ಪ್ರತಿದಿನ ಆಹಾರ ಪಡೆದುಕೊಳ್ಳುವ ಒಟ್ಟು ಪ್ರಯಾಣಿಕರ ಸಂಖ್ಯೆಯಾಗಿದೆ.

1,400 ರೈಲುಗಳು: ದೇಶದ ಕನಿಷ್ಠ 1,400 ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರಿಗೆ ಪ್ಯಾಂಟ್ರಿ ಕಾರ್ ಮೂಲಕ ಆಹಾರ ಒದಗಿಸಲಾಗುತ್ತಿದೆ.

SWR: ಪ್ರಯಾಗರಾಜ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿಯಿಂದ ಜೂನ್, ಜುಲೈ ತಿಂಗಳಲ್ಲಿ ವಿಶೇಷ ರೈಲು, ವೇಳಾಪಟ್ಟಿ
SWR: ಪ್ರಯಾಗರಾಜ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿಯಿಂದ ಜೂನ್, ಜುಲೈ ತಿಂಗಳಲ್ಲಿ ವಿಶೇಷ ರೈಲು, ವೇಳಾಪಟ್ಟಿ

60% ರೈಲು ನಿಲ್ದಾಣಗಳು: ದೇಶಾದ್ಯಂತ ಇರುವ ರೈಲು ನಿಲ್ದಾಣಗಳ ಪೈಕಿ ಈಗಾಗಲೇ ಶೇ. 60 ರಷ್ಟು ಬೇಸ್ ಕಿಚನ್‌ಗಳನ್ನು (ಪ್ರಮುಖ ಅಡುಗೆ ಮನೆಗಳು) ಸಂಪೂರ್ಣವಾಗಿ ವಿದ್ಯುದ್ದೀಕರಣಗೊಳಿಸಲಾಗಿದೆ.

1,000 ಸಿಲಿಂಡರ್‌ಗಳು: ವಿದ್ಯುತ್ ಆಧಾರಿತ ವ್ಯವಸ್ಥೆಗೆ ಬದಲಾಗುವ ಮುನ್ನ, ರೈಲ್ವೆ ಇಲಾಖೆಯ ದೈನಂದಿನ ಅಡುಗೆ ಅಗತ್ಯಗಳಿಗಾಗಿ ಪ್ರತಿದಿನ ಬರೋಬ್ಬರಿ 1,000 ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಬೇಕಾಗುತ್ತಿದ್ದವು.

ರೈಲು ನಿಲ್ದಾಣಗಳಲ್ಲೂ ಜಾರಿ: ಕೇವಲ ಪ್ಯಾಂಟ್ರಿಗಷ್ಟೇ ಸೀಮಿತವಲ್ಲ!

ಈ ಹೊಸ ಬದಲಾವಣೆಯು ಕೇವಲ ಚಲಿಸುವ ರೈಲುಗಳ ಪ್ಯಾಂಟ್ರಿ ಬೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ನೀವು ಪ್ರಮುಖ ರೈಲ್ವೆ ಪ್ಲಾಟ್‌ಫಾರ್ಮ್‌ಗಳ ಕಡೆ ಹೆಜ್ಜೆ ಇಟ್ಟರೆ, ಅಲ್ಲಿ ಗ್ಯಾಸ್ ಒಲೆಗಳ ಬದಲಿಗೆ ಇಂಡಕ್ಷನ್ ಕಾಯಿಲ್‌ಗಳು ಸದ್ದು ಕೇಳಿಬರುತ್ತಿದೆ. ಐಆರ್‌ಸಿಟಿಸಿ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ಉಪಾಹಾರ ಗೃಹಗಳಲ್ಲೂ ಕಡ್ಡಾಯವಾಗಿ ವಿದ್ಯುತ್ ಸ್ಟೌ ಬಳಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಲಭ್ಯವಿರುವ ಸೀಮಿತ ಎಲ್‌ಪಿಜಿಯನ್ನು ಕೇವಲ ಪ್ರಮುಖ ಬೇಸ್ ಕಿಚನ್‌ಗಳಿಗೆ ಆದ್ಯತೆಯ ಮೇಲೆ ಒದಗಿಸಲು ರೈಲ್ವೆ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+